ಕುಮಟಾ:ಪಟ್ಟಣದ ಮಾನೀರಿನ ದುರ್ಗಾಂಬ ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ಸಂಜೆ ಕಾರು ಮತ್ತು ಓಮಿನಿ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಎರಡು ವಾಹನದ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಓಮಿನಿ ಚಾಲಕ ಸಿರ್ಸಿ ತಾಲೂಕಿನ ಮಂಜುವಳ್ಳಿ ನಿವಾಸಿ ಸೂರಜ್ ಗಣಪತಿ ಹೆಗಡೆ ಹಾಗೂ ಕಾರಿನ ಚಾಲಕ ಬೆಳಗಾವಿಯ ರಾಮದುರ್ಗ ನಿವಾಸಿ ಸಂತೋಷ್ ಶಿವಣಪ್ಪ ಪರೀದ ಇವರಿಬ್ಬರೂ ಗಾಯಗೊಂಡಿದ್ದಾರೆ. ಕಾರಿನ ಚಾಲಕ ಸಂತೋಷ್ ಅವರು ತನ್ನ ಪತ್ನಿ ಹಾಗೂ ಇಬ್ಬರು ಗಳೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ತೆರಳುತ್ತಿದ್ದರು. ಓಮಿನಿ ಚಾಲಕ ಸೂರಜ್ ಅವರು ಕುಮಟಾದಿಂದ ಶಿರಸಿ ಕಡೆ ಹೋಗುತ್ತಿರುವಾಗ ಎರಡು ವಾಹನ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸೂರಜ್ ಹಾಗೂ ಸಂತೋಷ ಅವರ ಕಾಲು ಮುರಿದಿದೆ ಗಾಯಗೊಂಡವರನ್ನು ಸಳಿಯರ ಸಹಕಾರದೊಂದಿಗೆ 108 ವಾಹನದ ಮೂಲಕ ತಾಲೂಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