ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಂಗನವಾಡಿಪಾತ್ರ ಹಿರಿದಾದುದು: ಶಿವಾನಂದ ಹೆಗಡೆ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಂಗನವಾಡಿಪಾತ್ರ ಹಿರಿದಾದುದು: ಶಿವಾನಂದ ಹೆಗಡೆ

Share

ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಂಗನಾಡಿಗಳ ಪಾತ್ರ ಹಿರಿದಾದುದು: ಶಿವಾನಂದ ಹೆಗಡೆ
ಕುಮಟಾ: ಅಂಗನವಾಡಿ ಕೇಂದ್ರಗಳು ಶಿಕ್ಷಣ ವ್ಯವಸ್ಥೆಯ ಅಡಿಗಲ್ಲು, ಇಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಪೂರಕ ಮತ್ತು ಪ್ರೇರಕವಾದ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಕೆ ಡಿ ಸಿ ಬ್ಯಾಂಕ್ ನಿರ್ದೇಶಕ ಹಾಗೂ ಮಾಜಿ ಜಿ.ಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಹೇಳಿದರು.ತಾಲೂಕಿನ ಸೋಪ್ಪಿನ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಬಂಗಣೆಯಲ್ಲಿ ಕುಮಟಾ ಕನ್ನಡ ಸಂಘ ಹಾಗೂ ಬಾಲ ವಿಕಾಸ ಸಮಿತಿ ಬಂಗಣೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಗುರು ಮಾತೆಯರಿಗೆ ವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸಂಸ್ಕøತಿ ಉಳಿಯಬೇಕಾದರೆ ನಿಮ್ಮಂತ ನಿಸ್ವಾರ್ಥ ಮಹಿಳೆಯರಿಂದ ಮಾತ್ರ ಸಾಧ್ಯವಿದೆ. ಮಕ್ಕಳ ಸರ್ವತೊಮುಖ ಏಳ್ಗೆಯಲ್ಲಿ ಅಂಗನವಾಗಡಿ ಕೇಂದ್ರಗಳ ಪಾತ್ರ ಹಿರಿದಾದದುದು. ಬಾಲ್ಯಾವಸ್ಥೆಯಲ್ಲಿರುವ ಮಗುವನ್ನು ಸಂಸ್ಕಾರಯುತವಾಗಿ ಬೆಳೆಸಿ ಅವರಲ್ಲಿ ಜ್ಞಾನ ದೀವಿಗೆಯನ್ನು ಹೊತ್ತಿಸಿ ಸತ್ಪ್ರಜೆಗಳನ್ನಾಗಿಸುವ ಕಾರ್ಯ ಮಾಡುವುದು ನಿಮ್ಮಂತ ಮಾತೆಯರಿಂದ ಮಾತ್ರ ಸಾಧ್ಯ. ಮಹಿಳೆಯರು ಮತ್ತು ಮಕ್ಕಳಿಗೆ ಅಗತ್ಯವಾದ ಪೋಷಕಾಂಶವನ್ನು ನೀಡುವ ಹಾಗೂ ಅವರ ಆರೋಗ್ಯವನ್ನು ಕಾಯ್ದುಕೊಳ್ಳುವುದು ಮತ್ತು ಸರಿಯಾದ ಆರೋಗ್ಯಪೂರ್ಣವಾದ ಮಕ್ಕಳನ್ನು ಹೊಂದುವುದನ್ನೂ ಕೂಡ ಈ ಅಂಗನವಾಡಿ ಕೇಂದ್ರಗಳಲ್ಲಿ ಮಾಡಲಾಗುತ್ತದೆ.