ಕೊಲೆ: ಕಠಿಣ ಕ್ರಮಕ್ಕೆ ಆಗ್ರಹ…

ಕೊಲೆ: ಕಠಿಣ ಕ್ರಮಕ್ಕೆ ಆಗ್ರಹ…

Share

ಜೇವರ್ಗಿ:ಬೆಂಗಳೂರು ನಟಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಆರೋಪದ ಮೇಲೆ ಅಪಹರಿಸಿಕೊಂಡು ಚಿತ್ರದುರ್ಗದಿಂದ ಹೋದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿರುವ ಪ್ರಕರಣದಲ್ಲಿ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ(ರಿ) ಕಲಬುರಗಿ ಮಹಿಳಾ ಘಟಕ ಅಧ್ಯಕ್ಷರು ಭಾಗ್ಯಶ್ರೀ ಎಂ ಪಾಟೀಲ್ ಅವರು ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿ, ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಅದಕ್ಕೆ ಕಾನೂನು ಶಿಕ್ಷೆ ನೀಡುತ್ತಿತ್ತು.ಅದು ಬಿಟ್ಟು ನಟ ದರ್ಶನ ಅವರಾಗಲಿ ಅಥವಾ ಅವರ ಹಿಂಬಾಲಕರಾಗಲಿ ಶಿಕ್ಷೆ ನೀಡುವುದಕ್ಕೆ, ಕೊಲೆ ಮಾಡುವುದಕ್ಕೆ ಅಧಿಕಾರ ನೀಡಿದವರಾರು? ಕೃತ್ಯವನ್ನು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಉಗ್ರವಾಗಿ ಖಂಡಿಸುತ್ತದೆ ಮತ್ತು ರೇಣುಕಾಸ್ವಾಮಿ ಕುಟುಂಬಕ್ಕೆ ಸೂಕ್ತ ಪರಿಹಾರವನು ನೀಡಬೇಕು ಮತ್ತು ಕೊಲೆ ಘಟನೆಯ ಎಲ್ಲರಿಗೂ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸುತ್ತದೆ. ಕಠಿಣ ಶಿಕ್ಷೆ ನೀಡದಿದ್ದಲ್ಲಿ ಸಂಘಟನೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಒತ್ತಾಯಿಸಿದ್ದಾರೆ.
ವರದಿ ಜಟ್ಟಪ್ಪ ಎಸ್ ಪೂಜಾರಿ


Share