ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆಯ ದೂರಿನ ಆಧಾರದ ಮೇಲೆ ಅರಣ್ಯ ಅಧಿಕಾರಿ ಸೇರಿ ಮೂವರ ಅಮಾನತು ಲಕ್ಷ್ಮಿಕಾಂತ್ ಪಾಟೀಲ್ ಮದ್ರಕಿ ಲಕ್ಷ್ಮಿಕಾಂತ್ ಪಾಟೀಲ ಮದ್ರಿಕಿ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆಯ ದೂರಿನ ಆಧಾರದ ಮೇಲೆ ಅರಣ್ಯ ಅಧಿಕಾರಿ ಸೇರಿ ಮೂವರ ಅಮಾನತು ಲಕ್ಷ್ಮಿಕಾಂತ್ ಪಾಟೀಲ್ ಮದ್ರಕಿ ಲಕ್ಷ್ಮಿಕಾಂತ್ ಪಾಟೀಲ ಮದ್ರಿಕಿ.

Share

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಪಾಟೀಲ್ ಮದ್ರಕಿ ಅವರು ಸುರಪುರ ತಾಲುಕಿನ ಸಾಮಾಜಿಕ ಅರಣ್ಯ ವಲಯ ಅಧಿಕಾರಿಗಳ ವಿರುದ್ಧ ಫೆಬ್ರವರಿ 2ನೇ ತಾರೀಕಿನಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತ ಯಾದಗಿರಿ ಅವರಿಗೆ ದೂರು ಸಲ್ಲಿಸಿದರು ಕೂಡ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವ ಕಾರಣ ಪಂಚಾಯತ್ ರಾಜ್ ಅಪರ ಮುಖ್ಯ ಕಾರ್ಯದರ್ಶಿಗಳಾದ ಅಂಜುಮ ಪರ್ವೇಜ ಅವರಿಗೆ ಮತ್ತು (ಸಿ ಇ ಓ )ಯಾದಗೀರ್ ರವರ ವಿರುದ್ಧ ದೂರು ಸಲ್ಲಿಸಿದಾಗ ಮಾನ್ಯ ಕಾರ್ಯದರ್ಶಿ ಅವರು ಸಿ ಇ ಓ ರವರಿಗೆ ಫೆಬ್ರವರಿ 2ನೇ ತಾರೀಖನಂದು ದೂರು ನೀಡಿದರು ಕೂಡ ನೀವು ಯಾವುದಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಸಿ ಇ ಓ ಅವರಿಗೆ ಪ್ರಶ್ನೆ ಮಾಡಿ ಹಾಗೂ ತ್ವರಿತವಾಗಿ ಕ್ರಮ ಕೈಗೋಳುವಂತೆ ಆದೇಶಿಸಿದರು ಅದರಿಂದ ಯಾದಗಿರಿ ಸಿಇಓ ಅವರು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದರು ಯಾದಗಿರಿ ಜಿಲ್ಲಾಧಿಕಾರಿಗಳ ನಿರ್ಲಕ್ಷತನದಿಂದ ಇನ್ನು ಹಲವಾರು ಇಲಾಖೆಗಳಲ್ಲಿ ಇದೇ ರೀತಿ ಅವ್ಯವರ ನಡೆದಿದ್ದು ಎಲ್ಲಾ ಇಲಾಖೆಗಳನ್ನು ಇದೇ ರೀತಿ ತನಿಖೆ ಮಾಡಿ ಕೂಲಿ ಕಾರ್ಮಿಕರಿಗೆ ಹಾಗೂ ಸರ್ಕಾರದ ಸೌಲಭ್ಯಗಳು ಕೊಡಿಸಬೇಕೆಂದು ಅದೇ ರೀತಿಯಾಗಿ ಕೃಷಿ ಇಲಾಖೆ ಹಾಗೂ ಗ್ರಾಮ ಪಂಚಾಯತಿಯಲ್ಲಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿಯೂ ಕೂಡ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ಸಂಪೂರ್ಣವಾಗಿ ಅವ್ಯವಾರವಾಗಿದ್ದು ಮುಂದಿನ ದಿನದಲ್ಲಿ ಎಲ್ಲಾ ಇಲಾಖೆಗಳಲ್ಲಿ ಕೂಡ ಸಮಗ್ರವಾಗಿ ತನಿಖೆ ಮಾಡಬೇಕೆಂದು ಸರ್ಕಾರಕೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಪಾಟೀಲ್ ಮದ್ರಕಿ ಸಂಬಂಧಪಟ್ಟ ಇಲಾಖೆಯವರಿಗೆ ಎಚ್ಚರಿಕೆ ನೀಡಿದ್ದಾರೆ ಒಂದು ವೇಳೆ ನಿರ್ಲಕ್ಷ ತೋರಿದರೆ ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Share