ದರ್ಶನ್ ಮನುಷ್ಯನ ರಾಕ್ಷಸನಾ?: ವಿಡಿಯೋ ನೋಡಿ ದಂಗಾದ ಸಿಎಂ ಸಿದ್ದರಾಮಯ್ಯ

ದರ್ಶನ್ ಮನುಷ್ಯನ ರಾಕ್ಷಸನಾ?: ವಿಡಿಯೋ ನೋಡಿ ದಂಗಾದ ಸಿಎಂ ಸಿದ್ದರಾಮಯ್ಯ

Share

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ನ ಕ್ರೌರ್ಯದ ಒಂದೊಂದೇ ಮುಖ ಅನಾವರಣಗೊಳ್ಳುತ್ತಿದೆ.

ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿರುವ ವಿಡಿಯೋ ಲಭ್ಯವಾಗಿದ್ದು, ಸಿಎಂ ಸಿದ್ದರಾಮಯ್ಯ ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗುತ್ತಿದೆ.ನಟ ದರ್ಶನ್ ಬಂಧನಕ್ಕೆ ಒಳಗಾಗುವ ಮೊದಲು ಆತ ಎಸಗಿದ್ದ ಕೃತ್ಯದ ವಿಡಿಯೋಗಳನ್ನು ಅಧಿಕಾರಿಗಳು ಸಿಎಂ ಸಿದ್ದರಾಮಯ್ಯಗೆ ತೋರಿಸಿದ್ದರು. ಈ ವೇಳೆ ವಿಡಿಯೋ ನೋಡಿ ದಂಗಾದ ಸಿಎಂ, ದರ್ಶನ್ ಮನುಷ್ಯನಾ ಅಥವಾ ರಾಕ್ಷಸನಾ ಎಂದು ಪ್ರಶ್ನಿಸಿದ್ದರಂತೆ.ಬೆಂಗಳೂರು ಪೊಲೀಸ್ ಕಮಿಷನರ್ ದರ್ಶನ್ ವಿಡಿಯೋ ತೋರಿಸಿ ಸಿಎಂ ಬಳಿ ಅನುಮತಿ ಪಡೆದು ದರ್ಶನ್ ರನ್ನು ಬಂಧಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.


Share