ಕಲಬುರಗಿ:- ಯುವ ಪೀಳಿಗೆಗೆ ಸಮಾಜದ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ ಎಂದು ಖ್ಯಾತ ಚಿತ್ರಕಲಾವಿದ ಬಸವರಾಜ ಎಲ್. ಜಾನೆ ಹೇಳಿದರು.ಕಲಬುರಗಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕ್ರಿಯಾಶೀಲ ಗ್ಯಾಳೆಯರ ಬಳಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ 45ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ 45 ಯುವ ಕಲಾವಿದರ ಕಲಾ ಪ್ರದರ್ಶನವನ್ನು ಕನ್ನಡ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಕ.ಸಾ.ಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಕನ್ನಡ ಭವನ ಆವರಣದಲ್ಲಿ ಅತೀ ಶೀಘ್ರದಲ್ಲಿ ಕಲಾ ಗ್ಯಾಲರಿ ಸ್ಥಾಪಿಸಲಾಗುವುದು ಎಂದು ಘೋಷಿಸಿದರು.ಯುವ ಕಲಾವಿದರು ತಮ್ಮ ಚಿತ್ರಕಲೆಗಳು, ರೇಖಾಚಿತ್ರಗಳು, ಮುದ್ರಣ ಮತ್ತು ಛಾಯಾಗ್ರಹಣ ಸೇರಿದಂತೆ ಸಾಮಾಜಿಕ ಮತ್ತು ರಾಜಕೀಯ ವಿಷಯಗಳು ಮತ್ತು ಪರಂಪರೆಯ ರಕ್ಷಣೆಗೆ ಸಂಬಂಧಿಸಿದ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಒಂದು ದಿನದ “ಸಾಹಿತ್ಯ ಸಂಸ್ಕೃತಿ ಉತ್ಸವ” ಪ್ರದರ್ಶನವು ಅಪಾರ ಜನಸ್ತೋಮವನ್ನು ಸೆಳೆಯಿತು.ಚಿತ್ರಕಲಾ ಪ್ರದರ್ಶನದ ಸಂಚಾಲಕ ರೆಹಮಾನ್ ಪಟೇಲ್ ಮಾತನಾಡಿ, ನಗರದಲ್ಲಿ ನೂರಾರು ಕಲಾವಿದರಿದ್ದರೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಯುವ ಕಲಾವಿದರನ್ನು ಆಯ್ಕೆ ಮಾಡಿದ್ದೇವೆ ಎಂದರು.ಅತಿಥಿಗಳಾಗಿ ಜಗದೀಶ್ ಮಾರ್ಪಳ್ಳಿ, ಜಗದೀಶ್ ಮಾರ್ಪಳ್ಳಿ, ಮಲ್ಲಿನಾಥ ಪಾಟೀಲ, ವಿದ್ಯಾಸಾಗರ ದೇಶಮುಖ ಆಗಮಿಸಿದ್ದರು.ಗುಲ್ಬರ್ಗ ವಿಶ್ವವಿದ್ಯಾಲಯ, ಶರಣಬಸವ ವಿಶ್ವವಿದ್ಯಾಲಯ, ಎಂಎಂಕೆ ಕಲಾ ಕಾಲೇಜು, ದಿ ಆರ್ಟ್ ಇಂಟಿಗ್ರೇಷನ್ ಫೈನ್ ಆರ್ಟ್ ಕಾಲೇಜು ಮತ್ತು ಎನ್‍ವಿ ಪದವಿ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶನದ ಭಾಗವಾಗಿದ್ದರು.
ವರದಿ- ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್