ಸಮಾಜ
ಕಲ್ಯಾಣ ಇಲಾಖೆಯ ಮೊರಾರ್ಜಿ ವಸತಿ ಶಾಲೆಗಳಲ್ಲಿ ಅಂದಿನ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರು 12 ಕೋಟಿ ರೂಪಾಯಿ ಅನುದಾನವನ್ನು ಬಿಸಿಎಂ ವಸತಿ ನಿಲಯಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಿಗೆ ಪ್ರತ್ಯೇಕ ಅನುದಾನವನ್ನು ಕರಾಟೆ ತರಬೇತಿ ನೀಡುವ ಸಲುವಾಗಿ ಕಾಯ್ದಿರಿಸಿದ್ದರು ಆದರೆ ಇಂದಿನ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಮೇಲೆ ಕರಾಟೆ ಶಿಕ್ಷಕರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರತ್ಯೇಕ ಅನುದಾನ 12 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡದೆ ಉಚಿತ ಯೋಜನೆಗಳ ಹೆಸರಿನಲ್ಲಿ ಕರಾಟೆ ಶಿಕ್ಷಕರ ಅನುದಾನಕ್ಕೆ ಕತ್ತರಿ ಹಾಕಿ 12 ಕೋಟಿ ಅನುದಾನವನ್ನು ಮಣ್ಣು ಪಾಲು ಮಾಡಿದೆ ಎಂದು ಹೆವೆನ್ ಫೈಟರ್ ಯೂಥ್ ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ . ಸೇನಸೈ ಬ್ಲಾಕ್ ಬೆಲ್ಟ್ ಸೆಕೆಂಡ್ ಡಾನ ಭೀಮಾಶಂಕರ್ ಎಸ್ ಗೋಗಿ ಬಿಳವಾರ ಆರ್ಗನೆಷನ ಆಫ್ ಕಲ್ಯಾಣ ಕರ್ನಾಟಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಈ ವಿಷಯದ ಕುರಿತು ಹವ್ವೆನ್ ಫೈಟರ್ ನಿರ್ದೇಶಕರಾದ ಇಂಟರ್ನ್ಯಾಷನಲ್ ಚಾಂಪಿಯನ್ ಮಾಸ್ಟರ್ ಶಿಹಾನ ಮನೋಹರ್ ಕುಮಾರ್ ಬೀರನೂರ್ ಅವರೊಂದಿಗೆ ಸೂಕ್ತವಾಗಿ ಚರ್ಚಿಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಿಗೆ ವಿಶೇಷವಾಗಿ ಪ್ರತ್ಯೇಕವಾಗಿ ಕರಾಟೆ ಶಿಕ್ಷಕರ ಅನುದಾನ ಬಿಡುಗಡೆಗೊಳಿಸುವಂತೆ ಹೆವೆನ್ ಫೈಟರ ತಂಡದ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೆವೆನ್ ಫೈಟರ್ ವೈಸ ಪ್ರೆಸಿಡೆಂಟ್ ಆಗಿರುವ ಬ್ಲಾಕ್ ಬೆಲ್ಟ್ ಸೆಕೆಂಡ್ ಡಾನ್ ಸೇನಸೈ ಸೋಪಣ್ಣ ಮಾಸ್ಟರ ಮಹಲ್ ರೋಜಾ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ
ವರದಿ ಜಟ್ಟಪ್ಪ ಎಸ್ ಪೂಜಾರಿ