ಜಗಲಿ ತೆರೆವು ಬಗ್ಗೆ 16. ದಿನಗಳು ಕಳೆದಿವೆ ದೂರು ಕೊಟ್ಟರು ಕ್ಯಾರೆ ಎನ್ನುತ್ತಿಲ್ಲ ಗ್ರಾಮ ಪಂಚಾಯಿತಿ ಅಧಿಕಾರಿ ಅಕ್ರಮ ಕಟ್ಟಡಕ್ಕೆ ಸಾತ್ ಕೊಟ್ರ PDO ಮಹಾದೇವ್

ಜಗಲಿ ತೆರೆವು ಬಗ್ಗೆ 16. ದಿನಗಳು ಕಳೆದಿವೆ ದೂರು ಕೊಟ್ಟರು ಕ್ಯಾರೆ ಎನ್ನುತ್ತಿಲ್ಲ ಗ್ರಾಮ ಪಂಚಾಯಿತಿ ಅಧಿಕಾರಿ ಅಕ್ರಮ ಕಟ್ಟಡಕ್ಕೆ ಸಾತ್ ಕೊಟ್ರ PDO ಮಹಾದೇವ್

Share

ಸಾರ್ವಜನಿಕರ ರಸ್ತೆಯಲ್ಲಿ ರಾತ್ರೋ ರಾತ್ರಿ ನಿರ್ಮಾಣವಾದ ಜಗುಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.ಗ್ರಾಮಸ್ಥರ ವಿರೋಧವಿದ್ದರೂ ಲೆಕ್ಕಿಸದ ಗ್ರಾಮ ಪಂಚಾಯ್ತಿ ಸದಸ್ಯೆ ರಾಜಾರೋಷವಾಗಿ ಜಗುಲಿ ನಿರ್ಮಾಣ ಕಾಮಗಾರಿಯನ್ನ ಮುಂದುವರೆಸಿದರು ಇದನ್ನು ತಡೆಹಿಡಿಯಲು ಬಂದ ಗ್ರಾಮಸ್ಥರ ನಡುವೆ ಗ್ರಾಮ ಪಂಚಾಯ್ತಿ ಸದಸ್ಯೆ ಹಾಗೂ ಅವರ ಕುಟುಂಬ ಮಾತಿನ ಚಕಮಕಿ ನಡೆಸಿದ್ದಾರೆ .ಹುಣಸೂರು ತಾಲೂಕಿನ ಉಮ್ಮತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆಲ್ಲೂರು ಪಾಲ ಗ್ರಾಮದಲ್ಲಿ ಘಟನೆ ನಡೆದಿದೆ.ನೆಲ್ಲೂರುಪಾಲ ಗ್ರಾಮದ ಉಮ್ಮತ್ತೂರು ಗ್ರಾಮ ಪಂಚಾಯ್ತಿ ಸದಸ್ಯೆ ರಾಣಿ ಶಂಕರ್ ನಾಯಕ್ ನಾಯಕ ರವರ ಮನೆಗೆ ಹೊಂದಿಕೊಂಡಂತಿರುವ ರಸ್ತೆ ಸಾರ್ವಜನಿಕರು ಓಡಾಡುವ ರಸ್ತೆ ಆಗಿದ್ದು .ಇಲ್ಲಿ ವಾಹನಗಳು,ಟ್ರಾಕ್ಟರ್ ಗಳ ಓಡಾಟ ಹಿಂದಿನಿಂದಲೂ ಸಾಗಿ ಬಂದಿದೆ.ಇದೀಗ ಶಂಕರನಾಯಕ ಮನೆಯವರು ಸಾರ್ವಜನಿಕರ ರಸ್ತೆಯಲ್ಲಿ ವಾಹನಗಳು ಓಡಾಡಲು ಸಾಧ್ಯವಾಗದಂತೆ ಜಗುಲಿ ನಿರ್ಮಿಸಿದ್ದಾರೆ.ಈ ಬಗ್ಗೆ ಗ್ರಾಮಸ್ಥರು ವಿರೋಧಿಸಿದ್ದಾರೆ.ಗ್ರಾಮಸ್ಥರ ವಿರೋಧವನ್ನ ಲೆಕ್ಕಿಸದೆ ಜಗುಲಿ ನಿರ್ಮಾಣ ಕಾರ್ಯ ಮುಂದುವರೆದಿದೆ.ಈ ಬಗ್ಗೆ ಗ್ರಾಮಸ್ಥರಾದ ವಿಶ್ವನಾಥ್ ಹಾಗೂ ಕೃಷ್ಣ ರವರು ಉಮತ್ತೂರು ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದಾರೆ.ಪಿಡಿಓ ರವರು ಮನೆ ಮಾಲೀಕ ಶಂಕರ ನಾಯಕ ರವರಿಗೆ ನೋಟೀಸ್ ಜಾರಿ ಮಾಡಿದ್ದು ಕಾಮಗಾರಿಯನ್ನ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಪಿಡಿಒ ನೋಟಿಸಿಗೂ ಜಗ್ಗದ ಗ್ರಾಮ ಪಂಚಾಯಿತಿ ಸದಸ್ಯರಾದ ರಾಣಿ ರವರು ಕಾಮಗಾರಿ ಮುಂದುವರಿಸಿದ್ದಾರೆ ಅಕ್ರಮವಾಗಿ ಕಟ್ಟಿರುವ ಜಗಲಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಸದಸ್ಯರ ಮೇಲೆ ಕಾನೂನು ಕ್ರಮ ಜರುಗಿಸಿ ಸದಸತ್ವ ಅಮಾನತುಗೊಳಿಸಬೇಕಾಗಿ ಕಾರ್ಯನಿರ್ವಾಹಕ ಅಧಿಕಾರಿ ಗಳಲ್ಲಿ ಕೇಳಿಕೊಳ್ಳುತ್ತ ಅರ್ಜಿ ಸಲ್ಲಿಸಿದರು ಉಮ್ಮತುರು ಗ್ರಾಮ ಪಂಚಾಯತ್ ಅಧಿಕಾರಿ ತೆರವು ಗೊಳಿಸಲು ವಿಫಲರಾಗಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಕುರಿತು ದೂರು ಕೊಟ್ಟರು ಅಧಿಕಾರಿ ವರ್ಗ ಮಾತ್ರ ಕೈ ಕಟ್ಟಿ ಕುಳಿತಿದೆ.


Share