ಶಾಲೆ ಬೀಗ ಮುರಿದು ಕಳವು..ಸಿಸಿ ಟಿವಿ ಡಿವಿಆರ್ ಸಮೇತ 80 ಸಾವಿರ ನಗದು ದೋಚಿದ ಖದೀಮರು.

ಶಾಲೆ ಬೀಗ ಮುರಿದು ಕಳವು..ಸಿಸಿ ಟಿವಿ ಡಿವಿಆರ್ ಸಮೇತ 80 ಸಾವಿರ ನಗದು ದೋಚಿದ ಖದೀಮರು.

Share

ಹುಣಸೂರು:
ಶಾಲೆ ಬೀಗ ಮುರಿದು ಸಿಸಿ ಟಿವಿ ಡಿವಿಆರ್ ಸಮೇತ 80 ಸಾವಿರ ನಗದು ದೋಚಿದ ಘಟನೆ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಮರದೂರು ಗ್ರಾಮದ ಬಳಿ ನಡೆದಿದೆ.ಲ್ಯಾಸಿಲೆಟ್ ಶಾಲೆಯಲ್ಲಿ ಘಟನೆ ನಡೆದಿದೆ.ಕೃತ್ಯ ನಡೆಸಿದ ಖದೀಮರು ಪೊಲೀಸರಿಗೆ ಸುಳಿವು ತಪ್ಪಿಸಲು ಸಿಸಿ ಕ್ಯಾಮರಾದ ಡಿವಿಆರ್ ಗಳನ್ನೇ ಕದ್ದೊಯ್ದಿದ್ದಾರೆ. ಇಂದು ಬೆಳಿಗ್ಗೆ ಶಾಲೆ ಓಪನ್ ಮಾಡಲು ಬಂದ ಸಿಬ್ಬಂದಿಗಳ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಬೆರಳಮುದ್ರೆ ಘಟಕದ ಸಿಬ್ಬಂದಿಗಳು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share