ರೆಡ್ಡಿ ವೀರಣ್ಣ ಶಾಲಾ ಸಂಸತ್ ಚುನಾವಣೆ

ರೆಡ್ಡಿ ವೀರಣ್ಣ ಶಾಲಾ ಸಂಸತ್ ಚುನಾವಣೆ

Share

ಕಾರಟಗಿ ನವನಗರ್:ಕಮ್ಮವಾರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ ಚುನಾವಣೆಯನ್ನು ಶನಿವಾರ ನಡೆಸಲಾಯಿತು.ಚುನಾವಣೆಯಲ್ಲಿ ಪಾಲಿಸಲಾಗುವ ಎಲ್ಲ ಹಂತಗಳನ್ನು ಚಾಚೂ ತಪ್ಪದೇ ಪಾಲಿಸಲಾಯಿತು. ಚುನಾವಣೆ ಘೋಷಣೆಯಿಂದ ಹಿಡಿದು, ನಾಮ ಪತ್ರ ಸಲ್ಲಿಕೆ, ಅಭ್ಯರ್ಥಿಗಳ ಪ್ರಚಾರ ಭಾಷಣ, ಅಭ್ಯರ್ಥಿಗಳ ಪರವಾಗಿ ಪೋಸ್ಟರ್ ಮೇಕಿಂಗ್ ಸ್ಪರ್ಧೆ, ಚುನಾವಣಾ ಜಾಗೃತಿ ಸೇರಿ ಮತದಾನ ದಿನದವರೆಗಿನ ಎಲ್ಲ ಹಂತಗಳನ್ನು ಪಾಲಿಸಲಾಯಿತು.ಈ ವೇಳೆ ಪ್ರಾಚಾರ್ಯರಾದ ಕೆ ಎಸ್ ಗುರುಮಠ್ ಮಾತನಾಡಿ ಶಾಲೆಯ ಯುವ ಪೀಳಿಗೆಯಲ್ಲಿ ಚುನಾವಣೆ ಮತ್ತು ಮತದಾನದ ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ವಿಶೇಷ ಶ್ರಮವಹಿಸಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಮಾದರಿಯ ತಂತ್ರಾಂಶವನ್ನು ತಯಾರಿಸಿ ವಿದ್ಯಾರ್ಥಿಗಳು ಮತಗಳನ್ನು ಚಲಾಯಿಸುವ ಮೂಲಕ ತಮ್ಮ ನಾಯಕ-ನಾಯಕಿಯರನ್ನು ತಾವೇ ಆಯ್ಕೆ ಮಾಡಿದ್ದಾರೆ ಎಂದರು.ನಂತರ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಇವಿಎಂ ಮಾದರಿಯ ಆ್ಯಪ್ ಮೂಲಕ 5ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ಮತ ಚಲಾಯಿಸಿದರು. ಶೇ 97.00ರಷ್ಟು ಮತದಾನವಾಗಿದೆ.ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯರು ವಸಂತ ದೇಸಾಯಿ, ಬಾಲ ಗುರುಕುಲ ಮುಖ್ಯಸ್ಥರಾದ ಶ್ರೀದೇವಿ ಕೊಲ್ಲಾ, ಅಮರೇಶ್, ಬಸವರಾಜ್ ಸ್ವಾಮಿ, ಪಂಪನಗೌಡ, ಜ್ಯೋತಿ, ಐಶ್ವರ್ಯ, ಸೌಮ್ಯ, ಶಿವು ಬಸವರಾಜ್, ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.


Share