ಸಾವಿನ ಜೊತೆ ಚೆಲ್ಲಾಟ, ಕೋಟ್ಯಾಂತರ ರೂ. ಕೋವಿಡ್ ಹಗರಣ, ೨೧೮ ಕಡತಗಳು ನಾಪತ್ತೆ.

ಸಾವಿನ ಜೊತೆ ಚೆಲ್ಲಾಟ, ಕೋಟ್ಯಾಂತರ ರೂ. ಕೋವಿಡ್ ಹಗರಣ, ೨೧೮ ಕಡತಗಳು ನಾಪತ್ತೆ.

Share

ಬಂಗಾರಪೇಟೆ: ಸರ್ಕಾರಕ್ಕೆ ಮಂಕು ಬೂದಿ ಎರಚಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡಿ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯ ಅಧಿಕಾರಿಯಾಗಿದ್ದ ಎಸ್.ಜಿ.ನಾರಾಯಣಸ್ವಾಮಿ ಅವರ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆಸಿರುವುದು ಬೆಳಕಿಗೆ ಬಂದಿದೆ. ಇದನ್ನು ಕಂಡ ರಾಜ್ಯದ ಜನತೆ ಬೆಚ್ಚಿಬಿದ್ದಿರುವುದಂತೂ ಅಕ್ಷರ ಸಹ ಸತ್ಯ.ಪಟ್ಟಣದ ಅವರ ಕಛೇರಿಯಲ್ಲಿ ಸಾಮಾಜಿಕ ಕಾರ್ಯಕರ್ತ ಎಲ್.ಕೇಶವಮೂರ್ತಿ ಅವರು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿ, ಸರ್ಕಾರಿ ಕೆಲಸ ದೇವರ ಕೆಲಸವೆಂದು ಜನತೆಗೆ ಮಂಕು ಬೂದಿ ಎರಚಿತ ಅಧಿಕಾರಿಗಳು ಕೋಟ್ಯಾಂತರ ರೂ ಹಗರಣ ನಡೆಸಿದ್ದಾರೆ, ಸದರಿ ವಿಷಯಕ್ಕೆ ಮುಖ್ಯ ಲೆಕ್ಕಪತ್ರಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಲಾಯದ ಬೀನಾ.ಕೆ ಅವರು, ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ಸರಿಸುಮಾರು ೩ಕೋಟಿಗೂ ಅಧಿಕ ಭ್ರಷ್ಠಾಚಾರ ನಡೆದಿರುವುದಾಗಿ ವರದಿ ನೀಡಿರುತ್ತಾರೆ, ಆದರೆ ಸರ್ಕಾರ ಭ್ರಷ್ಠ ಅಧಿಕಾರಿಗಳ ಬೆನ್ನಿಗೆ ನಿಂತು ಯಾವುದೇ ಕ್ರಮ ಕೈಗೊಳ್ಳದೇ ಜಾಣ ಕುರುಡು ಪ್ರದರ್ಶಿಸಿರುತ್ತಾರೆ. ಆದರೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನಾನು ಉನ್ನತ ಮಟ್ಟದ ಅಧಿಕಾರಿಗಳಿಗೆ ಮತ್ತೊಮ್ಮೆ ದೂರು ನೀಡಿ ಒತ್ತಡ ಹಾಕಿದ ಪರಿಣಾಮ, ಬ್ರಹ್ಮಾಂಡ ಭ್ರಷ್ಠಾಚಾರ ಬಟಾಬಯಲಾಗಿದ್ದು, ಅಧಿಕಾರಿಗಳ ವಿರುದ್ದ ಎಫ್‌ಐಆರ್ ದಾಖಲಾಗಿದೆ ಎಂದರು.

ಕೋವಿಡ್ ಹಣ ಅಧಿಕಾರಿಗಳ ಬ್ಯಾಂಕ್ ಸ್ವಂತ ಖಾತೆಗೆ:
ಮಾರಾಣಾಂತಿಕ ಕೋವಿಡ್ ಪರಿಣಾಮ ಜನರ ರಕ್ಷಣೆಗಾಗಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆಗೊಳಿಸಿತ್ತು. ಭ್ರಷ್ಠಾಚಾರದ ಬಕ ಪಕ್ಷಿಗಳಂತೆ ಕಾದು ಕುಳಿತಿದ್ದ ಆರೋಗ್ಯ ರಕ್ಷಾ ಸಮಿತಿಯ ಅಧಿಕಾರಿಯಾದ ಎಸ್.ಜಿ.ನಾರಾಯಣಸ್ವಾಮಿ ಅವರು ತನ್ನ ಖಾತೆಗೆ ೮,೨೦ಲಕ್ಷ ಹಾಗೂ ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿ.ಗ್ರೂಪ್ ನೌಕರ ಸೋಮಶೇಖರ್ ೪,೨೩,೬೮೪, ಶ್ರೀನಿವಾಸ್ ೯,೪೨,೦೪೦, ಪ್ರಶಾಂತ್ ೭,೪೦,೮೫೦, ಸಂಜಯ್ ೬೮,೩೦೦, ಆಡಿಟರ್ ಪುರುಷೋತ್ತಮ್ ೧,೨೨,೮೬೪, ಆರೋಗ್ಯ ಮಿತ್ರ ಪ್ರಸನ್ನ ೬೮,೭೯೨, ಮನೋಹರ್ ಬಾಬು ೬೨,೫೫೭, ಕೃಷ್ಣಪ್ಪ ೩,೧೫,೬೭೯, ರೂಗಳನ್ನು ಹಾಗೂ ಇನ್ನಿತರ ನೌಕರರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವುದರ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡAತೆ ಪೊಲೀಸ್‌ರವರಿಗೆ ದೂರು ನೀಡಿರುತ್ತೇನೆ. ಇದರನ್ವಯ ಇವರ ವಿರುದ್ದ ಪ್ರಸ್ತುತ ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ವಿಜಯಕುಮಾರ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿರುತ್ತಾರೆ.

