ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

Share

ಅರಸೀಕೆರೆ : ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ನಗರದ ಹುಳಿಯಾರು ರಸ್ತೆಯಲ್ಲಿರುವ ಎಸ್‌ ಎಂ ಜೆ ಸಮುದಾಯ ಭವನದಲ್ಲಿ ಹೆಸರಾಂತ ಸೂಫಿ ಸಂತರಾದ ಹಜರತ್ ಇಮಾಮ್ ಘಜಾಲೀ ರಹಮತ್ ಉಲ್ಲಾ ಅಲೈ ರವರ ಹೆಸರಿನಲ್ಲಿ 2023/24ನೇ ಸಾಲಿನ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲ ಮುಖ್ಯ ಅತಿಥಿಗಳು ಗಿಡಕ್ಕೆ ನೀರು ಹಾಕುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸುನ್ನಿ ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಮುಫ್ತಿ ಮಹಮ್ಮದ್ ರಿಜ್ವಾನ್ ಖಾದ್ರಿ ರವರು ಪ್ರವಚನ ನೀಡಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಇನ್ನು ಉತ್ತಮವಾದ ಯಶಸ್ವಿ ಸಿಗಲಿ ಎಂದು ಆಶಿರ್ವಾಚನ ನೀಡಿದರು. ಈ ಸಂದರ್ಭದಲ್ಲಿ ನಗರದ ಎಲ್ಲಾ ಸುನ್ನಿ ಮಸೀದಿಯ ಧರ್ಮ ಗುರುಗಳು ಅವರ ಜೊತೆ ಉಪಸ್ಥಿತರಿದ್ದರು.ಗ್ಲೋಬಲ್ ಇಂಗ್ಲಿಷ್ ಸ್ಕೂಲ್ ಮುಖ್ಯಸ್ಥರಾದ ಅನ್ವರ್ ಸಾದಿ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಹಲವು ರೀತಿಯ ಸಲಹೆ ಸೂಚನೆಗಳನ್ನು ನೀಡಿದರು.ನಂತರ ನಮ್ಮ ಸುದ್ದಿ ವಾಹಿನಿ ಯೊಂದಿಗೆ ಸುನ್ನಿ ಮುಸ್ಲಿಂ ಜಮಾತ್ ಕಮೀಟಿಯ ಮಾಜಿ ಕಾರ್ಯದರ್ಶಿಗಳಾದ ರಿಯಾಜ್ ಪಾಷಾ ರವರು ಮಾತನಾಡಿ ಕಳೆದ ಮೂರು ವರ್ಷಗಳಿಂದ ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ನೀಡಲಾಗುತ್ತಿದ್ದು ಅದರ ಜೊತೆಯಲ್ಲಿ ಯಾರಾದರೂ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಹಣದ ಕೊರತೆ ಇದ್ದಂತಹ ವಿದ್ಯಾರ್ಥಿಗಳಿಗೆ ನಮ್ಮ ಕಮಿಟಿ ವತಿಯಿಂದ ಸಂಪೂರ್ಣ ವಿದ್ಯಾಭ್ಯಾಸ ಮಾಡಿಸುವುದಾಗಿ ತಿಳಿಸಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಬೇರೆ ಕಡೆ ಗಮನ ಕೊಡದೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡುವಂತೆ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಸುನ್ನಿ ಮುಸ್ಲಿಂ ಜಮಾತ್ ಕಮೆಟಿ ಅಧ್ಯಕ್ಷರಾದ ಸೈಯದ್ ರಫಿಕ್, ಉಪಾಧ್ಯಕ್ಷರಾದ ನೂರ್ ಮೊಹಮ್ಮದ್ ಶರೀಫ್, ಕಾರ್ಯದರ್ಶಿಗಳಾದ ನವಾಜ್ ಪಾಶ, ಕಮೆಟಿಯ ಎಲ್ಲಾ ಪದಾಧಿಕಾರಿಗಳು, ಹಾಗೂ ಅಪ್ರೋಜ್ ಪಾಷಾ, ಈ ಕೇ ರಿಯಾಜ್, ಕೌಸರ್ ಪಾಷಾ, ರಹತ್ ಅಲ್ಲಿ, ನಗರದ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.
ವರದಿ ಪರ್ವಿಜ್ ಅಹಮದ್


Share