ಕ್ಷರ ವೆಂದರೆ ನಾಶ,ಅಕ್ಷರವೆಂದರೆ ನಾಶವಿಲ್ಲದಿರುವುದು, ಮನುಷ್ಯಕ್ಷರ ಆದರೆ,ಜ್ಞಾನ ಅಕ್ಷರವಾದುದು, ಆ ನಾಶವಿಲ್ಲದ ಜ್ಞಾನ ನಮ್ಮ ಸನಾತನ ಜ್ಞಾನ,ಅಂತಹ ಜ್ಞಾನ ದೇಗುಲ ಜೇಸಿ ಶಾಲೆ,ಯಾರೆಲ್ಲ ಇಲ್ಲಿ ನಿಮ್ಮ ಮಕ್ಕಳನ್ನು ಸೇರಿಸಿದ್ದೀರೋ ಅವರು ಪುಣ್ಯಾತ್ಮರು,ಭಗವದ್ಗೀತೆ, ವಿಷ್ಣು ಸಹಸ್ರನಾಮ ದಂತಹ ಜ್ಞಾನ ಈ ಶಾಲೆಯಲ್ಲಿ ