ಜೂನ್ 22 ರಂದು ಹಡಪದ ಅಪ್ಪಣ್ಣ ಸಮಾಜದ ಪ್ರಪ್ರಥಮ ಪೀಠಾಧಿಪತಿಗಳಾದ ಪರಮ ಪೂಜ್ಯ ಲಿಂ.ಬಸವಪ್ರೀಯ ಅಪ್ಪಣ್ಣ ನವರ 16 ನೇ ವರ್ಷದ ಪುಣ್ಯಸ್ಮರಣೆಯ ಮತ್ತು ಅವರು ನಡೆದು ಬಂದ ಹಾದಿ.

ಜೂನ್ 22 ರಂದು ಹಡಪದ ಅಪ್ಪಣ್ಣ ಸಮಾಜದ ಪ್ರಪ್ರಥಮ ಪೀಠಾಧಿಪತಿಗಳಾದ ಪರಮ ಪೂಜ್ಯ ಲಿಂ.ಬಸವಪ್ರೀಯ ಅಪ್ಪಣ್ಣ ನವರ 16 ನೇ ವರ್ಷದ ಪುಣ್ಯಸ್ಮರಣೆಯ ಮತ್ತು ಅವರು ನಡೆದು ಬಂದ ಹಾದಿ.

Share

ತಂಗಡಗಿ:– ಪರಮ ಪೂಜ್ಯ ಲಿಂ . ಶ್ರೀ ಬಸವಪ್ರೀಯ ಹಡಪದ ಅಪ್ಪಣ್ಣ ಮಹಾಸ್ವಾಮಿಗಳು ಸುಕ್ಷೇತ್ರ ತಂಗಡಗಿ.ಲಿಂ. ಶ್ರೀ ಬಸವಪ್ರೀಯ ಹಡಪದ ಅಪ್ಪಣ್ಣ ಮಹಾಸ್ವಾಮಿಗಳ 16 ನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮ ದಿನಾಂಕ 22-06-2024 ರಂದು ಮಂಗಳವಾರ ದಿನದಂದು ಕೂಡಲಸಂಗಮ ಪಕ್ಕದ ತಂಗಡಗಿ ಯಲ್ಲಿ ನಡೆಯಲಿದೆ,ಲಿಂ. ಬಸವಪ್ರೀಯ ಅಪ್ಪಣ್ಣ ಮಹಾ ಸ್ವಾಮೀಜಿಗಳ ಜೀವನ ಚರಿತ್ರೆ’ ಮತ್ತು ಶ್ರೀಗಳ ಪರಿಚಯ
ದಿನಾಂಕ:- 01-06-1977ರಂದು ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲ್ಲೂಕಿನ ಲಿಂಗದ ಹಳ್ಳಿ ಗ್ರಾಮದ ಶರಣ ದಂಪತಿಗಳಾದ ಮಲ್ಲೇಶಪ್ಪ ಮತ್ತು ವೀರಮ್ಮನವರ ಚಿತ್ ಗರ್ಭದಲ್ಲಿ ಜನಿಸಿದ ಇವರಿಗೆ “ಮೌನೇಶ’ ನೆಂದು ನಾಮಕರಣ ಮಾಡ ಲಾಯಿತು, ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಸ್ವ ಗ್ರಾಮದಲ್ಲಿ ಮುಗಿಸಿ, ಹೈಸ್ಕೂಲ್‌ ಶಿಕ್ಷಣ ವನ್ನು ಹಿರೇ ಮನ್ನಾಪೂರದಲ್ಲಿ ಮುಗಿಸಿದರು, ಮುಂದೆ ಬಸವನ ಬಾಗೇವಾಡಿ ತಾಲ್ಲೂಕಿನ ಗೊಳಸಂಗಿ ಗ್ರಾಮದಲ್ಲಿ PUC ಯನ್ನು ಮುಗಿಸಿದರು, ನಂತರ ಗದಗ ಜಿಲ್ಲೆಯ ನರೇಗಲ್ಲದ. ಅನ್ನದಾನೇಶ್ವರ ಕಾಲೇಜಿ ನಲ್ಲಿ ಬಿ.ಎ ಪದವಿ ಯನ್ನು ಪಡೆದರು.
