ಅಪ್ಪ…!

ಅಪ್ಪ…!

Share

ಅದ್ಭುತ ಅಪ್ಪನ ಪ್ರೀತಿಯ ಮಾತು
ಅಳಿಸಲಾಗದ ಅಪ್ಪಟ ಗುಣಗಳು
ಅಪರೂಪದ ದೇವರು ಇವರು
ಅತ್ಯಂತ ಶ್ರದ್ಧೆ ಉಳ್ಳ ಉತ್ತಮ ಗುಣದವನು

ದೇಹದ ಬಂಡಿ ಸಾಗಲು ಕಲಿಸಿದ
ದೇವರ ರೂಪ ಉಳ್ಳ ಭವ್ಯರತ್ನ
ದಣಿದರು ತಾನು ಬೇಸರಾಗದೆ
ದೇಶದ ಹಿರಿಮೆಯನ್ನು ಗಳಿಸಿದ

ನಡೆದಾಡುವ ದೇವರು ತಂದೆ
ನಡುರಾತ್ರಿಯಲ್ಲಿ ಕೈ ಬಿಡದ ಗುರು
ನನಗೆ ಧೈರ್ಯ ತುಂಬಿದ ಪರಮಾತ್ಮನು
ನನ್ನಲ್ಲಿರುವ ದುರಹಂಕಾರವನ್ನು ಮರಿಸಿದ

ಯಾವ ಆಸೆ ಇಲ್ಲದ ವಜ್ರದ ರತ್ನ
ಯಾರಿಗೂ ಗೊತ್ತಿಲ್ಲದಂತೆ ಕರುಣಿಸಿದ
ಯಾರೆಲ್ಲಾ ದಮ್ಕಿಹಾಕಿದರು ಖುಷಿ ಪಟ್ಟ
ಯಾರಿಗೂ ಸರಿಸಾಟಿ ಇಲ್ಲದ ದೇವರ ನನ್ನಪ್ಪ

ಕು ಮಹಾಂತೇಶ ಖೈನೂರ
ಸಾ//ಯಾತನೂರ


Share