ಕುಮಟಾ :ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ತಾಲೂಕಿನ ಕಾಗಲದ ನೀಲಾ ಮೋಹನ ಪಟಗಾರ ವಾಸ್ತವ್ಯದ ಮನೆ ಮೇಲೆ ಬಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು ಅದ್ರಷ್ಟವಾಶ ಯಾವುದೇ ಪ್ರಾಣಪಾಯವಾಗಿಲ್ಲ.ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಗ್ರಾಮೀಣ ಭಾಗದ ಮನೆಗಳಿಗೆ ಮರಗಳು ಬಿದ್ದು ಹನಿಯಾಗಿದೆ. ಮತ್ತು ವಿದ್ಯುತ್ ಕಂಬಗಳ ಮೇಲೂ ಮರಗಳು ಬಿದ್ದು ವಿವಿಧ ಭಾಗಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹೆಸ್ಕಾಂ ಸಿಬ್ಬಂದಿಗಳು ಸುರಿಯುತ್ತಿರುವ ಮಳೆಯ ನಡುವೆಯು ದುರಸ್ತಿಗೊಳಿಸಿ ವಿದ್ಯುತ ಕಲ್ಪಿಸಲು ಹರಸಾಹಸಪಟ್ಟರು. ಕೆಲವು ಭಾಗದಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸ್ರಷ್ಟಿಸಿದೆ.