ಸೂರಾಲು: ಶಾಲಾ ಮಕ್ಕಳಿಗೆ ಉಚಿತ ಬರವಣಿಗೆ ಸಾಮಗ್ರಿ ಮತ್ತು ಸಮವಸ್ತ್ರ ವಿತರಣೆ

ಸೂರಾಲು: ಶಾಲಾ ಮಕ್ಕಳಿಗೆ ಉಚಿತ ಬರವಣಿಗೆ ಸಾಮಗ್ರಿ ಮತ್ತು ಸಮವಸ್ತ್ರ ವಿತರಣೆ

Share

ಕಾರ್ಕಳ; ಸೂರಾಲು ಗುಂಡಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಕಾರ್ಕಳ ಆಟೋರಿಕ್ಷಾ ಚಾಲಕ ಮಾಲಕರ ಸಂಘದಿಂದ ಉಚಿತ ಬರವಣಿಗೆ ಸಾಮಾಗ್ರಿ ಮತ್ತು ಸೂರಾಲು ಕೆಳಗಿನ ಗುತ್ತು ಶಶಿಧರ್ ಕುಲಾಲ್ ಕೊಡುಗೆಯಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮ ಜೂನ್ 12 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು,ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಉಮೇಶ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಕಳ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಹಿರಿಯ ನ್ಯಾಯವಾದಿ ,ಬಾಲಕೃಷ್ಣ ಶೆಟ್ಟಿ ಮಕ್ಕಳಿಗೆ ಬರವಣಿಗೆ ಸಾಮಾಗ್ರಿ ವಿತರಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನವನ್ನು ನೀಡುವ ಉದ್ದೇಶದಿಂದ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರ ಸಹಕಾರದಿಂದ ಉಚಿತ ಬರವಣಿಗೆ ಸಾಮಾಗ್ರಿಗಳನ್ನು ವಿತರಿಸಿದ್ದು ವಿಧ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳ ಬೇಕು ಎಂದ ಅವರು ಶಾಲಾ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಪೋಷಕರು ತಮ್ಮ ಮನೆಯ ದೈನಂದಿನ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡಾಗ ತಂದೆ ತಾಯಿಯ ದಿನನಿತ್ಯದ ಕಷ್ಟಗಳನ್ನು ಅರಿತುಕೊಳ್ಳುವ ಮೂಲಕ ಮಕ್ಕಳು ಸಂಸ್ಕಾರಯುತ, ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ, ವೈಜ್ಞಾನಿಕ ವರದಿಯ ಪ್ರಕಾರ ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮೆದುಳಿಗೆ ತೀವ್ರತರದ ತೊಂದರೆಯಾಗುತ್ತಿದ್ದು, ಮಕ್ಕಳ ಮೊಬೈಲ್ ಬಳಕೆಯ ಬಗ್ಗೆಯೂ ಪೋಷಕರು ಜಾಗೃತರಾಗಬೇಕಾಗಿದೆ ಎಂದರು. ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಸಂತೋಷ ರಾವ್ ಅವರು ಮಕ್ಕಳಿಗೆ ಭಗವದ್ಗೀತೆ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು, ಹಿರಿಯರಾದ ಅಣ್ಣಿ ಮೂಲ್ಯ ಅವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. ವೇದಿಕೆಯಲ್ಲಿ ಸೂರಾಲು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಕಾರ್ಕಳ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ತಾರಾನಾಥ್ ಕೋಟ್ಯಾನ್, ಆಟೋರಿಕ್ಷ ಚಾಲಕ ಮಾಲಕರ ಸಂಘದ ಸಂಘಟನಾ ಕಾರ್ಯದರ್ಶಿ ಶಿವಾನಂದ ಪೂಜಾರಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಬೀನ.ಇ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಶಾಲಾ ಸಹ ಶಿಕ್ಷಕಿ ಬೇಬಿ ಗೀತ ಸ್ವಾಗತಿಸಿ, ವಿದ್ಯಾಶ್ರೀ ವಂದನಾರ್ಪಣೆಗೈದರು, ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.


Share