ಪುರಾಣ ಕೇಳಲು ಹರಿದು ಬಂದ ಭಕ್ತ ಜನಸಾಗರ

ಪುರಾಣ ಕೇಳಲು ಹರಿದು ಬಂದ ಭಕ್ತ ಜನಸಾಗರ

Share

ಇಂಡಿ: ವಿಜಯಪೂರ ಹಾಗೂ ಇಂಡಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಇರುವ ಇಂಡಿ ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿ ಕಾರ್ತಿಕ ಮಾಸದ ಜಾತ್ರೆಯ ಅಂಗವಾಗಿ ಶ್ರೀ ಮರುಳಸಿದ್ದೇಶ್ವರ ದೇವಾಲಯದ ಆವರಣದಲ್ಲಿ ತಡವಲಗಾ ಗ್ರಾಮದ ಹಿರೇಮಠದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಹಾಗೂ ಶ್ರೀ ಪ್ರೀತಂ ದೇವರ ದಿವ್ಯ ಸಾನ್ನಿಧ್ಯದಲ್ಲಿ ಖ್ಯಾತ ಪುರಾಣಿಕರಾದ ಶ್ರೀ ಶಿವಾನಂದಯ್ಯ ಶಾಸ್ತ್ರಿಗಳು ಹೇಳಿಕೊಡುವ ಅಬ್ಬೆ ತುಮಕೂರಿನ ವಿಶ್ವಾರಾಧ್ಯ ಪುರಾಣ ಕೇಳಲು ತಡವಲಗಾ ಗ್ರಾಮದ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಚಳಿಯನ್ನು ಲೆಕ್ಕಿಸದೆ ಚಿಕ್ಕ ಮಕ್ಕಳು ಹಾಗೂ ಮಹಿಳಿಯರು, ಹಿರಿಯರು, ಯುವಕರು ದುಂಡು ತಂಡೊಪಾಯ ತಂಡವಾಗಿ ಬರುತ್ತಿರುವುದನ್ನು ನೋಡಿದರೆ ಈ ಜನರು ಶ್ರೀ ಮರುಳಸಿದ್ದೇಶ್ವರ ದೇವರ ಮೇಲೆ ಇಟ್ಟಿರುವ ಆ ಭಕ್ತಿಯೇ ಸಾಕ್ಷಿ, ಸಾಯಂಕಾಲ ಏಳು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆ ವರಿಗೆ ಪುರಾಣ ಕೇಳುತ್ತಾರೆ.ಶ್ರೀ ಮರುಳಸಿದ್ದೇಶ್ವರ ಕಮೀಟಿ ಯವರು.ಭಕ್ತಿ ಶ್ರೇದ್ದೆಯಿಂದ ಪುರಾಣ ಕೇಳಲು ಬಂದ ಎಲ್ಲರಿಗೂ ವಿವಿಧ ಬಗೆಯ ಪ್ರಸಾದ್ ವ್ಯವಸ್ಥೆ ಮಾಡಿರುತ್ತಾರೆ.ಎಲ್ಲರೂ ಸರದಿ ಸಾಲಿನಲ್ಲಿ ನಿಂತು ಮಾಹಾಪ್ರಸಾದ ಸವಿಯುತ್ತಾರೆ.ತಡವಲಗಾ ಗ್ರಾಮದ ಬಹುತೇಕ ಜನರು ಅಡವಿ ವಸತಿಯಲ್ಲಿ ವಾಸವಾಗಿದ್ದಾರೆ. ಅವನ್ನು ಜೋಡಗುಡಿಗೆ ಕರೆತರಲು ತಡವಲಗಾ ಗ್ರಾಮ ಟ್ರಾಕ್ಟರ್ ಮಾಲಿಕರು,ಟಂ ಟಂ ಮಾಲಿಕರು ಹಾಗೂ ಗುಡ್ಸ್ ಮಾಲಿಕರ ಸಂಘದವರು ಉಚಿತ ಪ್ರಯಾಣದ ಸೇವೆ ಸಲ್ಲಿಸಿದ್ದಾರೆ.ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಹಾಗೂ ಜಾತ್ರೆ ನಿಮಿತ್ತವಾಗಿ ಧನಗಳ ಜಾತ್ರೆ ಹಾಗೂ ಸಾಮೂಹಿಕ ವಿವಾಹಗಳು ಇದ್ದು.ಯಾರಾದರೂ ಹೆಸರು ನೋಂದಾಯಿಸುವರು ಇದೆ ದಿನಾಂಕ 18-11-2024 ರ ಒಳಗಾಗಿ ವಯಸ್ಕ ವದು -ವರ ತಮ್ಮ ಹೆಸರುಗಳನ್ನು ಕಮೀಟಿವರಿಗೆ ಖುದ್ದಾಗಿ ಭೇಟಿಯಾಗಿ ಹೆಸರು ನೋಂದಾಯಿಸಬೇಕು ಎಂದು ಜಾತ್ರೆಯ ಉಸ್ತುವಾರಿಗಳು ಹಾಗೂ ತಡವಲಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ತಮ್ಮಣ್ಣ ಪೂಜಾರಿ ಅವರು ತಿಳಿಸಿದ್ದಾರೆ.


Share