ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ಗೆ “ಕನ್ನಡದ ಕಬ್ಬಿಗ 2024 ಪ್ರಶಸ್ತಿ”

ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ಗೆ “ಕನ್ನಡದ ಕಬ್ಬಿಗ 2024 ಪ್ರಶಸ್ತಿ”

Share

ಕರ್ನಾಟಕ ಕನ್ನಡ ಸಾಹಿತ್ಯ ಲೋಕ ನೆಲಮಂಗಲ. ಸಂಸ್ಥೆಯು ಪಾವಗಡ ಶ್ರೀ ಬಸವಣ್ಣ ದೇವರ ಮಠ ನೆಲಮಂಗಲದಲ್ಲಿ ನಡೆದ ಕವಿಗೋಷ್ಠಿ, ಪುಸ್ತಕ ಬಿಡುಗಡೆಯು, ರಾಷ್ಟ್ರೀಯ ಕನ್ನಡ ಸಾಹಿತ್ಯ ಸಂಭ್ರಮ ಕವಿಗೋಷ್ಠಿ 2024. ಕಾರ್ಯಕ್ರಮದಲ್ಲಿ 9 ವೇದಿಕೆಗಳನ್ನು ಒಳಗೊಂಡಿತ್ತು. 150ಕ್ಕೂ ಹೆಚ್ಚು ಕವಿಗಳು ಕವನ ವಾಚನವನ್ನು ಮಾಡಿದರು.ಎಂಟನೇ ವೇದಿಕೆಯಾದ ವಿಕಟಕವಿ ತೆನಾಲಿ ರಾಮಕೃಷ್ಣ ವೇದಿಕೆಯಲ್ಲಿ ಸಾಹಿತಿ. ಶಿಕ್ಷಕಿ.ಪತ್ರಕರ್ತೆ. ಸಾಮಾಜಿಕ ಚಿಂತಕಿ. ಸಮಾಜ ಸೇವಕಿ. ಸಂಸ್ಥಾಪಕ ಅಧ್ಯಕ್ಷರು ” ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ” ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕವನ ವಾಚನವನ್ನು ಮಾಡಿ, ಕವನ ವಾಚಿಸಿದ ಕವಿಗಳ ಕವನದ ಬಗ್ಗೆ ಅಭಿಪ್ರಾಯವನ್ನು ತಿಳಿಸಿದರು.ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರಿಗೆ ಕನ್ನಡದ ಕಬ್ಬಿಗ 2024 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಾಡುತ್ತಿರುವ ಕನ್ನಡ ಸಾಹಿತ್ಯ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಕಾರ್ಯಕ್ರಮವು ಪ್ರಜಾ ಕವಿ ಏನ್. ಆರ್. ನಾಗರಾಜು. ಅಧ್ಯಕ್ಷರು. ಕರ್ನಾಟಕ ಕನ್ನಡ ಸಾಹಿತ್ಯ ಲೋಕ ನೆಲಮಂಗಲ ನೇತೃತ್ವದಲ್ಲಿ ನಡೆಯಿತು . ಕಾರ್ಯಕ್ರಮದಲ್ಲಿ ಪರಮಪೂಜೆಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ವೇದ ಬ್ರಹ್ಮ ವಿ ಕೆ ಎಸ್ ಮೂರ್ತಿ ಗುರೂಜಿಗಳು ಬೆಂಗಳೂರು. ಇನ್ನೂ ಹಲವಾರು ಅತಿಥಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


Share