ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ ನಲ್ಲಿ ಪ್ರಥಮ ಸ್ಥಾನ ವಿಜೇತರಾದ ಕಾರ್ಕಳ ಹಿರ್ಗಾನದ ರಿಷಿಕಾ

ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ ನಲ್ಲಿ ಪ್ರಥಮ ಸ್ಥಾನ ವಿಜೇತರಾದ ಕಾರ್ಕಳ ಹಿರ್ಗಾನದ ರಿಷಿಕಾ

Share

ಕುಂದೇಶ್ವರರನ್ನು ಸನ್ಮಾನ ಮಾಡುವ ಕಾರ್ಯಕ್ರಮವು ಇಂದು ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಕಾರ್ಕಳ ಟೈಗರ್ ಸಂಘಟನೆ ಮಾಡಿದೆ.ಹಿರ್ಗಾನ ಕುಂದೇಶ್ವರ ದೇವಸ್ಥಾನದ ಬಳಿ ರಿಷಿಕಾ ರನ್ನು ಸನ್ಮಾನ ಮಾಡಲಾಯಿತು.ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಪ್ರೇರಕಾ ಶಕ್ತಿ ಬೋಳ ಪ್ರಶಾಂತ್ ಕಾಮತ್ ರವರು ರಿಷಿಕಾ ಕುಂದೇಶ್ವರರನ್ನು ಸನ್ಮಾನ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಹೋಟೆಲ್ ಮಧುರಾ ದ ಮಾಲಕರಾದ ಹರೀಶ್ ರವರು ನಮ್ಮೂರ ಪ್ರತಿಭೆಗೆ ರಾಜ್ಯ ಮಟ್ಟದಲ್ಲಿ ಮನ್ನಣೆ ಸಿಕ್ಕಿರುವುದು ಸಂತಸ ತಂದಿದೆ ಎಂದರು.ಮಕ್ಕಳಲ್ಲಿನ ಪ್ರತಿಭೆಗೆ ಉತ್ತೇಜನ ನೀಡುವ ಮೂಲಕ ಕಾರ್ಕಳ ಟೈಗರ್ಸ್ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮ ಮಾಡಲಿದೆ ಎಂದು ಹೇಳಿದರು.
ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಉದ್ಯಮಿ ಹರೀಶ್ ಆಚಾರ್ಯ ಭಾಗವಹಿಸಿ ಉತ್ತಮ ಸಂಸ್ಕಾರವನ್ನು ಮಕ್ಕಳ ಹಂತದಲ್ಲಿ ನೀಡಿದಾಗ ಆ ಪ್ರತಿಭೆ ಇನ್ನಷ್ಟು ಬೆಳಗ ಬಲ್ಲದು ಎಂದು ತಿಳಿಸಿದರು.ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮಾತನಾಡಿ ಬೋಳ ಪ್ರಶಾಂತ್ ಕಾಮತ್ ರವರ ಸಮಾಜ ಮುಖಿ ಕಾರ್ಯಗಳನ್ನು ಶ್ಲಾಘನೆ ಮಾಡಿದರು. ಕಾರ್ಕಳದ ರಾಜಕೀಯ ವ್ಯವಸ್ಥೆಯನ್ನು ಭದ್ರ ಪಡಿಸಲು ಬೋಳ ಪ್ರಭಾಕರ ಕಾಮತ್ ರವರು ಮಾಡಿದ ತ್ಯಾಗ ಹಾಗೂ ಆ ಮಾನವೀಯತೆಯನ್ನು ಅವರ ಪುತ್ರರು ಸಮಾಜದಲ್ಲಿ ಮುನ್ನಡೆಸಿ ಕೊಂಡು ಹೋಗುತ್ತಿರುವ ಬಗ್ಗೆ ತಿಳಿಸಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.ಗಂಗಾ ಭಟ್, ರಿಷಿಕಾ ಕುಂದೇಶ್ವರ ವೇದಿಕೆಯಲ್ಲಿದ್ದರು.ಪತ್ರಿಕೆ ಹಾಗೂ ನ್ಯೂಸ್ ಚಾನೆಲ್ ಸಂಪಾದಕರಾದ ವಸಂತ್ ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.


Share