ಜೆವರ್ಗಿ ತಾಲೂಕಿನ ನ್ಯಾಯಾಲಯದ ಪಕ್ಕದಲ್ಲಿರುವ ನೂರಂದೆಶ್ವರ ಕಾಲೇಜಿನ ಎದುರುಗಡೆ ಇರುವ ಭಗವಂತ ರಾಯ್ ಲೇಔಟ ಇದುವರೆಗೂ ಈ ವಾರ್ಡಿನಲ್ಲಿ ಸಿಸಿ ರಸ್ತೆ ಅಥವಾ ಚರಂಡಿ ನಿರ್ಮಾಣ ಮಾಡಿರುವುದಿಲ್ಲ ಈ ವಾರ್ಡಿನ ಪಟ್ಟಣ ಪಂಚಾಯಿತಿಯಿಂದ ಆಯ್ಕೆಯಾದ ಸದಸ್ಯರು ಅಥವಾ ಅಧ್ಯಕ್ಷರು ಇತ್ತ ಕಡೆ ಗಮನ ಹರಿಸದಿರುವದು ವಿಷಾದನೀಯ ಸಂಗತಿ ರಾತ್ರಿಯ ಸಮಯದಲ್ಲಿ ವಯಸ್ಸಾದ ವೃದ್ಧರು ಅಥವಾ ಮಕ್ಕಳು ಹೊರಗಡೆ ಬರಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಯಾಕೆಂದರೆ ಈ ವಾರ್ಡಿನಲ್ಲಿ ಸರಿಯಾದ ವಿದ್ಯುತ್ ದೀಪದ ವ್ಯವಸ್ಥೆ ಇರುವುದಿಲ್ಲ ಇದುವರೆಗೂ ಒಂದು ಸೀಸೀ ರಸ್ತೆಯು ಕೂಡ ನಿರ್ಮಾಣ ಮಾಡಿಲ್ಲ ಈ ವಾರ್ಡಿನಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಪಟ್ಟಣ ಪಂಚಾಯತ್ ಅಧಿಕಾರಿಯಾದ ಶಂಭುಲಿಂಗ ದೇಸಾಯಿ ಅವರಿಗೆ ಹಲವಾರು ಬಾರಿ ಮನವಿ ಪತ್ರವನ್ನು ಸಲ್ಲಿಸಿದ್ದು ಅಲ್ಲದೆ ಹಲವಾರು ಬಾರಿ ಈ ವಿಷಯದ ಕುರಿತು ಪಟ್ಟಣ ಪಂಚಾಯತ್ ಅಧಿಕಾರಿ ಗಮನಕ್ಕೂ ತರಲಾಗಿದ್ದರು ಕೂಡ ಜಾಣ ಕುರುಡರಂತೆ ವರ್ತಿಸುತ್ತಿರುವುದು ಯಾವ ಪುರುಷಾರ್ಥಕ್ಕೊ ಗೊತ್ತಾಗುತ್ತಿಲ್ಲ ಜೆವರ್ಗಿ ತಾಲೂಕಿನ ಶಾಸಕ ರಾದ ಡಾ. ಅಜಯ್ ಸಿಂಗ್ ಅವರ ಗಮನಕ್ಕೂ ತರಲಾಗಿದ್ರು ಕೂಡ ಯಾವುದೇ ರೀತಿಯಿಂದ ಪ್ರಯೋಜನವಾಗಿಲ್ಲ ಇನ್ನು ಮುಂದಾದರು ಕೂಡಲೇ ಎಚ್ಚೆತ್ತುಕೊಂಡು ಈ ನಮ್ಮ ವಾರ್ಡಿಗೆ ಸಿಸಿ ರಸ್ತೆ ನಿರ್ಮಾಣ ವಿದ್ಯುತ್ ದ್ವೀಪದ ವ್ಯವಸ್ಥೆ ಮಾಡಬೇಕು ಒಂದು ವೇಳೆ ನಿರ್ಲಕ್ಷ ವಹಿಸಿದರೆ ಭಗವಂತರಾಯ ಲೇಔಟ್ನ ಸಮಸ್ತ ನಾಗರಿಕರೊಂದಿಗೆ ಪಟ್ಟಣ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪಟ್ಟಣ ಪಂಚಾಯತಿಗೆ ಬೀಗ ಜಡಿದು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಭಗವಂತ ರಾಯ್ ಲೇಔಟ್ ನ ನಿವಾಸಿಯಾದ ಸಿದ್ದಲಿಂಗ/ ಹಣಮಂತ ಪೂಜಾರಿ ಹಾಲಗಡ್ಲಾ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ
ವರದಿ ಜಟ್ಟಪ್ಪ ಎಸ್ ಪೂಜಾರಿ