ಲಗ್ಗೇಜ್ ನಲ್ಲಿ ಬಾಂಬ್ ಇದೆ ಎಂದು ಹುಸಿ ಹೇಳಿಕೆ: ಬೆಂಗಳೂರು ಏರ್ ಪೋರ್ಟ್ ನಲ್ಲಿ ವೃದ್ಧನಿಗೆ ವಿಮಾನ ಹತ್ತಲು ಬಿಡದ ಸಿಬ್ಬಂದಿ

ಲಗ್ಗೇಜ್ ನಲ್ಲಿ ಬಾಂಬ್ ಇದೆ ಎಂದು ಹುಸಿ ಹೇಳಿಕೆ: ಬೆಂಗಳೂರು ಏರ್ ಪೋರ್ಟ್ ನಲ್ಲಿ ವೃದ್ಧನಿಗೆ ವಿಮಾನ ಹತ್ತಲು ಬಿಡದ ಸಿಬ್ಬಂದಿ

Share

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಿಂದ ದುಬೈಗೆ ತೆರಳುತ್ತಿದ್ದ 81ರ ಹರೆಯದ ಪ್ರಯಾಣಿಕರೊಬ್ಬರು ಮೊನ್ನೆ ಸೋಮವಾರ ವಿಮಾನದಲ್ಲಿ ದಿನನಿತ್ಯದ ತಪಾಸಣೆ ವೇಳೆ ತಮ್ಮ ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಏರ್‌ಲೈನ್‌ ಎಕ್ಸಿಕ್ಯೂಟಿವ್‌ಗೆ ಹೇಳಿದಾಗ ವಿಮಾನ ಹತ್ತಲು ಬಿಡಲಿಲ್ಲ. ವಿಮಾನ ನಿಲ್ದಾಣದ ಪೊಲೀಸರು ಆತನ ವಯೋವೃದ್ಧರ ವಿರುದ್ಧ ನಾನ್ ಕಾಗ್ನೈಸಬಲ್ ವರದಿಯನ್ನು (NCR) ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಅಂಜನಾಪುರದ ನಿವಾಸಿ ಸಿ ಕೃಷ್ಣರಾಜ್ ಎಂಬವರು ಎಮಿರೇಟ್ಸ್ ಇಕೆ-565 ವಿಮಾನದಲ್ಲಿ ದುಬೈಗೆ ಪ್ರಯಾಣಿಸುತ್ತಿದ್ದರು, ಅದು ಟರ್ಮಿನಲ್ 1 ರಿಂದ ಬೆಳಗ್ಗೆ 10.35 ಕ್ಕೆ ಟೇಕ್ ಆಫ್ ಆಗಬೇಕಿತ್ತು.ಬೆಳಗ್ಗೆ 8.10 ರ ಸುಮಾರಿಗೆ ನಿರ್ಗಮಿಸುವ ವಿಮಾನದಲ್ಲಿ ಪ್ರಯಾಣಿಕರ ಲಗ್ಗೇಜ್ ಗಳನ್ನು ತಪಾಸಣೆ ನಡೆಯುತ್ತಿರುವಾಗ ಈ ಘಟನೆ ನಡೆದಿದೆ. ಸೆಲ್ಫ್ ಬ್ಯಾಗೇಜ್ ಡ್ರಾಪ್ ಕೌಂಟರ್‌ನಲ್ಲಿ, ಏರ್‌ಲೈನ್ ಎಕ್ಸಿಕ್ಯೂಟಿವ್ ತನ್ನ ಬ್ಯಾಗ್‌ನಲ್ಲಿ ಏನಿದೆ ಎಂದು ಕೇಳಿದರು. ಅದಕ್ಕೆ ವೃದ್ಧರು ಸಿಟ್ಟಿನಿಂದ ಬಾಂಬ್ ಇದೆ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಅದು ಇತರ ಪ್ರಯಾಣಿಕರಲ್ಲಿ ಆತಂಕ ಉಂಟುಮಾಡಿತು.

ಏರ್ ಲೈನ್ಸ್ ಎಕ್ಸಿಕ್ಯೂಟಿವ್ ತಕ್ಷಣವೇ ವೃದ್ಧರಿಕೆ ಎಚ್ಚರಿಕೆ ನೀಡಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ಕರೆದರು. ನಂತರ ವೃದ್ಧ ಪ್ರಯಾಣಿಕರನ್ನು ವಶಕ್ಕೆ ಪಡೆದು ವ್ಯಕ್ತಿ ಮತ್ತು ಸಾಮಾನುಗಳನ್ನು ತಪಾಸಣೆ ನಡೆಸಲಾಯಿತು. ಇದೊಂದು ಹುಸಿ ಹೇಳಿಕೆ ಎಂದು ನಂತರ ಗೊತ್ತಾಯಿತು.

ವೃದ್ಧ ಪ್ರಯಾಣಿಕ ಕೃಷ್ಣರಾಜ್ ಅವರನ್ನು ವಿಮಾನ ಹತ್ತಲು ಬಿಡಲಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಮತ್ತೊಂದು ಮೂಲ ತಿಳಿಸಿತು.

ಎಮಿರೇಟ್ಸ್‌ನ ಏರ್‌ಪೋರ್ಟ್ ಸರ್ವೀಸಸ್ ಅಧಿಕಾರಿ ನಿರುಪಮಾ ಎಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 505 (1) (B) ಅಡಿಯಲ್ಲಿ ದೂರು ದಾಖಲಿಸಲಾಗಿದೆ, ಇದು ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆಯನ್ನು ಉಂಟುಮಾಡುವ ಉದ್ದೇಶದಿಂದ ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧಕ್ಕೆ ಸಂಬಂಧಿಸಿದ ಕೇಸು ಆಗಿದೆ.

ಕಳೆದ ತಿಂಗಳು, ಪುಣೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಭದ್ರತಾ ತಪಾಸಣೆಯ ಸಮಯದಲ್ಲಿ ತನ್ನ ಸಾಮಾನು ಸರಂಜಾಮುಗಳಲ್ಲಿ ಬಾಂಬ್ ಇದೆ ಎಂದು ಹೇಳಿದ್ದಕ್ಕಾಗಿ ಕೇಸು ದಾಖಲಾಗಿತ್ತು. ಈ ವರ್ಷದ ಆರಂಭದಿಂದಲೂ, ವಿಮಾನ ನಿಲ್ದಾಣವು ಪ್ರಯಾಣಿಕರಿಂದ ನಕಲಿ ಬಾಂಬ್ ಕರೆಗಳು ಅಥವಾ ಅನಾಮಧೇಯ ಹುಸಿ ಬೆದರಿಕೆಗಳನ್ನು ಪದೇ ಪದೇ ಸ್ವೀಕರಿಸುತ್ತಿದೆ. ಕಳೆದ ವಾರ ಇಂಡಿಗೋ ವಿಮಾನವನ್ನು ಹೈಜಾಕ್ ಮಾಡುವ ಬೆದರಿಕೆಯೂ ಬಂದಿತ್ತು.


Share