ಪಟ್ಟಣದಲ್ಲಿ ಶುಕ್ರವಾರ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು

ಪಟ್ಟಣದಲ್ಲಿ ಶುಕ್ರವಾರ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು

Share

ಪಟ್ಟಣದಲ್ಲಿ ಸಂಜೆ ಸುರಿದ ಮಳೆಯಿಂದಾಗಿ ತರಕಾರಿ ಮಾರುಕಟ್ಟೆ, ಕುಂಬಾರ ಓಣಿಯಲ್ಲಿ ಮನೆಗಳ ಮುಂದೆ ಚರಂಡಿ ನೀರು ತುಂಬಿ ಹರಿಯುತ್ತಿರುವುದು ಕಂಡು ಬಂತು. ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಚರಂಡಿ ನೀರು ಹೊಳೆಯಂತೆ ಹರಿದ ಪರಿಣಾಮ ತರಕಾರಿ, ಪುಟ್ ಬಾತ್ ವ್ಯಾಪರಸ್ಥರು ಪರದಾಡಿದರು. ಚರಂಡಿಗಳಲ್ಲಿ ಸರಿಯಾಗಿ ಸ್ವಚ್ಚತೆಯನ್ನು ಇರದ ಕಾರಣ ಕೊಳಚೆ ನೀರು ಸಂಪೂರ್ಣ ಮಾರುಕಟ್ಟೆ ತುಂಬ ತುಂಬಿಕೊAಡಿದ್ದು. ಇದರಿಂದ ನೆಲದ ಮೇಲೆ ಹಚ್ಚಿದ ತರಕಾರಿ, ಹಣ್ಣುಗಳು ಕೆಲವು ನೀರು ಪಾಲಾದವು. ಜನರು ತಮ್ಮ ಮನೆಗಳಲ್ಲಿ ನುಗ್ಗಿದ ಮಳೆ ನೀರು ಹೊರಹಾಕಲು ಹರಸಾಹಸಪಡುತ್ತಿದ್ದ ದೃಶ್ಯ ಕಂಡುಬಂತು.

ವರದಿ :“ದುರಗಪ್ಪ ಹರಿಜನ”


Share