ಚಿತ್ತಾಪುರ ರೈತ ಸಂಪರ್ಕ ಕೇಂದ್ರಕ್ಕೆ ಲೋಕಾಯುಕ್ತ ಎಸ್‍ಪಿ ದಿಢೀರ್ ಭೇಟಿ, ಪರಿಶೀಲನೆ

ಚಿತ್ತಾಪುರ ರೈತ ಸಂಪರ್ಕ ಕೇಂದ್ರಕ್ಕೆ ಲೋಕಾಯುಕ್ತ ಎಸ್‍ಪಿ ದಿಢೀರ್ ಭೇಟಿ, ಪರಿಶೀಲನೆ

Share

ಕಲಬುರಗಿ:-ಲೋಕಾಯುಕ್ತ ಎಸ್‍ಪಿ ಜಾನ್ ಆಂಟೋನಿ ಅವರು ಚಿತ್ತಾಪುರದ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಇಂದು ದಿಢೀರನೆ ಭೇಟಿ ನೀಡಿ ತೊಗರಿ ಬೇಳೆ, ಉದ್ದಿನ ಬೇಳೆ ಮತ್ತು ಕಚೇರಿಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಪೈಪುಗಳ ಪರಿಶೀಲನೆ ನಡೆಸಿದರು.ರೈತರಿಗೆ ದೊರೆಯಬೇಕಾಗಿರುವ ಸೌಲಭ್ಯಗಳನ್ನು ಆದಷ್ಟು ಬೇಗನೆ ಪೂರೈಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಚಿತ್ತಾಪುರದ ರೈತ ರವೀಂದ್ರ ಅವರು, ಲಾಟರಿ ಸರಿಯಾಗಿ ಮಾಡುತಾ ಇಲ್ಲ, ನಾವು ಒಂದು ಟೈಮಿಗೆ ಲಾಟರಿ ಮಾಡುವಾಗ ಬರ್ತೀವಿ ಇಲ್ಲ ಅಂದ್ರೆ ಎಂದು ಎಸ್ಪಿ ಎದುರಿಗೆ ನೋವನ್ನು ತೋಡಿಕೊಂಡರು.ಪೈಪುಗಳು ಬೆಲೆ ಎಷ್ಟು, ಕಚೇರಿಯಲ್ಲೇಕೆ ಬಿದ್ದಿವೆ. ಇವುಗಳನ್ನು ರೈತರಿಗೆ ಕೊಡ್ತೀರಾ ಎಂದು ಲೋಕಾಯುಕ್ತ ಎಸ್‍ಪಿ ಜಾನ್ ಆಂಟೋನಿ ಅವರು ಕೃಷಿ ಅಧಿಕಾರಿಗೆ ಪ್ರಶ್ನಿಸಿದರು. ಇದೆಲ್ಲಾ ಹಾಳಾಗಿ ಹೋಗುತ್ತದೆ. ಬಿಸಿಲಲ್ಲಿ ಬಿದ್ದಿದೆ. ಆದಷ್ಟು ಬೇಗನೆ ರೈತರಿಗೆ ನೀಡಿ ಎಂದು ಅಧಿಕಾರಿಗೆ ಸೂಚನೆ ನೀಡಿದರು.ಕೃಷಿ ಸಹಾಯಕ ನಿರ್ದೇಶಕ ಸಂಜೀವ್ ಕುಮಾರ ಆದಷ್ಟು ಬೇಗನೆ ಪೈಪುಗಳು ಮತ್ತು ತಾಡಪತ್ರಾಗಳನ್ನು ರೈತರಿಗೆ ವಿತರಿಸುವುದಾಗಿ ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ್ ಅವರು ಎಸ್‍ಪಿ ಅವರಿಗೆ ತಿಳಿಸಿದರು.ಡಿಎಸ್‍ಪಿ ಮಂಜುನಾಥ್, ಇನ್ಸಪೆಕ್ಟರ್ ಧ್ರುವತಾರ, ಸಹಾಯಕ ಕೃಷಿ ಅಧಿಕಾರಿ ಸಂಜೀವ್ ಕುಮಾರ್, ಬಸವರಾಜ್ ಬಂಗರಗಿ, ಪೆÇಲೀಸ್ ಸಿಬ್ಬಂದಿಗಳಾದ ಬಸವರಾಜ್, ಸಿದ್ದರಾಮಪ್ಪ, ಸಂತೋಷಮ್ಮ ಉಪಸ್ಥಿತರಿದ್ದರು. ‌
ವರದಿ-ಡಾ ಎಂ.ಬಿ ಹಡಪದ ಸುಗೂರ ಎನ್


Share