ಗಾರಂಪಳ್ಳಿ ಗ್ರಾಮದ ಕಳಪೆ ಮಟ್ಟದ ರಸ್ತೆ ನಿರ್ಮಾಣ ತಡೆದು ನೂತನ ರಸ್ತೆ ನಿರ್ಮಾಣ ಮಾಡಬೇಕು ನಾಗರಿಕ ಹೋರಾಟ ಸಮಿತಿ ಗಾರಂಪಳ್ಳಿ ಗ್ರಾಮಸ್ಥರಿಂದ ಒತ್ತಾಯ.

ಗಾರಂಪಳ್ಳಿ ಗ್ರಾಮದ ಕಳಪೆ ಮಟ್ಟದ ರಸ್ತೆ ನಿರ್ಮಾಣ ತಡೆದು ನೂತನ ರಸ್ತೆ ನಿರ್ಮಾಣ ಮಾಡಬೇಕು ನಾಗರಿಕ ಹೋರಾಟ ಸಮಿತಿ ಗಾರಂಪಳ್ಳಿ ಗ್ರಾಮಸ್ಥರಿಂದ ಒತ್ತಾಯ.

Share

ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದ ರಸ್ತೆ ನವೀಕರಣ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿರುತ್ತದೆ ರಸ್ತೆಯ ನಿರ್ಮಾಣದ ಕಾರ್ಯದಲ್ಲಿ ಹೊಸ ಗುಮ್ಮಿಗಳನ್ನು ಹಾಕದೆ ಹಳೆಯ ಗುಮ್ಮಿಗಳನ್ನು ಅಲ್ಲೇ ಬಿಟ್ಟು ತಮ್ಮ ಮನಸ್ಸಿಗೆ ಬಂದಂತೆ ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿಯನ್ನು ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಗ್ರಾಮಸ್ಥರು ಈ ಕಳಪೆ ಮಟ್ಟದ ವಿರುದ್ಧ ಮಾತನಾಡಿದರೆ (ಜೆಇ) ಅವರು ಗ್ರಾಮಸ್ಥರಿಗೆ ಏಕವಚನದಲ್ಲಿ ಮಾತನಾಡುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿ ಗಾರಂಪಳ್ಳಿ ಗ್ರಾಮದ ನಾಗರಿಕ ಹೋರಾಟ ಸಮಿತಿ ವತಿಯಿಂದ ರಸ್ತೆಯ ಬೇಡಿಕೆಯನ್ನು ಮುಂದಿಟ್ಟು ಚಿಂಚೋಳಿ ತಾಲೂಕ ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು ಪ್ರಮುಖ ಬೇಡಿಕೆಗಳು1) ಸಂಪೂರ್ಣ ಕ್ರಿಯಾಜನ್ ಪ್ರಕಾರ ಕಾಮಗಾರಿ ನಡೆಯಬೇಕು2) ರಸ್ತೆಗೆ ಹಳೆಯ ಗುಮ್ಮಿಗಳನ್ನು ತೆಗೆದು ಹೊಸ ಗುಮ್ಮಿಗಳನ್ನು ಹಾಕಬೇಕು3) ರಸ್ತೆಯ ಬಗ್ಗೆ ಗ್ರಾಮಸ್ಥರು ಜೆಇ ಅವರಿಗೆ ಪ್ರಶ್ನೆ ಮಾಡಿದರೆ ಏಕವಚನದಲ್ಲಿ ಮಾತನಾಡಿದ ಜೆಇ ಅವರನ್ನು ಅಮಾನತು ಮಾಡಬೇಕು4) ಗಾರಂಪಳ್ಳಿ ಗ್ರಾಮದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದ ಬಳಿ ಇರುವ ಟಿಸಿಯನ್ನು ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಈ ಸಂದರ್ಭದಲ್ಲಿ ರಜನಿಕಾಂತ್ ಮತ್ತು ಗೋಪಾಲ್ ವಸ್ತಾರಿ ಮೌನೇಶ್ ವಸ್ತಾರಿ ಹಾಗೂ ಸೋಮಶೇಖರ್ ಪಾಟೀಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು…


Share