ಅವಳಿ ತಾಲೂಕಾವೆಂದು ಪ್ರಸಿದ್ಧಿಯಾದ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಬೀಜ ಮತ್ತು ರಸಗೊಬ್ಬರ ಅಂಗಡಿಯ ಮಾಲೀಕರು ರೈತರಿಗೆ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ಮಹಾಂತೇಶ ಗೌಡ ನಂದಿಹಳ್ಳಿಯವರು ಕಲ್ಬುರ್ಗಿ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರಿಗೆ ಈ ಅವ್ಯವಸ್ಥೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಬೀಜ ಮತ್ತು ರಸಗೊಬ್ಬರ ಅಂಗಡಿಯ ಮಾಲೀಕರು ಅಧಿಕೃತ ರಸೀದಿಯ ಮೇಲೆ ಬರೆದುಕೊಡದೆ ಕೇವಲ ರೈತರಿಗೆ ಬಿಳಿ ಹಾಳೆಯ ಮೇಲೆ ಬಿಲ್ಲುಗಳನ್ನು ಬರೆದುಕೊಡುತ್ತಾರೆ ಇದಕ್ಕೆ ನೇರ ಹೊಣೆಗಾರರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಯೋ ಅಥವಾ ಅಂಗಡಿಯ ಮಾಲೀಕರೋ ನಕಲಿ ಬಿಲ್ಲು ಬರೆದುಕೊಟ್ಟರೆ. ಒಂದು ವೇಳೆ ರೈತರಿಗೆ ನಷ್ಟವಾದರೆ ಯಾರನ್ನು ಕೇಳಬೇಕು ಅದೇ ರೀತಿ ಯಡ್ರಾಮಿಪಟ್ಟಣದಲ್ಲಿ ಉದಾಹರಣೆಗೆ. ಅಗ್ರಿ ಸೀಡ್ಸ್ ಈಗಿನ ಎಂಆರ್‌ಪಿ ದರ 850 ಅಥವಾ 870 ರೂಪಾಯಿಗಳು ಇದ್ದರೆ ರಸಗೊಬ್ಬರ ಅಂಗಡಿಯ ಮಾಲೀಕರು ಮುಗ್ಧ ರೈತರಿಗೆ 1250 ರಿಂದ1300 ರೂಪಾಯಿಗಳವರೆಗೆ ಮಾರಾಟ ಮಾಡುತ್ತಿದ್ದಾರೆ ಅಲ್ಲದೆ ಅಧಿಕೃತ ಬಿಲ್ಲನ್ನು ಕೊಡದೆ ಕೇವಲ ಬಿಳಿ ಹಾಳೆಯ ಮೇಲೆ ಬರೆದು ಕೊಡುತ್ತಿದ್ದಾರೆ . ಅಂಗಡಿಯ ಮಾಲೀಕರಿಗೆ ರೈತರು ಬಿಲ್ಲನ್ನು ಕೇಳಿದರೆ ಬೇಕಾದರೆ ತೋಗೋ ಸಾಕಾದರೆ ಹೋಗು ಎಂದು ಮುಗ್ಧ ರೈತರಿಗೆ ಅಂಗಡಿಯ ಮಾಲೀಕರು ಗದರಿಸುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ನಮ್ಮಿಂದ ಏನು ಮಾಡಕ್ಕೆ ಆಗಲವೆಂದು ನಿರ್ಲಕ್ಷತನದ ಉಡಾಫೆಯ ಉತ್ತರ ನೀಡಿದ್ದಾರೆ ಇದಕ್ಕೆ ಸಂಬಂಧಪಟ್ಟ ಜೆವರ್ಗಿ ತಾಲೂಕ ಕೃಷಿ ನಿರ್ದೇಶಕ ಅಬ್ದುಲ್ ಮಾಜಿದ್ ಅವರು ಅನಧಿಕೃತ ರಸಗೊಬ್ಬರ ಅಂಗಡಿ ಮಾಲೀಕರ ಮೇಲೆ ಮತ್ತು ಅಧಿಕೃತ ಬಿಲ್ಲು ನೀಡದ ಅಂಗಡಿಗಳ ಮೇಲೆ ಯಾವ ರೀತಿಯ ಸೂಕ್ತ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ ಈಗಾಗಲೇ ತಾಲೂಕಿನಲ್ಲಿ ಅಧಿಕೃತ ಪರವಾನಿಗೆ ಇಲ್ಲದೆ ರಸಗೊಬ್ಬರ ಕ್ರಿಮಿನಾಶಕ ಮಾರಾಟಗಾರರ ಮೇಲೆ ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಕೃಷಿ ನಿರ್ದೇಶಕ ಅಧಿಕಾರಿಗಳು ಕಡಿವಾಣ ಹಾಕಬೇಕಿದೆ ಒಂದು ವೇಳೆ ನಿರ್ಲಕ್ಷ ತೋರಿದರೆ ತಾಲೂಕಿನ ಹಳ್ಳಿಯ ರೈತರೊಂದಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಮಹಾಂತೇಶ್ ಗೌಡ ನಂದಿಹಳ್ಳಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.
ವರದಿ ಜಟ್ಟಪ್ಪ ಎಸ್ ಪೂಜಾರಿ