ಖಾಸಗಿ ಫೋಟೋ ವೈರಲ್ ಮಾಡ್ತೀನಿ ಎಂದ ಪ್ರಿಯತಮ ಭೀಕರ ಕೊಲೆ : ಅಂದರ್.

ಖಾಸಗಿ ಫೋಟೋ ವೈರಲ್ ಮಾಡ್ತೀನಿ ಎಂದ ಪ್ರಿಯತಮ ಭೀಕರ ಕೊಲೆ : ಅಂದರ್.

Share

ಖಾಸಗಿ ಫೋಟೋ ಹಾಗೂ ವಿಡಿಯೋ ವೈರಲ್ ಮಾಡ್ತೀನಿ ಎಂದು ಬೆದರಿಕೆ ಹಾಕಿದ ಪ್ರಿಯತಮನನ್ನ ಪ್ರಿಯತಮೆ ಹಾಗೂ ಸಹೋದರ ಸೇರಿ ಭೀಕರವಾಗಿ ಕೊಲೆ ಮಾಡಿದ ಘಟನೆ ನಂಜನಗೂಡು ಟೌನ್ ನಲ್ಲಿ ನಡೆದಿದೆ.ಹೆಚ್.ಡಿ.ಕೋಟೆ ಹಂಪಾಪುರ ಗ್ರಾಮದ ನಿವಾಸಿ ರಾಜೇಶ್ ಮೃತ ದುರ್ದೈವಿ.ಈತನ ಮೇಲೆ ಕಲ್ಲುಚಪ್ಪಡಿ ಹಾಕಿ ಕೊಲೆಗೈದ ಪ್ರಿಯತಮೆ ಪ್ರೇಮಾ ಹಾಗೂ ಈಕೆಯ ಸಹೋದರ ಶಿವು ಇದೀಗ ಪೊಲೀಸರ ಅತಿಥಿಗಳು.ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ಪ್ರೇಮಾ 15 ವರ್ಷಗಳ ಹಿಂದೆ ನಂಜನಗೂಡಿನ ಶ್ರೀರಾಂಪುರ ನಿವಾಸಿಯನ್ನ ಮದುವೆ ಆಗಿದ್ದಳು.ಒಂದು ತಿಂಗಳ ಹಿಂದೆ ಪ್ರೇಮಾ ಪತಿ ತೀರಿಕೊಂಡಿದ್ದರು.ಪ್ರೇಮಾ ಪತಿಗೆ ರಾಜೇಶ್ ಸ್ನೇಹಿತನಾಗಿದ್ದ.ಆಗಾಗ ಮನೆಗೆ ಬಂದು ಪರಿಚಯ ಮಾಡಿಕೊಂಡಿದ್ದ.ಪರಿಚಯ ಸಲುಗೆ ಬೆಳೆದು ಅಕ್ರಮ ಸಂಭಂಧಕ್ಕೆ ತಿರುಗಿತ್ತು.ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು.ಇಬ್ಬರು ಇದ್ದ ಖಾಸಗಿ ಫೋಟೋ ಹಾಗೂ ಆಡಿಯೋಗಳನ್ನ ವೈರಲ್ ಮಾಡುವುದಾಗಿ ಪ್ರೇಮಾ ಗೆ ರಾಜೇಶ್ ಬೆದರಿಕೆ ಹಾಕಿದ್ದಾನೆ.ಇದೇ ವಿಚಾರದಲ್ಲಿ ಮಾತನಾಡಬೇಕೆಂದು ಪ್ರೇಮಾ ನಿನ್ನೆ ರಾತ್ರಿ ರಾಜೇಶ್ ನ ಮನೆಗೆ ಕರೆಸಿಕೊಂಡಿದ್ದಾಳೆ.ಈ ವೇಳೆ ಪ್ರೇಮಾ ಹಾಗೂ ಸಹೋದರ ಶಿವು ಇಬ್ಬರೂ ಸೇರಿ ರಾಜೇಶ್ ವಿರುದ್ದ ತಿರುಗಿಬಿದ್ದಿದ್ದಾರೆ.ತನಗೆ ಅಪಾಯ ಎಂದು ತಿಳಿದ ರಾಜೇಶ್ ಇವರಿಂದ ತಪ್ಪಿಸಿಕೊಂಡು ಓಡಿದ್ದಾನೆ.ಆರ್.ಪಿ.ರಸ್ತೆಯ 8 ನೇ ಕ್ರಾಸ್ ಬಳಿ ಅಡ್ಡಹಾಕಿದ ಪ್ರೇಮಾ ಹಾಗೂ ಶಿವು ಜೊತೆ ಜಗಳವಾಡಿ ಕಲ್ಲು ಚೆಪ್ಪಡಿಯನ್ನ ತಲೆ ಮೇಲೆ ಹಾಕಿ ಭೀಕರವಾಗಿ ಕೊಂದಿದ್ದಾರೆ.ನಂಜನಗೂಡು ಟೌನ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆದಿ ಆರೋಪಿ ಪ್ರೇಮ ಹಾಗೂ ಶಿವು ಇಬ್ಬರನ್ನೂ ಬಂಧಿಸಿದ್ದಾರೆ.


Share