ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ರವರ ಗೆಲುವಿಗೆ ಕಾರಣಕರ್ತರಾದs ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣೆ ಸಮಾರಂಭವನ್ನು ರಾಜಾಜಿನಗರ ವಿಧಾನಸಭಾ ಮಂಡಲ ಬಿಜೆಪಿ ವತಿಯಿಂದ ಆಯೋಜಿಸಲಾಗಿತ್ತು.ಭಾರತಾಮಾತೆ, ಶ್ಯಾಮಪ್ರಸಾದ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾದ್ಯಾಯರವರ, ಜಯಪ್ರಕಾಶ್ ನಾರಾಯಣ್ ರವರ ಬಾವಚಿತ್ರಕ್ಕೆ ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ.ಮೋಹನ್ ರವರು,ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಪ್ತಗಿರಿಗೌಡ, ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರರಾವ್, ಮಹೇಂದ್ರಮೋದಿರವರು ಪುಷ್ಪನಮನ ಸಲ್ಲಿಸಿದರು.ಎಸ್.ಸುರೇಶ್ ಕುಮಾರ್ ರವರು ಮಾತನಾಡಿ 10ವರ್ಷ ಪ್ರಧಾನಮಂತ್ರಿಯಾಗಿ ದೇಶ ಸೇವೆ ಸಲ್ಲಿಸಿ, ಮೂರನೇಯ ಬಾರಿಗೆ ಪ್ರಧಾನಿ ಮಂತ್ರಿಯಾಗವುದು ಬಹಳ ಕಷ್ಟಕರ ಸಂಗತಿಯಾಗಿದೆ.ನರೇಂದ್ರಮೋದಿರವರ ಆಡಳಿತದಲ್ಲಿ ಆರ್ಥಿಕ ವ್ಯವಸ್ಥೆ ಉತ್ತಮವಾಗಿದೆ ಮತ್ತು ಮೋದಿರವರು ಸರ್ವವ್ಯಾಪಿ ವಿಶ್ವದ ನಾಯಕರಾಗಿ ಬೆಳದಿದ್ದಾರೆ.ಮೋದಿ ಪ್ರಧಾನಿಯಾಗಿರುವುದು ದೇಶದ ಜನರು ಬಹಳ ಋಷಿಯಾಗಲಿದ್ದಾರೆ.ಇ.ವಿ.ಎಮ್ ಕುರಿತು ವಿರೋಧ ಪಕ್ಷ ಈ ಬಾರಿ ಮೌನವಹಿಸಿರುವ ಕಾರಣವೇನು, ಕೆಪಿಸಿಸಿ ಅಧ್ಯಕ್ಷರು ತಮ್ಮನ ಸೋಲಿನಿಂದ ಇ.ವಿ.ಎಮ್.ಕುರಿತು ತಗಾದೆ ತೆಗೆದಿದ್ದಾರೆ.ಕಾರ್ಯಕರ್ತರಿಗೆ, ದೇಶದ ಜನರ ಸೇವೆ ಮಾಡಲು 18ಗಂಟೆ ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ಘೋಷಣೆ ಮಾಡಿದ್ದಾರೆ.ಪ್ರಧಾನಿ ನರೇಂದ್ರಮೋದಿರವರ ಹೆಸರಿನ ಬಲದಿಂದ ನಾನು ಮತ್ತು ಪಿ.ಸಿ.ಮೋಹನ್ ರವರು ಗೆಲುವು ಸಾಧಿಸಲು ಸಾಧ್ಯವಾಗಿದೆ.4ವಿಧಾನಸಭಾ ಕ್ಷೇತ್ರಗಳಾದ ಮಹದೇವಪುರ, ರಾಜಾಜಿನಗರ, ಗಾಂಧಿನಗರ, ಸಿ.ವಿ.ರಾಮನ್ ನಗರ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತಗಳು ಲಭಿಸಿದೆ.ಶೇಕಡ 66ರಷ್ಟು ಮತಗಳು ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಲಭಿಸಿದೆ.ಬೆಂಗಳೂರುನಗರ ಮತದಾರ ನೀಡಿದ ಮತಗಳಿಗೆ ಋಣ ತೀರಿಸುವ, ವಾಪಸ್ಸು ಕೊಡುವ ಕೆಲಸ ಮಾಡಬೇಕು.ಬೆಂಗಳೂರುನಗರ ನಾಲ್ಕು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.