ತಮ್ಮ ಬಾಲ್ಯ ದಲ್ಲಿಯೇ ನಾಯಕತ್ವದ ಗುಣ ಗಳನ್ನು ಬೆಳೆಸಿಕೊಳ್ಳುತ್ತಾ ಊರಿಗೆ ಬಂದಾಗ ಗೆಳೆಯ ರೊಂದಿಗೆ ತಮ್ಮ ನಾಯಕತ್ವ ದಲ್ಲಿ ಹಲವಾರು ಸಣ್ಣ ಪುಟ್ಟ ಕೆಲಸ ಕಾರ್ಯಕ್ರಮ ಗಳನ್ನು ಮಾಡುತ್ತಾ ಹಿರಿಯ ರೊಂದಿಗೆ ಶಹಬ್ಬಾಶ್ ಗಿರಿಯನ್ನು ಪಡೆದು ಕೊಳ್ಳುತ್ತಿದ್ದರು. ಮತ್ತು ಮನೆಯೆ ಮೊದಲ ಪಾಠಶಾಲೆ ಎಂಬಂತೆ ಮನೆಯಲ್ಲಿಯೇ ಎಲ್ಲಾ ಸಹೋದರ ರೊಂದಿಗೆ ಸಂಗೀತ ಕಲೆಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಮತ್ತು ಅವರ ಮನೆಯೆ ಸಂಗೀತ ಶಾಲೆ ಯಾಗಿತ್ತು, ಹಲವಾರು ವಚನ ಹಾಡು ಗಳನ್ನು ಹಾಡುತ್ತಾ ಕ್ಯಾಸೆಟ್(ಧ್ವನಿಸುರುಳಿ) ಗಳನ್ನು ಮಾಡಿದರು. ತಮ್ಮ ಉನ್ನತ ಶಿಕ್ಷಣ ಕ್ಕಾಗಿ ಚಿತ್ರ ದುರ್ಗದ ಬೃಹನ್ ಮಠದಲ್ಲಿ (ಎಮ್.ಎ) ಪದವಿ ಪ್ರವೇಶವನ್ನು ಪಡೆದರು. ಅಲ್ಲಿ ಹಲವಾರು ಶರಣರ ಮಧ್ಯದಲ್ಲಿ ಬೆಳೆದು ತಮ್ಮ ಆಸೆಯಂತೆಯೆ ಶರಣ ಸತ್ಸಂಗದಲ್ಲಿ ವಿದ್ಯಾಭ್ಯಾಸ ವನ್ನು ಮುಂದುವರಿಸಿದರು.ಡಾll ಶಿವಮೂರ್ತಿ ಮುರುಘಾ ಶರಣರು ಇವರ ನಡೆ-ನುಡಿ, ಆಚಾರ- ವಿಚಾರ ಇವರ ನಾಯಕತ್ವದ ಗುಣಗಳನ್ನು ನೋಡಿ ಇವರು ಸಾಮಾನ್ಯವಾದವರಲ್ಲ, ಇವರು ಸಾಧಕರು ಇಂಥವರನ್ನು ಬೆಳೆಸಬೇಕು ಎಂದು ತಮ್ಮ ಹತ್ತಿರದಲ್ಲಿ ಕರೆದುಕೊಂಡು ಸಮಾಜ ಸೇವೆಯ ತರಬೇತಿ ನೀಡುವ ಮೂಲಕ ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡು ಸಮಾಜ ಸೇವೆಯ ಲಾಂಛನವಾದ ಕಾವಿ ದೀಕ್ಷೆ ಯನ್ನು ನೀಡಿದರು. ಇಲ್ಲಿಂದ “ಮೌನೇಶ” ಎಂಬುವರು ಬದಲಾಗಿ ‘ಬಸವಪ್ರೀಯ ಹಡಪದ ಅಪ್ಪಣ್ಣ ಮಹಾ ಸ್ವಾಮಿಗಳು’ ” ಎಂದು ನಾಮಕರಣ ಮಾಡಿ ನೀವಿನ್ನು ಒಂದು ಮನೆಯ ಮಗನಾಗದೆ ಇಡೀ ಸಮಾಜದ ಜವಾಬ್ದಾರಿ ಯನ್ನು ನಿಭಾಯಿಸಬೇಕು ಎಂದು ಗುರೂಜಿಯವರು ಸಮಾಜ ಸೇವೆಯ ಭೋದನೆ ಮಾಡಿದರು.