ಸರ್ಕಾರಿ ಯೋಜನೆಗಳನ್ನು ಕೊಳ್ಳೆ ಹೊಡೆಯುತ್ತಿರುವ ಖದೀಮರನ್ನು ಲೋಕಾಯುಕ್ತ ಅಧಿಕಾರಿಗಳು ಕೂಡಲೇ ಮಟ್ಟ ಹಾಕಲಿ ಭೀಮ ಆರ್ಮಿ ತಾಲೂಕ ಅಧ್ಯಕ್ಷ ಮಹದೇವ ದೊಡ್ಡಮನಿ ಆಗ್ರಹ.

ಸರ್ಕಾರಿ ಯೋಜನೆಗಳನ್ನು ಕೊಳ್ಳೆ ಹೊಡೆಯುತ್ತಿರುವ ಖದೀಮರನ್ನು ಲೋಕಾಯುಕ್ತ ಅಧಿಕಾರಿಗಳು ಕೂಡಲೇ ಮಟ್ಟ ಹಾಕಲಿ ಭೀಮ ಆರ್ಮಿ ತಾಲೂಕ ಅಧ್ಯಕ್ಷ ಮಹದೇವ ದೊಡ್ಡಮನಿ ಆಗ್ರಹ.

Share

ಕಲ್ಬುರ್ಗಿ ಸುದ್ದಿ
ಕಲ್ಬುರ್ಗಿ ಜಿಲ್ಲೆಯ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿದ ವಂಚಕರನ್ನು ಕೂಡಲೇ ಮಟ್ಟ ಹಾಕಬೇಕು ಅದೇ ರೀತಿ ಪ್ರತಿಯೊಂದು ಇಲಾಖೆಯ ಕರ್ಮಕಾಂಡವನ್ನು ಬಯಲಿಗೆಳೆದು ಸರ್ಕಾರಿ ದುಡ್ಡನ್ನು ಕೊಳ್ಳೆ ಹೊಡೆಯುತ್ತಿರುವ ವಂಚಕರಿಗೆ ಕಾನೂನಿನ ಬಗ್ಗೆ ಭಯ ಹಾಗೂ ಅರಿವು ಮೂಡುವಂತೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರಿಗೆ ಚಾಟಿ ಬಿಸಬೇಕು ಹಾಗೂ ಸಂವಿಧಾನದ ಘನತೆಯನ್ನು ಮತ್ತು ಸಂವಿಧಾನದ ಮೂಲ ಆಶಯವನ್ನು ಎತ್ತಿ ಹಿಡಿದು ಸಾವಿರಾರು ಜನರಿಗೆ ಸಿಗುವಂತಹ ಮೂಲ ಸೌಲಭ್ಯಗಳು ಅಧಿಕಾರಿಗಳ ಹಾಗೂ ಮಧ್ಯವರ್ತಿಗಳ ಪಾಲಾಗುತ್ತಿವೆ ಉದಾಹರಣೆಗೆ ಪಂಚಾಯತ್ ರಾಜ್ ಇಲಾಖೆಯನ್ನು ತೆಗೆದುಕೊಳ್ಳಿ ಪಂಚಾಯತ್ ರಾಜ್ ಇಲಾಖೆ ಜಾರಿಗೆ ಬಂದ ಮೇಲೆ ಪ್ರತಿಯೊಂದು ಹಳ್ಳಿಗಳು ಸಿಂಗಾಪುರ ಸಿಟಿಯಂತೆ ಕಂಗೊಳಿಸಬೇಕಾಗಿತ್ತು ಇದಕ್ಕೆಲ್ಲ ಕಾರಣವಾದರೂ ಏನು ಮೂಲಭ್ರಷ್ಟಾಚಾರ ಇದನ್ನು ಬುಡ ಸಮೇತ ಕಿತ್ತು ಬಿಸಾಕಬೇಕಿದೆ ಪ್ರತಿಯೊಬ್ಬ ಸಮಾನ ಮನಸ್ಕರು ಭ್ರಷ್ಟಾಚಾರ ವಿರೋಧಿಗಳು ತಮ್ಮ ವಿಚಾರದಾರೆಗೆ ಬೆಂಬಲಿಸಬೇಕೆಂದು ಭೀಮ ಆರ್ಮಿ ತಾಲೂಕ ಅಧ್ಯಕ್ಷ ಮಹದೇವ್ ದೊಡ್ಮನಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ ಅದೇ ರೀತಿಯಾಗಿ ಭ್ರಷ್ಟಾಚಾರದ ವಿರುದ್ಧ ಯಾರೇ ಹೋರಾಟ ಮಾಡಿದರು ಕೂಡಲೇ ಸ್ಪಂದಿಸುವದಾಗಿ ತಿಳಿಸಿದ್ದಾರೆ.
ವರದಿ ಜಟ್ಟಪ್ಪ ಎಸ್ ಪೂಜಾರಿ


Share