ಕಲಬುರಗಿ:-ರಾಜ್ಯ ಸರ್ಕಾರ 3.50 ಕೋಟಿ ರೂ.ಗಳ ವೇತನ ಅನುದಾನವನ್ನು ಬಿಡುಗಡೆ ಮಾಡಿದ್ದರೂ, ಕೂಡ ಸರ್ಕಾರಿ ಹಾಸ್ಟೇಲ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಬಾಕಿ ವೇತನ ಬಿಡುಗಡೆ ಮಾಡದ ಶಾರ್ಪ ಮ್ಯಾನ ಪವರ ಏಜೆನ್ಸಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೆತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಉಪವಾಸ ಧರಣಿ ಸತ್ಯಾಗ್ರಹ ಕೈಗೊಳ್ಳಲಾಯಿತು.ಬೃಹತ ಪ್ರತಿಭಟನಾ ರ್ಯಾಲಿಯ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದ ಹೊರಗುತ್ತಿಗೆ ನೌಕರರು, ಧರಣಿ ಸತ್ಯಾಗ್ರಹ ಕೈಗೊಂಡು, ಹೊರಗುತ್ತಿಗೆ ನೌಕರರ ಬಾಕಿ ವೇತನ ಬಿಡುಗಡೆ ಮಾಡಬೇಕು, ಕನಿಷ್ಟ ವೇತನ ಜಾರಿಗೆ ತರಬೇಕು ಎಂಬ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.ಧರಣಿ ಸತ್ಯಾಗ್ರಹದಲ್ಲಿ ಸಂಘಟನೆಯ ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ, ಮೇಘರಾಜ ಕಠಾರೆ, ಕಾಶಿನಾಥ ಕಮಕನೂರ, ನರಸಮ್ಮ ಚಂದನಕೇರಾ, ನಾಗರತ್ನ ಮದನಕೇರಾ, ಬಾಬು ಹೊಸಮನಿ, ರವಿ ಯರಗೋಳ, ನಾಗರಾಜ ಕಟ್ಟಿಮನಿ, ನರಸಮ್ಮ ಕೊಂಡಂಪಳ್ಳಿ, ಪರಮೇಶ್ವರ ಕಾಂತಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ-ಡಾ ಎಂ ಬಿ ಹಡಪದ ಸುಗೂರ ಎನ್