ಜೇವರ್ಗಿ:-ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಇಂದು ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಬರುವ ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜೇವರ್ಗಿ ತಾಲ್ಲೂಕು ಪಂಚಾಯತ್ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ ಸೋಮಶೇಖರ ಜೇಡರ ಮಾತನಾಡಿ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ಓದುಗರಿಗಾಗಿ ರಾಜ್ಯದ ಪ್ರತಿ ಗ್ರಾಮ ಪಂಚಾಯತಗಳಿಗೆ ಒಂದರಂತೆ ಗ್ರಾಮ ಪಂಚಾಯತ್ ಗ್ರಂಥಾಲಯ ಪ್ರಾರಂಭ ಮಾಡಿದ್ದು. ಗ್ರಾಮದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ತಂದಿದ್ದು ಗ್ರಾಮದ ಎಲ್ಲರೂ ಪ್ರತಿನಿತ್ಯ ಗ್ರಂಥಾಲಯಕ್ಕೆ ಭೇಟಿ ನೀಡಿ ಜ್ಞಾನರ್ಜನೆ ಪಡೆದುಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಇನ್ನೊರ್ವ ಅತಿಥಿಯಾದ ಕಲಬುರಗಿ ಜಿಲ್ಲೆಯ ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕರಾದ ಪ್ರಭುದೇವ ಹೂಗಾರ ಕಾರ್ಯಕ್ರಮದ ಕುರಿತು ಮಾತನಾಡಿ, ಗ್ರಂಥಾಲಯಕ್ಕೆ ಸದ್ಯದಲ್ಲೇ ಒಂದು ಕಂಪ್ಯೂಟರ ಹಾಗೂ ಮೊಬೈಲ್ ನೀಡಲಾಗುತ್ತದೆ ಹಾಗೂ ಇದರ ಸದುಪಯೋಗ ವಿದ್ಯಾರ್ಥಿಗಳು ಮತ್ತು ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು, ಹಾಗೂ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮವನ್ನು ಸ್ವಹಸಹಾಯ ಸಂಘದ ಮಹಿಳಾ ಪ್ರತಿನಿಧಿಗಳಿಗೆ ಡಿಜಿಟಲ್ ಸಾಧನಗಳನ್ನೂ ಬಳಿಸುವ ಕುರಿತು ಹಾಗೂ ಡಿಜಿಟಲ್ ಸೇವೆಗಳನ್ನು ಹೇಗೆ ಪಡೆದು ಕೊಳ್ಳುವುದು ಎಂಬ ಮಾಹಿತಿಯನ್ನು ತರಬೇತಿ ಯಲ್ಲಿ ನೀಡಲಾಗುತ್ತದೆ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.ನಂತರ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ ಮಾತನಾಡಿದ ಗ್ರಂಥಾಲಯ ಮೇಲ್ವಿಚಾರಕರಾದ ಮಲ್ಲಿಕಾರ್ಜುನ ಎಸ್ ಬಿರಾದಾರ ನಮ್ಮ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಇಲ್ಲಿಯವರೆಗೆ ಸ್ವಂತ ಕಟ್ಟಡವಿಲ್ಲದೆ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಿತ್ತು. ಕಳೆದ ವರ್ಷ ತಾಲ್ಲೂಕು ಪಂಚಾಯತ್ ಅನುದಾನದಲ್ಲಿ ನಮ್ಮ ಗ್ರಂಥಾಲಯ ಕಟ್ಟಡ ರಿಪೇರಿಗಾಗಿ ವಿಶೇಷ ಅನುಧಾನ ನೀಡಿ ಅಭಿವೃದ್ಧಿ ಪಡಿಸಿದ ಅಧಿಕಾರಿಗಳಿಗೆ ವಿಶೇಷ ಧನ್ಯವಾದಗಳನ್ನು ಹೇಳಿ ನಮ್ಮ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕಗಳು, ಸ್ಪರ್ದಾ ವಿಷಯಗಳ ಪುಸ್ತಕಗಳು, ಕಥೆ, ಕಾದಂಬರಿ ಸೇರಿದಂತೆ ಎಲ್ಲಾ ವಿಷಯಗಳ ಪುಸ್ತಕಗಳು ಲಭ್ಯವಿದ್ದು ವಿದ್ಯಾರ್ಥಿಗಳು ಸೂಕ್ತ ಅಧ್ಯಯನ ಮಾಡಿ ಜೀವನದಲ್ಲಿ ದೊಡ್ಡ ವ್ಯಕ್ತಿಯಾಗಿರಿ ಎಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ ಬುರುಡ ವಹಿಸಿದ್ದರು. ಕಾರ್ಯಕ್ರಮದ ಅತಿಥಿಗಳಾಗಿ ಉಪಾಧ್ಯಕ್ಷರಾದ ಸವಿತಾ ಸಿದ್ದಣ್ಣ ಸದಸ್ಯರುಗಳಾದ ವೀರಭದ್ರಯ್ಯ ಹಿರೇಮಠ, ಶಿವಪ್ಪ ಗುಬ್ಯಾಡ, ಬಾಬು ಮಾಂಗ, ಲಕ್ಷ್ಮೀ ಯಲ್ಲಪ್ಪ, ಗ್ರಾಮದ ಪ್ರಮುಖರಾದ ವಿಜಯಕುಮಾರ ಬಿರಾದಾರ, ಬಸವರಾಜ ಕೊಬ್ರಿಶೆಟ್ಟಿ, ಸಿದ್ದು ಆಂದೋಲ, ದಾನೇಶ ಧನ್ನೂರ,ಸೇರಿದಂತೆ ಅಂಗನವಾಡಿ, ಆಶಾ, ಮತ್ತು ಎನ್. ಅರ್. ಎಲ್. ಎಂ ಕಾರ್ಯಕರ್ತೆಯವರಾದ ಸುಧಾ ಗುತ್ತೇದಾರ,ಸಂಗೀತಾ ನೆಲೋಗಿ, ಮಂಜುಳಾ ಬಜೇಂತ್ರಿ, ವಿಶಾಲಾಕ್ಷಿ ನಂದರಗಿಮಠ,ಸಾವಿತ್ರಿ ಕೋರವಾರ, ಮಹಾನಂದ ಹೇರೂರ,ಪ್ರೀತಿ ಗುಡಿ ಸೇರಿದಂತೆ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಡಾ ಎಂ ಬಿ ಹಡಪದ ಸುಗೂರ ಎನ್