ನಂತರ ಎಲ್ಲೆಲ್ಲೂ ಇದ್ದ ಹಡಪದ ಸಮಾಜ ಬಾಂಧವರನ್ನು ಹುಡುಕಿ ಕೊಂಡು ಅವರಲ್ಲಿ ನಾಯಕತ್ವದ ಗುಣಗಳನ್ನು ತುಂಬಿ ಹಡಪದ ಸಮಾಜ ಸಂಘಟನೆಗೆ ಕರೆಕೊಟ್ಟರು. ಅವರ ಜೊತೆ ತಾವುಗಳು ಸೇರಿ ಬಸ್ಸಿನಲ್ಲಿ ,ಕೆಲವು ಹಳ್ಳಿಗಳಿಗೆ ಕಾಲ್ನಡಿಗೆಯ ಮುಖಾಂತರ ರಾಜ್ಯದ ಕೆಲವೇ ಕೆಲವು ನಾಯಕ ರೊಂದಿಗೆ ಹಳ್ಳಿ-ಹಳ್ಳಿಗೆ, ಮನೆ-ಮನೆಗಳಿಗೆ , ಅಂಗಡಿಗಳಿಗೆ ಹೋಗಿ ನೋಡಪ್ಪಾ ನಾವು ಹಡಪದ ಸಮಾಜದವರು ನಾವು ಸಮಾಜ ಸಂಘಟನೆ ಮಾಡಲು ಬಂದಿದ್ದೇವೆ. ನೀವು ದಯಮಾಡಿ ನಮ್ಮೊಂದಿಗೆ ಕೈ ಜೋಡಿಸಿ, ಎಂದಾಗ ಕೆಲವರು ತಮ್ಮ ಕೈಲಾದ ಸಹಾಯ ವನ್ನು ಮಾಡಿದರು, ಮತ್ತೆ ಕೆಲವರು ಶ್ರೀಗಳ ಜೊತೆ ಹೆಜ್ಜೆ ಹಾಕಿ ಸಮಾಜ ಸಂಘಟನೆ ಯಲ್ಲಿ ಭಾಗಿಯಾಗಿದ್ದು ಉಂಟು,ಈ ರೀತಿಯಲ್ಲಿ ಕರ್ನಾಟಕ. ಮಹಾರಾಷ್ಟ್ರ..ಗೊವಾ ರಾಜ್ಯದ ತುಂಬೆಲ್ಲ ಸಮಾಜ ಸಂಘಟನೆ ಮಾಡಿ, ನೀವು ನಮಗೆ ಹಣ ಕೊಡಬೇಡಿ , ದವಸ ಧಾನ್ಯಗಳನ್ನು ಕೊಡಬೇಡಿ ನೀವು ನಮ್ಮೊಂದಿಗೆ ಕೈ ಜೋಡಿಸಿದರೆ ಸಾಕು ಎನ್ನುತ್ತಾ ಸಮಾಜ ಸಂಘಟನೆ ಮಾಡಿದ ಪುಣ್ಯಾತ್ಮರನ್ನೊಮ್ಮೆ ನೆನಪಿಸಿಕೊಳ್ಳೋನ ಪರಮ.ಪೂಜ್ಯ ಲಿಂ. ಶ್ರೀ ಬಸವಪ್ರೀಯ ಹಡಪದ ಅಪ್ಪಣ್ಣ ಮಹಾ ಸ್ವಾಮಿಗಳು 2005 ರಂದು ತಂಗಡಗಿಯ ಸಕಲ ಗ್ರಾಮಸ್ಥರ ಸಹಕಾರದೊಂದಿಗೆ ಒಂದು ಚಿಕ್ಕ ಕೋಣೆ ಮತ್ತು (ಶ್ರೀ ನೀಲಾಂಭಿಕಾ ನೂತನವಾಗಿ ದೇವಸ್ಥಾನ) ದಲ್ಲಿ
ಶ್ರೀಗಳ ವಸತಿಯ ಸ್ಥಳ. (ಊರಿ ನಿಂದ 1.ಕಿಲೋಮೀಟರ್ ದೂರ) ಅಲ್ಲಿಯೇ ಅವರ ಜೀವನ ಯಾರೂ ಸಹಾಯಕರಿಲ್ಲ, ಸಮಾಜದ ಸಂಘಟನೆಯ ಜವಾಬ್ದಾರಿಯನ್ನು ಎಷ್ಟಿತ್ತೆಂದರೆ ಅವರು ತಮ್ಮ ಹೊಟ್ಟೆಗೆ ಆಹಾರವನ್ನು ಲೆಕ್ಕಿಸದೇ, ಊಟಕ್ಕೂ ಸರಿಯಾದ ವ್ಯವಸ್ಥೆ ಇಲ್ಲದೆ ಎಷ್ಟೋ ಸಾರಿ ಒಣ (ಮಂಡಾಳ) ಚುರುಮುರಿ ತಿಂದು