ವಾರ್ಷಿಕ ವಿಶೇಷ ಶಿಬಿರ ಇಂದಿನ ವಿದ್ಯಾರ್ಥಿಗಳಿಗೆ ತುಂಬಾ ಮುಖ್ಯ ಡಾ. ಎನ್. ಜಿ. ಕಣ್ಣೂರ

ವಾರ್ಷಿಕ ವಿಶೇಷ ಶಿಬಿರ ಇಂದಿನ ವಿದ್ಯಾರ್ಥಿಗಳಿಗೆ ತುಂಬಾ ಮುಖ್ಯ ಡಾ. ಎನ್. ಜಿ. ಕಣ್ಣೂರ

Share

ಕಲಬುರಗಿ:-ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) 2023-24ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದ ಸಂಯೋಜನಾಧಿಕಾರಿಗಳಾದ ಡಾ. ಎನ್. ಜಿ. ಕಣ್ಣೂರ ಅವರು ಉದ್ಘಾಟಿಸಿ ಮಾತನಾಡುತ್ತಾ ಇಂತಹ ಶಿಬಿರಗಳು ಇಂದಿನ ವಿದ್ಯಾರ್ಥಿಗಳಿಗೆ ತುಂಬಾ ಮುಖ್ಯವಾಗಿದೆ. ನಮ್ಮ ದೇಶದ ಸೇವೆ ಎಂಬುದು ಹೊಸದೆನಲ್ಲ, ಮಹಾತ್ಮ ಗಾಂಧೀಜಿ, ಮದರ ಥೇರೆಸಾ, ಡಾ. ಅಂಬೇಡ್ಕರ ಮುಂತಾದವರು ಸೇವೆಗೆ ಹೆಸರಾಗಿದ್ದಾರೆ ಅವರ ಆದರ್ಶಗಳು ಇಂದಿನ ಯುವಜನರಿಗೆ ಮಾರ್ಗದರ್ಶನಗಳಾಗಿದೆ ಎಂದರು.ಮುಖ್ಯ ಅಥಿತಿಗಳಾಗಿ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಬಿ.ಬಿ. ಸರಡಗಿ ಮಾತನಾಡಿ ವಿಶೇಷ ಶಿಬಿರಗಳು ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿಗೆ ಪೂರಕವಾಗಿವೆ. ಶ್ರಮ ಸಂಸ್ಕøತಿಯನ್ನು ನಾವು ಗೌರವಿಸಿ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಿಂದ ಡಾ. ಸವಿತಾ ತಿವಾರಿ ವಹಿಸಿದರು. ವೇದಿಕೆಯ ಮೇಲೆ ಡೀನರಾದ ಡಾ. ವಿಜಯಕುಮಾರ ಸಾಲಿಮನಿ, ಡಾ. ರಾಜಕುಮಾರ ಸಲಗರ, ಡಾ. ವಿನೋದಕುಮಾರ ರಾಠೋಡ ಉಪಸ್ಥಿತರಿದ್ದರು. ಕಾರ್ಯಕ್ರಮ ಅಧಿಕಾರಿಗಳಾದ ಡಾ. ಶ್ರೀಮಂತ ಬಿ. ಹೋಳಕರ, ಡಾ. ನಾಗಪ್ಪ ಗೋಗಿ, ಪ್ರೊ. ಮೇರಿ ಮಾಥ್ಯೋಸ್, ಡಾ. ರವಿ ಬೌದ್ಧೆ, ಡಾ. ಸುರೇಶ ಮಾಳೆಗಾಂವ, ಡಾ. ಭಾಗಪ್ಪ ಚಲುವಾದಿ, ಡಾ. ಚಂದ್ರಕಂತ ಜಮಾದಾರ, ಶೆಶಿಕಾಂತ ಕೊಳ್ಳಿ, ಡಾ. ಶ್ಯಾಮಲಾಸ್ವಾಮಿ, ಡಾ. ಅರುಣಕುಮಾರ ಸಲಗರ ಸೇರಿದಂತೆ ಇತರರು ಹಾಜರಿದ್ದರು. ಕಾರ್ಯಕ್ರಮವನ್ನು ಡಾ. ಬಲಭೀಮ ಸಾಂಗ್ಲಿ ನಿರ್ವಹಿಸಿದರು. ಡಾ. ಶ್ರೀಮಂತ ಹೋಳಕರ ಸ್ವಾಗತಿಸಿದರು. ಡಾ, ನಾಗಪ್ಪ ಗೋಗಿಯವರು ವಂದಿಸಿದರು. ‌
ವರದಿ-ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್


Share