ಸರ್ಕಾರಿ ನೌಕರಿ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಪ್ರಕರಣ ಐವರ ವಿರುದ್ಧ ದೂರು…

ಸರ್ಕಾರಿ ನೌಕರಿ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಪ್ರಕರಣ ಐವರ ವಿರುದ್ಧ ದೂರು…

Share

ಕುಮಟಾ :-ಸರಕಾರಿ ನೌಕರಿ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆದು ಸುಳ್ಳು ಆಶ್ವಾಸನೆಗಳನ್ನು ನೀಡಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಟಾ ಪೊಲೀಸರು ಇನ್ನೂ ಐವರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಕುಮಟಾ ತಾಲೂಕಿನ ಅಘನಾಸಿನಿ ಮೂಲದ ನಿವಾಸಿ ಮಾಲಿನಿ ಗಣಪತಿ ಅಂಬಿಗ ಹಾಗೂ ಪಟ್ಟಣದ ಪೈರುಗದ್ದೆ ನಿವಾಸಿಯಾದ ಶ್ರೀಧರ್ ಕುಮಟಾಕಾರ್ ಎನ್ನುವವರು ಸೇರಿ ಕುಮಟಾ ಮಹಾಲಕ್ಷ್ಮೀ ಕಂಪರ್ಟ್ ನಲ್ಲಿ ಬಾಡಿಗೆ ಅಂಗಡಿ ಪಡೆದು ಗಣಪತಿ ಜಾಬ್ ಲಿಂಕ್ ಎನ್ನುವ ಕಚೇರಿಯನ್ನು ತೆರೆದಿದ್ದರು.ಈ ಕಚೇರಿಯ ನೆಪದಲ್ಲಿ ಕೆಲಸಕ್ಕಾಗಿ ಹುಡುಕುತ್ತಿದ್ದವರಿಗೆ ಕೆಲಸ ಕೊಡಿಸುವುದಾಗಿ ಹಣ ಪಡೆದಿರುವ ಆರೋಪ ಕೇಳಿಬಂದಿತ್ತು.ಈ ಸಂಬಂಧ ಮಾಲಿನಿ ಅಂಬಿಗ ಹಾಗೂ ಶ್ರೀಧರ್ ಕುಮಟಾಕರ್ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕುಮಟಾ ಪೊಲೀಸರು ಇಬ್ಬರನ್ನು ತನಿಖೆಗೆ ಒಳಪಡಿಸಿದರು. ತನಿಕೆಯಲ್ಲಿ ಕೆಲವರಿಗೆ ನೌಕರಿ ಕೊಡಿಸುವ ಸಂಬಂಧ ಅವರಿಂದ ಲಕ್ಷಾಂತರ ರೂಪಾಯಿ ಪಡೆದು ಪ್ರಕರಣದಲ್ಲಿರುವ ಇನ್ನೂ ಐದು ಆರೋಪಿಗಳಿಗೆ ನೀಡಿರುವುದಾಗಿ ಮಾಹಿತಿ ನೀಡಿದ್ದರು. ಆದರೆ ಈ ಬಗ್ಗೆ ಪೊಲೀಸರು ಐವರ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮಾಲಿನಿ ಅಂಬಿಗ ಅವರು ಕುಮಟಾ ಜೆಎಂಎಫ್ ಸಿ ನ್ಯಾಯಾಲದದಲ್ಲಿ ಖಾಸಗಿ ದೂರನ್ನು ಪುರಸ್ಕರಿಸಿದ ನ್ಯಾಯಾಲಯ ನೌಕರಿ ಕೊಡಿಸುವುದಾಗಿ ಮಾಲಿನಿ ಅಂಬಿಗ ಅವರಿಂದ ಹಣ ಪಡೆದ. ಐವರು ಆರೋಪಿಗಳಾದ ಮಿರ್ಜಾನ್ ನಿವಾಸಿಗಳಾದ ಶ್ರೀಧರ್ ನಾಯ್ಕ್, ಗೋಪಾಲಕೃಷ್ಣ ನಾಯ್ಕ್, ಶಶಿಕಲಾ ಗೋಪಾಲ್ ಕೃಷ್ಣ ನಾಯ್ಕ್, ಬಾಡದ ಸತೀಶ್ ಪಟಗಾರ,ಮತ್ತು ಬೆಂಗಳೂರಿನ ಧರ್ಮೆಂದ್ರ ಕುಲಕರ್ಣಿ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ಕೋರ್ಟ್ ಸೂಚಿಸಿದೆ.ಅದರಂತೆ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸ್ ಠಾಣೆ ಪಿಎಸ್ಐ ಸುನೀಲ್ ಬಂಡಿವಡ್ಡರ್ ತನಿಖೆ ಕೈಗೊಂಡಿದ್ದಾರೆ.ಈ ಪ್ರಕರಣದಲ್ಲಿ ಮಾಲಿನಿ ಅಂಬಿಗ ಅವರಿಂದ 3.20 ಲಕ್ಷ ರೂಪಾಯಿಗಳನ್ನು ಆರೋಪಿತರು ಪಡೆದುಕೊಂಡಿದ್ದಲ್ಲದೇ 11 ನರ್ಸಿಂಗ್ ವಿದ್ಯಾರ್ಥಿಗಳಿಂದ ತಲಾ 2 ಲಕ್ಷಕ್ಕೂ ಅಧಿಕ ಹಣವನ್ನು ಆರೋಪಿತರಾದ ಶಶಿಕಲಾ ನಾಯ್ಕ್ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿದ್ದರು. ಅಲ್ಲದೇ ಆರೋಪಿತರಾದ ಶ್ರೀಧರ್ ನಾಯ್ಕ್, ಮತ್ತು ಸತೀಶ್ ಪಟಗಾರ ನಗದು ಮತ್ತು ಫೋನೆಪೇ ಗೂಗಲ್ ಪೇ ಮುಖಾಂತರ ಲಕ್ಷಾಂತರ ಹಣ ಪಡೆದುಕೊಂಡು ನೌಕರಿಯೂ ಕೊಡಿಸದೇ ಹಣವನ್ನು ವಾಪಾಸ್ ನೀಡದೆ ವಂಚನೆ ಮಾಡಿರುವುದಾಗಿ ಎಫ್ ಐ ಆರ್ ನಲ್ಲಿ ಉಲ್ಲೇಖಸಲಾಗಿದೆ.ಈ ಐವರ ಆರೋಪಿಗಳನ್ನು ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದು ಪೊಲೀಸ್ ತನಿಖೆಯ ಬಳಿಕವೇ ಸ್ವಷ್ಟ ಚಿತ್ರಣ ಬೆಳಕಿಗೆ ಬರಬೇಕಿದೆ.


Share