ಕೆಲವು ಸಂದರ್ಭಗಳಲ್ಲಿ ಯಾವುದಾದರೂ ಒಂದು ಹಣ್ಣು ತಿಂದು ಸಾಕಷ್ಟು ಸಾರಿ ಖಾಲಿ ಹೊಟ್ಟೆ ಯಲ್ಲಿ ನೀರು ಕುಡಿದು ‘ಬಸವಾ ಬಸವಾ” ಎಂದು ಮಲಗಿದ್ದೂ ಉಂಟು. ಇದೆಲ್ಲಾ ಯಾಕೆಂದರೆ ಸಣ್ಣ ಸಮಾಜ ಇಂದು ಹಳ್ಳಿ ಗೆ ಕೇವಲ ಬೆರಳ ಎಣಿಕೆ ಯಷ್ಟು ಕುಟುಂಬ ಗಳಿರುವ ಸಮಾಜ ನಮ್ಮ ಸಮಾಜ ವನ್ನು ಹೇಗೆ ಮೇಲೆತ್ತಬೇಕೆಂದು ಚಿಂತೆ, ಯಾರಾದರು ಶ್ರೀ ಮಠಕ್ಕೆ ಬರುವಾಗ ಬುತ್ತಿ ಯನ್ನು ತಂದರೆ ಅದನ್ನೇ 2-3ದಿನ ಕಾಯ್ದುಕೊಂಡು ಸ್ವಲ್ಪ ಸ್ವಲ್ಪವೇ ಉಂಡು, ಸ್ಥಳೀಯರ ಮನೆಗೆ ದಿನೇ ಪ್ರತಿ ಹೊರೆಯಾಗುವುದು ಬೇಡ ವೆಂದು (ಮನೆಗೆ ಊಟಕ್ಕೆ ಕರೆದರು ನಾನು ಅಡುಗೆ ಮಾಡಿದ್ದೆ ನಂದು ಊಟ ಆಯ್ತು ಎಂದೂ ಸುಳ್ಳು ಹೇಳಿ) ದಿನವನ್ನು ದೂಡಿದ ಅಪ್ಪ ಶ್ರೀ ಬಸವಪ್ರೀಯ ಹಡಪದ ಅಪ್ಪಣ್ಣ ಮಹಾಸ್ವಾಮಿಗಳು ಕರ್ನಾಟಕ. ಮಹಾರಾಷ್ಟ್ರ. ಗೋವಾ ರಾಜ್ಯಗಳಲ್ಲಿ 3ವರ್ಷ 3 ಸಾರಿ ವಚನ ಜ್ಯೋತಿ ಯಾತ್ರೆಯನ್ನು ಮಾಡುತ್ತಾ. ಸಮಾಜ ಸಂಘಟನೆ ಮಾಡಿ. ಸರ್ಕಾರದ ಕಣ್ಣು ತೆರೆಸಿ 2007 ರಲ್ಲಿ ಮಾನ್ಯ ಯಡಿಯೂರಪ್ಪ ನವರ ಸರ್ಕಾರದಲ್ಲಿ ಮಹಾ ಶರಣೆ ನೀಲಾಂಭಿಕಾ ತಾಯಿ . ಮತ್ತು ನಿಜಸುಖಿ ಹಡಪದ ಅಪ್ಪಣ್ಣ ಶರಣರ ಮೂಲ ಲಿಂಗೈಕ್ಯ. ಸ್ಥಳ ವಾದ ಸುಕ್ಷೇತ್ರ ತಂಗಡಗಿಗೆ 2.ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿದರು, ಗುಲ್ಬರ್ಗಾ ದಲ್ಲಿ ಹಡಪದ ಅಪ್ಪಣ್ಣ ಅದ್ಯಯನ ಪೀಠಕ್ಕೆ 50.ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿದರು. ಅವರ ಕನಸುಗಳು ಇನ್ನು ಹಲವಾರು ಇದ್ದವು ತಂಗಡಗಿ ಯಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ , ಅನಾಥ ಆಶ್ರಮ . ಅಂದ ಮಕ್ಕಳ ಶಾಲೆ. ಸಂಗೀತ ಶಾಲೆ. ಗೋಶಾಲೆ.ತಂಗಡಗಿ ನದಿ ದಂಡೆಯಲ್ಲೊಂದು ಪಕ್ಷಿಧಾಮ ,
