ಕುಮಟಾ :-ತಾಲೂಕಿನ ಕೋಡ್ಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗುವ ಭಾಗಗಳಲ್ಲಿ ಮಳೆಗಾಲದ ಮುನ್ನ ಸಮರ್ಪಕವಾಗಿ ಜಂಗಲ್ ಕಟಿಂಗ್ ಮಾಡದೇ ಇರುವುದರಿಂದ ಮಳೆಗಾಲದಲ್ಲಿ ಕಂಬಗಳು ಧರೆಗುರುಳುತ್ತಿದ್ದು ಹೆಸ್ಕಾಂ ಅಧಿಕಾರಿಗಳು ಹಾಗೂ ಹೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷವೇ ಕಾರಣ ಎಂಬುದು ಆರೋಪ ಕೇಳಿಬಂದಿದೆ.ಕೋಡ್ಕಣಿ ವ್ಯಾಪ್ತಿಯಲ್ಲಿ ಒಣಗಿದ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಎರಡು ಕಂಬಗಳು ಜನರು ವಾಹನಗಳು ಸಂಚರಿಸುವ ರಸ್ತೆಯಲ್ಲಿ ನೆಲೆಕ್ಕೆರುಳಿದೆ. ಇನ್ನೂ ನಾಲ್ಕೈದು ಕಂಬಗಳು ಬೀಳುವ ಹಂತಕ್ಕೆ ತಲುಪಿದೆ.ಕೋಡ್ಕಣಿ ಭಾಗದಲ್ಲಿ ವಿದ್ಯುತ್ ಸಂಪರ್ಕ ನೀಡುವಲ್ಲಿ ಕುಮಟಾ ಹೆಸ್ಕಾಂ ವಿಫಲವಾಗಿದೆ.ದಿನದ 10 ಗಂಟೆಯೂ ವಿದ್ಯುತ ಸೌಲಭ್ಯ ಕಲ್ಪಿಸಲಾಗದ ಸ್ಥಿತಿಗೆ ಕುಮಟಾ ಹೆಸ್ಕಾಂ ಬಂದೊದಗಿದೆ.ಇದರಿಂದ ಜನರು ವಿದ್ಯುತ ಸಂಪರ್ಕ ಇಲ್ಲದೆ ಗೊಂದಲಗೀಡಾಗಿದ್ದಾರೆ. ಮೇಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜನರ ಸಮಸ್ಯೆ ಸ್ಪಂದಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