ಕಲಬುರಗಿ :– ಕಲಬುರಗಿ ಜಿಲ್ಲೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಕ್ಷೌರದ ಅಂಗಡಿಯ ಮಾಲೀಕ ರಿಗೆ ತಿಳಿಸುವುದೇನೆಂದರೆ ಇದೇ ಜೂನ್ 17 ಸೋಮವಾರ ರಂದು ಬಕ್ರೀದ್ ಹಬ್ಬದ ನಿಮಿತ್ತವಾಗಿ ಇದೇ ಜೂನ್ 18 ರಂದು ಮಂಗಳವಾರ ದಿನದಂದು ಕಲಬುರಗಿ ನಗರದಲ್ಲಿ ಹಾಗೂ ಕಲಬುರಗಿ ಜಿಲ್ಲೆಯ ಒಳಪಡುವ ಎಲ್ಲಾ ತಾಲೂಕಿನಲ್ಲಿ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಭಾಗದಲ್ಲಿ ಸಹ ಹಡಪದ ಅಪ್ಪಣ್ಣ ಸಮಾಜದ ಕ್ಷೌರಿಕ ವೃತ್ತಿಯ ಹೇರ್ ಸಲೂನ್ ಅಂಗಡಿಗಳು ತೆರೆದಿರುತ್ತದೆ . ಎಂದು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾಧ್ಯಕ್ಷರಾದ ಈರಣ್ಣಾ ಸಿ ಹಡಪದ ಸಣ್ಣೂರ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಗಳು- ಬಸವರಾಜ ಸಿ ಹಡಪದ ಹಳ್ಳಿ ಶಹಾಬಾದ, ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್ , ಜಿಲ್ಲಾ ಕಾರ್ಯಾಧ್ಯಕ್ಷರು ಭಗವಂತ ಹಡಪದ ಶಿಕ್ಷಕರು ಕಿರಣಗಿ , ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನೀಲೂರ, ಜಿಲ್ಲಾ ಉಪಾಧ್ಯಕ್ಷರು ರುದ್ರಮಣಿ ಅಪ್ಪಣ ಬಟಗೇರಾ , ಮತ್ತು ಕಲಬುರಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ, ಹಾಗೂ ಕಲಬುರಗಿ ತಾಲೂಕು ಅಧ್ಯಕ್ಷ -ಚಂದ್ರಶೇಖರ ತೋನಸನಹಳ್ಳಿ.ಜೂನ್ 17 ಸೋಮವಾರ ದಿನದಂದು ಬಕ್ರೀದ್ ಹಬ್ಬ ಬಂದಿರುವುದು ಈ ಮುಸ್ಲಿಂ ಸಮುದಾಯದ ಅನೇಕ ಗ್ರಾಹಕರು (ಖುರಭಾನಿ) ಕೊಡುವುದರಿಂದ . ಜೂನ್ 18 ರಂದು ಮಂಗಳವಾರ ಬಕ್ರೀದ್ ಹಬ್ಬದ ಬಂದ ಕಾರಣದಿಂದಾಗಿ ಈ ಇದೇ 18 ರಂದು ಮಂಗಳವಾರ ಒಂದು ದಿವಸ ಮಾತ್ರ ನಮ್ಮ ಹಡಪದ ಅಪ್ಪಣ್ಣ ( ಕ್ಷೌರಿಕ) ಸಮಾಜದ ವತಿಯಿಂದ. ಎಲ್ಲಾ ‘ಕ್ಷೌರದ” ಸಲೂನ್ ಅಂಗಡಿಗಳು ಓಪನ್ ಮಾಡುವುದಕ್ಕೆ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ಅನುಮತಿಯನ್ನು ನೀಡಿದೆ. ಮತ್ತೆ ಮುಂದೆ ಎಂದಿನಂತೆ ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜದ ನಿಯಮದಂತೆ ಮುಂದೆ ಪ್ರತಿ ಮಂಗಳವಾರ ತಮ್ಮ ಎಲ್ಲಾ ‘ಕ್ಷೌರದ” ಅಂಗಡಿಗಳು ಬಂಧ್ ಮಾಡಿ ನಿಯಮ ಪಾಲನೇ ಎಲ್ಲರೊ ಮಾಡಿಕೊಂಡು ಹೋಗಬೇಕು ಮತ್ತು ಪ್ರತಿಯೊಬ್ಬ ಗ್ರಾಹಕರು ಈ ಬಕ್ರೀದ್ ಹಬ್ಬವು ಇದೇ ಜೂನ್ 17 ರಂದು ಇದೆ. ಮತ್ತು 18 ರಂದು ಹಬ್ಬ. ಮುಸ್ಲಿಂ ಧರ್ಮದ ದೊಡ್ಡ ಹಬ್ಬದ ಸಂಭ್ರಮ ಆಚರಣೆಯ ಬಂದಿರುವುದರಿಂದ ಇದೇ ಜೂನ್ 18 ನೇ ತಾರೀಖು ಮಂಗಳವಾರ ದಿನದಂದು ತಮ್ಮ ಸೇವೆ ಮಾಡಲು ನಮ್ಮ ಎಲ್ಲಾ ಕ್ಷೌರ ವೃತ್ತಿಯ ಕಾಯಕ ಭಾಂಧವರು ತಮ್ಮ ಸೇವೆಯಲ್ಲಿ ಸನ್ನಧರಾಗಿರುತ್ತಾರೆ. ಆದ ಕಾರಣ ಸಾರ್ವಜನಿಕರು.(ಗ್ರಾಹಕರು) ತಾವೆಲ್ಲರೊ ಸಹಕರಿಸಬೇಕೆಂದು ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳಾದ – ಡಾ.ಮಲ್ಲಿಕಾರ್ಜುನ. ಬಿ.ಹಡಪದ ಸುಗೂರ ಎನ್ ಅವರು ಈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.