ಒಂದಾ ಎರಡಾ. ಆದರೆ ಕಾಲನ ಕರೆಬಂತು.ಪರಮ.ಪೂಜ್ಯ.ಶ್ರೀ ಲಿಂ. ಬಸವಪ್ರೀಯ ಹಡಪದ ಅಪ್ಪಣ್ಣ ಮಹಾಸ್ವಾಮಿಗಳು ತಮ್ಮ 31 ನೇ ಕಿರಿ ವಯಸ್ಸಿನಲ್ಲೆ ಅವರಿಗೆ ಬ್ರೈನ್‌ ಟ್ಯೂಮರ್ ಕಾಯಿಲೆ ಯಿಂದ ನಿಧನರಾದರು.ಇಂತಹ ಪುಣ್ಯಾತ್ಮರು ನಮಗಾಗಿ ನಮ್ಮ ಸಮಾಜಕ್ಕಾಗಿ ತಮ್ಮ ದೇಹ ವನ್ನು ಕರ್ಪೂರ ದಂತೆ ಸುಟ್ಟು ಸಮಾಜ ಸಂಘಟನೆ ಮಾಡಿದ ಶರಣರ ನ್ನು ನೆನೆಯೋಣ ಶರಣರ ಸ್ಮರಣೋತ್ಸವಕ್ಕೆ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ. ಇದೇ 22-06-2024 ರಂದು ಲಿಂ.ಬಸವಪ್ರೀಯ ಹಡಪದ ಅಪ್ಪಣ್ಣ ನವರ 16 ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಮುದ್ದೇಬಿಹಾಳ ತಾಲ್ಲೂಕಿನ ಸುಕ್ಷೇತ್ರ ತಂಗಡಗಿ ಹಡಪದ ಅಪ್ಪಣ್ಣ ನವರ ಪೀಠಾಧಿಪತಿಗಳಾದ ಶ್ರೀ ಅನ್ನಧಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಗದ್ದುಗೆ ಪೂಜೆ .ಮತ್ತು ಮಹಾ ಮಂಗಳಾರತಿ. ರುದ್ರಾಭೀಷೇಕ ಪೂಜೆ ನೆರವೇರುತ್ತದೆ. ಸಮಸ್ತ ಹಡಪದ ಅಪ್ಪಣ್ಣ ಸಮಾಜದ ಭಾಂಧವರು ಈ ಪುಣ್ಯಸ್ಮರಣೆಯಲ್ಲಿ, ಸಮಾಜದ ಬಂಧುಗಳು ಭಾಗವಹಿಸಿ ‌ಆಶೀರ್ವಾದ ಪಡೆದು ಪುನೀತ್ ರಾಗಿ ಎಂದು ಸಮಸ್ತ ಹಡಪದ ಬಂಧುಗಳಲ್ಲಿ. ವಿಶೇಷ್ ಪ್ರಾರ್ಥನೆ. ‌ಕಲಬುರಗಿ ಜಿಲ್ಲಾ ಹಡಪದ ಸಮಾಜದ ಸಂಘಟನಾ ಕಾರ್ಯದರ್ಶಿ ಮತ್ತು ಸಮಾಜದ ಸೇವಕ-ಡಾ . ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಸಹಸ್ರಾರು ಸಂಖ್ಯೆಯಲ್ಲಿ ಸಮಾಜದ ಬಂಧುಗಳಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದರು. ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ..


Share