ಸಂಸ್ಕ್ರತಿ ಉಳಿಯಬೇಕಾದರೆ ನಿಮ್ಮಂತ ಮಾತೆಯರಿಂದ ಮಾತ್ರ ಸಾಧ್ಯ.ಅಂಗನವಾಡಿ ಎಂಬುದು ಶಿಕ್ಷಣ ವ್ಯವಸ್ಥೆಯ ಅಡಿಗಲ್ಲು. ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ನೀವುಗಳು ದೇಶದ ಆಸ್ತಿ. ಅಂಗನವಾಡಿ ಕೇಂದ್ರಗಳಿಂದಲೇ ಈ ದೇಶದ ಅಭಿವೃದ್ದಿ ಆಗುವಂತದ್ದು. ಕೇವಲ ಶಿಕ್ಷಣದಿಂದ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯವಿಲ್ಲ. ಶಿಕ್ಷಣ ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿಸ ಬಹುದು ಆದರೆ ಶಿಕ್ಷಣದ ಜೊತೆಯಲ್ಲಿ ಸಂಸ್ಕøತಿ ಇದ್ದಾಗ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ. ಇಂತಹ ಜ್ಞಾನ ದೇಗುಲಗಳಾದ ಅಂಗನವಾಡಿ ಕೇಂದ್ರಗಳಲ್ಲಿ ನಿಶ್ವಾರ್ಥತೆಯಿಂದ ಕಾರ್ಯನಿರ್ವಹಿಸುತ್ತಿರುವ ನಿಮ್ಮನ್ನು ಸರ್ಕಾರ ಹಾಗೂ ಸಮುದಾಯ ಗೌರವಯುತವಾಗಿ ನಡೆಸಿಕೊಂಡು ಆರ್ಥಿಕವಾಗಿ ನೀವುಗಳು ಸದೃಡರಾಗುವಂತ ವಾತಾವರಣ ನಿರ್ಮಾಣವಾಗಬೇಕು. ಈ ದಿಸೆಯಲ್ಲಿ ಬರಲಿರುವ ದಿನಗಳಲ್ಲಿ ನನ್ನಿಂದಾಗುವ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮುಖ್ಯ ಅತಿಥಿ ಸಿ.ಡಿ.ಪಿ.ಓ ಶೀಲಾ ಪಟೇಲ್ ಮಾತನಾಡಿ ನಮ್ಮ ಅಂಗನವಾಡಿ ಕೇಂದ್ರಗಳು ಶಿಕ್ಷಣ ವ್ಯವಸ್ಥೆಯ ತಳಪಾಯವಿದ್ದಂತೆ. ಅವರು ಉತ್ತಮವಾಗಿ ಕೆಲಸ ಮಾಡಿದಾಗ ಉತ್ತಮ ಸಮಾಜ ನಿಮಾರ್ಣಮಾಡಲು ಸಾಧ್ಯವಿದೆ. ಈ ದಿಸೆಯಲ್ಲಿ ನಮ್ಮ ಅಂಗವಾಡಿ ಕೇಂದ್ರಗಳ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಗ್ರಾಮೀಣ ಪ್ರದೇಶಗಳಲ್ಲೂ ಸೂಕ್ತ ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಂಡು ನಿರಂತರವಾಗಿ ದುಡಿದ ನಮ್ಮ ಕಾರ್ಯಕರ್ತೆಯರನ್ನು ಗೌರವಿಸಿ ಸನ್ಮಾನಿಸುವ ನಿಮ್ಮೆಲ್ಲರ ಕಾರ್ಯ ಶ್ಲಾಘನೀಯ. ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸಿಕೊಡುವ ಜೊತೆಯಲ್ಲಿ ನಿಮ್ಮೆಲ್ಲರ ನೋವು ನಲಿವಿನಲ್ಲಿ ನಾನು ಕೈಜೋಡಿಸುವೆ. ನಮ್ಮ ಕಾರ್ಯಕರ್ತೆಯರನ್ನು ಗುರುತಿಸಿ ಗೌರವಿಸುವ ಕುಮಟಾ ಕನ್ನಡ ಸಂಘದ ಇಂತಹ ಸಮಾಜಮುಖಿ ಕಾರ್ಯಗಳು ಮುಂದುವರಿಯಲಿ ಎಂದರು. ಕುಮಟಾ ಕನ್ನಡ ಸಂಘದ ಆಧ್ಯಕ್ಷ ಹಾಗೂ ಪತ್ರಕರ್ತ ಸದಾನಂದ ದೇಶಭಂಡಾರಿ ಮಾತನಾಡಿ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರು ಅತ್ಯಲ್ಪ ಸಂಭಳ ಪಡೆದರೂ ಸಂತೋಷವಾಗಿ ನಿಶ್ವಾರ್ಥ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಸಂಕಷ್ಟಗಳಿಗೆ ಸರ್ಕಾರ ಹಾಗೂ ಸಮುದಾಯ ಸ್ಪಂಧಿಸಬೇಕು. ಬರಲಿರುವ ದಿನಗಳಲ್ಲಿ ನಿಮ್ಮೆಲ್ಲ ತಾಯಿಂದಿರನ್ನು ಗುರುತಿಸಿ
ಗೌರವಿಸುವ ಕಾರ್ಯವನ್ನು ಕುಮಟಾ ಕನ್ನಡ ಸಂಘ ಮಾಡಲಿದೆ ಎಂದರು. ಈ ಸಂದರ್ಭದಲ್ಲಿ ನಿವೃತ್ತಿ ಅಂಚಿನಲ್ಲಿರುವ ಹಾಗೂ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯರಾದ ಉಷಾ ನಾಯ್ಕ,ಪದ್ಮಾವತಿ ನಾಯ್ಕ,ದಾಕ್ಷಾಣಿ ನಾಯ್ಕ,ಕುಸುಮಾ ರವೀಂದ್ರ ನಾಯ್ಕ ಕಡತೋಕಾ,ಚಂದ್ರಿಕಾ ಜಿ ಶೆಟ್ಟಿ ಕೆಕ್ಕಾರ,ಕುಸುಮಾ ಉದಯ ನಾಯ್ಕ ಕುಮಟಾ, ಅಶ್ವಿನಿ ಉದಯ ಭಟ್ಟ, ಶಶಿಕಲಾ ನಾಯ್ಕ,ವಿಜಯಾ ನಾಯ್ಕ,ಕಲಾವತಿ ಆರ್ ಮರಾಠಿ ಇವರನ್ನು ಆತ್ಮೀಯವಾಗಿ ಗೌರವಿಸಲಾಯಿತು.ಕೆ.ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಎನ್.ಭಟ್ಟ,ಗ್ರಾ.ಪಂ ಸದಸ್ಯ ಈಶ್ವರ ಮರಾಠಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಗಣಪತಿ ಮರಾಠಿ,ಹಿರಿಯರಾದ ಶೇಷ ಜಾಯು ಮರಾಠಿ,ಕುಮಾರಿ ಮರಾಠಿ ತಲಗೋಡ,ವಿಮಲಾ ಮರಾಠಿ,ಸುರೇಶ ಮರಾಠಿ,ಷಣ್ಮುಮುಖ ಮರಾಠಿ, ಬಾಲ ವಿಕಾಶ ಸಮಿತಿ ಅಧ್ಯಕ್ಷೆ ಯಶೋಧಾ ಮರಾಠಿ ಇನ್ನಿತರರು ಇದ್ದರು.ಕುಮಟಾ ಕನ್ನಡ ಸಂಘದ ಉಪಾಧ್ಯಕ್ಷ ಉದಯ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಪ್ರಶಸ್ತಿ ವಿಜೇತ ಅಂಗನವಾಡಿ ಶಿಕ್ಷಕಿ ಪದ್ಮಾವತಿ ನಾಯ್ಕ ವಂದಿಸಿದರು. ಅಶ್ವಿನಿ ಉದಯ ಭಟ್ಟ ಸ್ವಾಗತಿಸಿ ಪ್ರಾರ್ಥಿಸಿದರು.


Share