‘ಸಿದ್ದು ವಿಶ್ವಕರ್ಮ’ರಿಗೆ ಒಲಿದ ರಾಜ್ಯ ಪ್ರಶಸ್ತಿ
ಬೆಂಗಳೂರಿನ ಸೂರ್ಯ ಫೌಂಡೇಶನ್ ಹಾಗೂ ಇಂಡೊಗ್ಲೋಬ್ ಕಾಲೇಜಿನ ಸಹಭಾಗಿತ್ವದಲ್ಲಿ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಯಾದಗಿರಿಯ ಸಿದ್ದು ವಿಶ್ವಕರ್ಮ ರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹತ್ತಿಕುಣಿ ಮೂಲದವರಾದ ಸಿದ್ದು ವಿಶ್ವಕರ್ಮ ಯಾದಗಿರಿ ಜಿಲ್ಲೆಯ ಯಡ್ಡಳ್ಳಿ ಗ್ರಾಮದಲ್ಲಿ ಶಾಲೆಯ ಅತಿಥಿ ಶಿಕ್ಷಕರಾಗಿದ್ದು ಹಾಗೂ ಹಲವು ರೀತಿಯ ಸಮಾಜಸೇವೆ,ಪರಿಸರ ಸಂರಕ್ಷಣೆ, ಬಡ ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ ನೀಡುವ ಮತ್ತು ಮಕ್ಕಳ ಶಿಕ್ಷಣಮಟ್ಟ ಸುಧಾರಣೆಗೆ ಹಲವು ವರ್ಷಗಳಿಂದ ಶ್ರಮಿಸುತ್ತಿದ್ದಾರೆ.ಇವರ ಸೇವೆಯನ್ನು ಗುರುತಿಸಿ ಬೆಂಗಳೂರಿನ ಸೂರ್ಯ ಫೌಂಡೇಶನ್ ಸಂಸ್ಥೆ 2024 ರ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ, ಈ ವಿಚಾರವಾಗಿ ಜಿಲ್ಲೆಯ ಖ್ಯಾತ ಉದ್ಯಮಿ ಮಲ್ಲಿಕಾರ್ಜುನ ಶಿರಗೋಳ,ಸಂಗಮೇಶ್ ಕೆಂಭಾವಿ,ರಾಘವೇಂದ್ರ ಖಾನಾಪುರ,ಸಿದ್ದು ಅವರ ಸಹೋದರ ಹಾಗೂ ಸಹೋದರಿ, ಊರಿನ ಪ್ರಮುಖರಾದ ಶರಣು ಗಡೇದ್,ಸ್ನೇಹಿತರಾದ ದೇವು ಖಂಡಪ್ಪನೋರ್, ಬಿಬಿಕೆಡಿ ಕಲ್ಯಾಣ ಕರ್ನಾಟಕ ಅದ್ಯಕ್ಷರಾದ ರವಿ ರಾಠೋಡ, ಯಡ್ಡಳ್ಳಿಶಾಲೆಯ ಮುಖ್ಯ ಗುರುಗಳಾದ ಹಾಗೂ ಜಿಲ್ಲಾ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷರಾದ ಶ್ರೀ ಬಸವರಾಜ ಕೆರುಟಿಗಿ ಸರ್ ಸಂತಸ ವ್ಯಕ್ತಪಡಿಸಿದ್ದಾರೆ.