ಹೊಸ ಮನೆಯ ಕೀ ಪಡೆದ ಫಲಾನುಭವಿ ನಾಗಮ್ಮ.

ಹೊಸ ಮನೆಯ ಕೀ ಪಡೆದ ಫಲಾನುಭವಿ ನಾಗಮ್ಮ.

Share

ನಗರದ ವಾರ್ಡ್ ನಂಬರ್ 31 ರ ನಗರಸಭೆ ಸದಸ್ಯರಾದ ಶ್ರೀಮತಿ ಸುಜಾತಾ ರಮೇಶ್ ಮತ್ತು ಸ್ನೇಹಿತರ ಬಳಗದ ವತಿಯಿಂದ ಮಾರುತಿನಗರದ ವಾರ್ಡ್ ಸಂಖ್ಯೆ 31 ರ ಚಂದ್ರಶೇಖರ್ ಭಾರತಿ ಶಾಲೆಯ ಹಿಂಭಾಗ ವಾಸವಿರುವ ಪ್ರದೇಶದ ನಿವಾಸಿಯಾದ ನಾಗಮ್ಮ ಎಂಬುವರು ಈ ಹಿಂದೆ ಗುಡಿಸಲು ಮನೆಯಲ್ಲಿ ವಾಸವಿದ್ದು ಅವರಿಗೆ ಸುಮಾರು 3 ಲಕ್ಷ ವೆಚ್ಚದಲ್ಲಿ AC ಶೀಟ್ ಮನೆಯನ್ನು ಉಚಿತವಾಗಿ ಕಟ್ಟಿಸಿ ಕೊಡುವುದರ ಮುಖಾಂತರ ಈ ದಿನ ಅ ಹೊಸ ಮನೆಯ ಕೀ ಅನ್ನು ಫಲಾನುಭವಿಗಳಾದಂತಹ ನಾಗಮ್ಮನವರಿಗೆ ಕೊಡುವುದರ ಮೂಲಕ ಅನಂತ್ ಕುಮಾರ್ ಸರ್ ಮತ್ತು ಅವರ ಕುಟುಂಬ ವರ್ಗ ಉದ್ಘಾಟನೆಯನ್ನು ಮಾಡಿತು. ಕಳೆದ ವರ್ಷ ಅಂದರೆ 2023 ರಲ್ಲಿ ಇದೇ ಪ್ರದೇಶದಲ್ಲಿ ಹೊನ್ನಮ್ಮ ಎಂಬುವರಿಗೆ ಉಚಿತವಾಗಿ ಮನೆಯನ್ನು ಕಟ್ಟಿಸಿ ಕೊಡಲಾಗಿತ್ತು.ಈ ಬಾರಿ ನಾಗಮ್ಮನವರಿಗೆ ಮನೆಯನ್ನು ಕಟ್ಟಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಬಳಗದ ಮುಖ್ಯಸ್ಥರಾದ ರಮೇಶ್ ಮಾತನಾಡಿ ಅನಂತ್ ಕುಮಾರ್ ಸರ್ ಮತ್ತು ಅವರ ಕುಟುಂಬ ವರ್ಗ ಸದಾ ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿದ್ದು. ನಮ್ಮ ತಂಡದ ಬೆನ್ನೆಲುಬಾಗಿ ನಿಂತು ಸದಾ ಕಾಲ ಉತ್ತಮ ಕಾರ್ಯಗಳಿಗೆ ಸ್ಪಂದಿಸುತ್ತಾ ಬಂದಿರುತ್ತಾರೆ .ಅವರಿಗೆ ನಮ್ಮ ತಂಡದ ಪರವಾಗಿ ಧನ್ಯವಾದಗಳು. ಹಾಗೂ ಈ ನಮ್ಮ ತಂಡದಲ್ಲಿ ಎಲ್ಲಾ ಒಳ್ಳೆಯ ಮನಸ್ಸುಗಳು ಒಂದಾಗಿ ಪ್ರತಿ ವರ್ಷ ಸರ್ಕಾರದ ಯಾವುದೇ ಅನುದಾನಗಳಿಗೆ ಕಾಯದೆ ಎಲ್ಲರೂ ಸೇರಿ ಪ್ರತಿ ತಿಂಗಳು ಸ್ವಲ್ಪ ಪ್ರಮಾಣದಲ್ಲಿ ಹಣವನ್ನು ಉಳಿತಾಯ ಮಾಡಿ ಅ ಹಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸುಮಾರು 40 ಬಡ ಕುಟುಂಬಗಳಿಗೆ ಉಚಿತವಾಗಿ ಔಷಧಿಗಳನ್ನು ಕೊಡಿಸುತ್ತಾ ಬಂದಿತ್ತು .ಪ್ರತಿವರ್ಷ ಒಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗೆ ಉಚಿತವಾಗಿ ಲ್ಯಾಪ್ ಟಾಪ್ ಕೊಡುವುದು ಹಾಗೂ ಸ್ವಯಂ ಉದ್ಯೋಗ ಕಲ್ಪಿಸಲು ಪ್ರತಿ ವರ್ಷ 3 ಫಲಾನುಭವಿಗಳಿಗೆ ಟೈಲರಿಂಗ್ ಯಂತ್ರ ಕೊಡುವುದು ಹಾಗೂ ಬಡ ಕುಟುಂಬದವರು ಅಂತ್ಯ ಸಂಸ್ಕಾರಕ್ಕೆ 5000 ರೂಗಳನ್ನು ಕೊಡುವುದು ಹಾಗೂ ಶಸ್ತ್ರ ಚಿಕಿತ್ಸೆಗೆ ಒಳಪಟ್ಟರೆ 10000 ಸಾವಿರ ಸಹಾಯಧನವನ್ನು ಕೊಡುವುದು.ಈ ರೀತಿ ಕಾರ್ಯಗಳನ್ನು ಮಾಡಲಿಕ್ಕೆ ನಮ್ಮ ಬಳಗದ ಎಲ್ಲಾ ಸದಸ್ಯರು ಒಟ್ಟುಗೂಡಿ ಈ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತೇವೆ.ಈ ಕಾರ್ಯಕ್ಕೆ ಸ್ಪಂದಿಸಿದ ನಮ್ಮ ತಂಡದ ಸ್ನೇಹಿತರಿಗೆ ಧನ್ಯವಾದಗಳು ತಿಳಿಸಿದರು. ಈ ಸಂದರ್ಭದಲ್ಲಿ ಅನಂತ್ ಕುಮಾರ್ ರವರು ಮಾತನಾಡಿ ಈ ಹೊಸ ಮನೆಯಲ್ಲಿ ನಾಗಮ್ಮನವರಿಗೆ ದೇವರು ಆರೋಗ್ಯ ಆಯಸ್ಸು ಕೊಟ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಸುಜಾತ ರಮೇಶ್ ,ಜಗನ್ನಾಥ್ ರೈ ,ಸಂತೋಷ್ ಗಣೇಶ್, ಶ್ರೀಧರ್ , ಉಮೇಶ್ ನಾಯಕ್, ಕುಮಾರ್ ,ರವಿ,ಪವನ್,ನರೇಂದ್ರ ,ಪ್ರಶಾಂತ್ , ಶಫಿ, ರೇಷ್ಮಾ ,ರಿಜ್ವಾನ್ , ನಯಾಜ್ ಅಹಮದ್, ಅರುಣ್, ವಸಂತ್ ಉಪಸ್ಥಿತರಿದ್ದರು.
ವರದಿ ಪರ್ವಿಜ್ ಅಹಮದ್ ಅರಸೀಕೆರೆ


Share