ಬೆಂಗಳೂರುನಗರದ ಬಿಜೆಪಿ ಲೋಕಸಭಾ ಸದಸ್ಯರು ಮತ್ತು ಶಾಸಕರು ಪ್ರತಿ ತಿಂಗಳು ಸಭೆ ಮಾಡಿ ಬೆಂಗಳೂರುನಗರ ಸಮಸ್ಯೆ ಪರಿಹಾರ ಮತ್ತು ಯೋಜನೆಗಳು ಕುರಿತು ಸಮಗ್ರ ಯೋಜನೆಗಳ ತಯಾರಿಸಲು ಸಭೆ ನಡೆಸಬೇಕು.ಅಂಬೇಡ್ಕರ್ ಅವರನ್ನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಿಸಿದರು, ಅಂತ್ಯಸಂಸ್ಕಾರಕ್ಕೆ ಜಾಗ ನೀಡದೆ ಅಪಮಾನ ಮಾಡಿದವರು ಕಾಂಗ್ರೆಸ್ ಪಕ್ಷ.ಪ್ರತಯೊಬ್ಬ ಮತದಾರರಿಗೆ, ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಗೆ ಧನ್ಯವಾದಗಳು, ಕೃತಜ್ಞತೆಗಳು.ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ರವರು ಮಾತನಾಡಿ 4ಬಾರಿ ಲೋಕಸಭಾ ಸದಸ್ಯನಾಗಿ ಗೆಲುವು ಸಾಧಿಸಲು ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ.2009ರಲ್ಲಿ ನಾನು ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಮೊದಲ ಚುನಾವಣೆ ಪ್ರಚಾರವನ್ನು ಸುರೇಶ್ ಕುುಮಾರ್ ರವರ ನೇತೃತ್ವದಲ್ಲಿ ಜರುಗಿತು.ಸುರೇಶ್ ಕುಮಾರ್ ರವರು 18ಸಾವಿರ ಮನೆಗಳಿಗೆ ಭೇಟಿ ಮಾಡಿರುವ ಕಾರಣದಿಂದ ನನಗೆ 40ಸಾವಿರ ಅತ್ಯಧಿಕ ಲೀಡ್ ರಾಜಾಜಿನಗರದಲ್ಲಿ ಪಡೆಯಲು ಸಾಧ್ಯವಾಯಿತು.ಸುರೇಶ್ ಕುಮಾರ್ ರವರು ನಾಡಿನ ಉತ್ತಮ ರಾಜಕಾರಣಿಯಾಗಿ ಜನಮನ ಗೆದ್ದಿದ್ದಾರೆ.ಸುರೇಶ್ ಕುಮಾರ್ ರವರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಕೊವಿಡ್ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಿ ದೇಶಕ್ಕೆ ಮಾದರಿಯಾದರು.ಮೂರನೇಯ ಬಾರಿಗೆ ಪ್ರಧಾನಿಯಾಗಿ ನರೇಂದ್ರಮೋದಿರವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ, ಬೆಂಗಳೂರುನಗರದ ಕುರಿತು ಪ್ರಧಾನಿಯವರು ಅಪಾರ ಅಸಕ್ತಿವಹಿಸಿದ್ದಾರೆ.ರಾಜಾಜಿನಗರದ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಹೃತ್ವೂರ್ವಕ ಧನ್ಯವಾದಗಳು ಎಂದು ಹೇಳಿದರು.ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್, ಶ್ರೀಮತಿ ಮಂಜುಳ ವಿಜಯಕುಮಾರ್, ದೀಪಾ ನಾಗೇಶ್, ಪ್ರತಿಮಾರವರು, ಬಿಜೆಪಿ ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್, ಗಿರೀಶ್ ಗೌಡ, ಸತೀಶ್ ಭಗವಾನ್, ಯಶಸ್ ನಾಯಕ್,ರಾಕೇಶ್, ಕಿರಣ್, ಅಮಿತ್ ಜೈನ್, ಕೃಷ್ಣಮೂರ್ತಿ, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.