೨೧೮ ಕಡತಗಳ ನಾಪತ್ತೆ, ಹಿಂದಿನ ನಿಗೂಡ ರಹಸ್ಯ:
ಅಧಿಕಾರಿಗಳು ತಮ್ಮ ಭ್ರಷ್ಠಾಚಾರವನ್ನು ಮುಚ್ಚಿಹಾಕುವ ೨೧೮ ಕಡತಗಳನ್ನು ನಾಪತ್ತೆ ಮಾಡಿದ್ದಾರೆ. ಈ ಘಟನೆಗೆ ಸಂಬAಧಪಟ್ಟAತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ಶ್ರೀಲತಾ.ಹೆಚ್.ಟಿ ಅವರು, ತಮ್ಮ ಪ್ರಸ್ತಾವನೆಯಲ್ಲಿ ಸದರಿ ಪ್ರಕರಣವನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಸಂಬAಧಪಟ್ಟ ಅಧಿಕಾರಿಗಳ ವಿರುದ್ದ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶನ ನೀಡಿರುತ್ತಾರೆ. ಆದರೆ ನಾಪತ್ತೆಯಾಗಿರುವ ಕಡತಗಳನ್ನು ಪತ್ತೆಹಚ್ಚುವಲ್ಲಿ ಅಧಿಕಾರಿವರ್ಗ ಸಂಪೂರ್ಣ ವಿಫಲರಾಗಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂಬುವುದು ಇಂದಿಗೂ ನಿಗೂಡ ರಹಸ್ಯವಾಗಿ ಉಳಿದಿದೆ. ಸರ್ಕಾರ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಿ ಪ್ರಾಮಾಣಿಕವಾಗಿ ತನಿಖೆ ನಡೆಸಿದರೆ ಬಹುಕೋಟಿ ಹಗರಣಗಳು ಹೊರಬೀಳುವ ಸಾಧ್ಯತೆ ಇದೆ ಎಂದರು.

ಲೋಕಾಯುಕ್ತರ ಕಾರ್ಯಕ್ಷಮತೆ ಅಭಿನಂದನಾರ್ಹ:
ಸದರಿ ಪ್ರಕರಣಕ್ಕೆ ಸಂಬAಧಪಟ್ಟAತೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಕರ್ನಾಟಕ ಲೋಕಾಯುಕ್ತದಲ್ಲಿ ೩ಕ್ಕೂ ಅಧಿಕ ದೂರು ದಾಖಲು ಮಾಡಿರುತ್ತೇನೆ. ಆದರೆ ನನ್ನ ದೂರುಗಳನ್ನು ಅತ್ಯಂತ ಗೌರವಪೂರ್ವಕವಾಗಿ ಮತ್ತು ಗಂಭೀರವಾಗಿ ಪರಿಗಣಿಸಿದ ಘನ ಲೋಕಾಯುಕ್ತ ಅಧಿಕಾರಿಗಳು ಚುರುಕಿನಿಂದ ತನಿಖೆ ನಡೆಸುತ್ತಿರುವುದು ಅಭಿನಂದನಾರ್ಹವಾಗಿದೆ.

ಕೋಟ್-೧
ಇಲಾಖೆಯಲ್ಲಿ ೨೧೮ ಕಡತಗಳು ನಾಪತ್ತೆಯಾಗಿರುವುದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ತನಿಖೆ ಕಾರ್ಯ ಚುರುಕಿನಿಂದ ಸಾಗುತ್ತಿದ್ದು, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. – ಜಿಲ್ಲಾ ಶಸ್ತçಚಿಕಿತ್ಸಕರು, ಡಾ.ವಿಜಯಕುಮಾರ್

ಕೋಟ್-೨
ಜನರ ಆರೋಗ್ಯ ಕಾಪಾಡಬೇಕಾದ ರಕ್ಷಕರೇ ಭಕ್ಷಕರಾಗಿ ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟವಾಡಿರುವುದು ಹೀನಕೃತ್ಯವಾಗಿದೆ. ಇವರಿಗೆ ಕಾನೂನಿನ ಬಗ್ಗೆ ಗೌರವ ಮತ್ತು ಭಯವಿಲ್ಲದಿರುವುದೇ ಇದಕ್ಕೆ ಕಾರಣವಾಗಿರುವುದು, ಇಂತಹ ಭ್ರಷ್ಠ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು, ಹಾಗೂ ದುರುಪಯೋಗವಾಗಿರುವ ಹಣವನ್ನು ಸರ್ಕಾರ ಬಡ್ಡಿ ಸಮೇತ ಹಿಂಪಡೆಯಬೇಕು.
ಎಸ್.ಶ್ರೀನಿವಾಸ್, ತಾಲ್ಲೂಕು ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಬಂಗಾರಪೇಟೆ


Share