ಪರಿಸರ ದಿನಾಚರಣೆ ಕಾರ್ಯಕ್ರಮ

ಪರಿಸರ ದಿನಾಚರಣೆ ಕಾರ್ಯಕ್ರಮ

Share

ಬಂಗಾರಪೇಟೆ: ಪರಿಸರವನ್ನು ಸಂರಕ್ಷಿಸುವ, ಮತ್ತು ಮರುಸ್ಥಾಪಿಸುವ ಜವಾಬ್ದಾರಿಯಾಗಿದೆ. ಮತ್ತು ಮುಂದಿನ ಪೀಳಿಗೆಯ ಸುಸ್ಥಿರ ಭವಿಷ್ಯಕ್ಕಾಗಿ ಒಟ್ಟಾಗಿ ಪರಿಸರ ಉಳಿಸಲು ಕೆಲಸ ಮಾಡುವುದರ ಮೂಲಕ ಸ್ವಚಂದ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಪೊಲೀಸ್ ನಿರೀಕ್ಷಕ ನಂಜಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ದಿವ್ಯ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಫೋಕಸ್ ಸ್ವಯಂ ಸೇವಾ ಸಂಸ್ಥೆಯ ವ್ಯವಸ್ಥಾಪಕ ಅ.ನಾ.ಹರೀಶ್ ರವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾನವ ಜಾಗತೀಕರಣ, ಔದ್ಯೋಗಿಕರಣ ಹಾಗೂ ಸ್ವಾರ್ಥದ ಅಮಲಿನಲ್ಲಿ ಮುಳುಗಿ ನಿಸರ್ಗದತ್ತವಾಗಿ ಬಂದ ಪರಿಸರವನ್ನು ನಾಶ ಮಾಡುವುದರ ಮೂಲಕ ತನಗರಿವಿಲ್ಲದೆ ಪರಿಸರವನ್ನು ನಾಶಮಾಡುತ್ತಿದ್ದಾನೆ. ಇದರಿಂದ ಜೀವ ಸಂಕುಲ ಅವನತಿಯ ಹಂತ ತಲುಪುವುದನ್ನು ಯಾರೂ ತಡೆಯಲಾರರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಾನವರಾದ ನಾವು ಕ್ಷೀಣಿಸಿದ ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸುವಾಗ ಜೈವಿಕ ವೈವಿಧ್ಯತೆ ಮತ್ತು ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವಲ್ಲಿ ಪ್ರಯತ್ನಗಳನ್ನು ಮಾಡುವುದು ಬಹಳ ಮುಖ್ಯವಾಗಿದೆ ಎಂದರು.ಫೋಕಸ್ ಸಂಸ್ಥೆಯ ವ್ಯವಸ್ಥಾಪಕ ಅ.ನಾ.ಹರೀಶ್ ಮಾತನಾಡಿ, ಪರಿಸರದ ಮೇಲೆ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸುವ ದೃಷ್ಟಿಕೋನದಿಂದ ವಿಶ್ವ ಪರಿಸರ ದಿನವು ಬಹಳ ಮುಖ್ಯವಾಗಿದೆ. ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ನಾವು ಮತ್ತು ನಮ್ಮ ಸಂಸ್ಥೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಇದರೊಟ್ಟಿಗೆ ೧೩ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸ್ವಚಂದ ವಾತಾವರಣ ನಿರ್ಮಿಸುವ ಗುರಿಯನ್ನು ಸಾಧಿಸಿದ್ದೇವೆ. ಪರಿಸರ ರಕ್ಷಣೆ ಮೂಲಕ ಜಾಗೃತಿ ಮೂಡಿಸುವ ಮೂಲಕ ವಿಶ್ವ ಪರಿಸರ ದಿನವು ಜನರು ಮತ್ತು ಸಮುದಾಯವನ್ನು ಈ ದಿಕ್ಕಿನಲ್ಲಿ ಧನಾತ್ಮಕ ಬದಲಾವಣೆಯನ್ನು ಮಾಡಲು ಪ್ರೇರೇಪಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಲಲಿತಮ್ಮ, ಶಾಲೆಯ ಮುಖ್ಯಸ್ತರಾದ ಸರಸ್ವತಮ್ಮ, ಅಕ್ಷರ ದಾಸೋಹ ಅಧ್ಯಕ್ಷ ಎಂ.ಎನ್.ರವೀAದ್ರ, ಮತ್ತು ಶಿಕ್ಷಕರು ಉಪಸ್ಥಿತರಿದ್ದರು.


Share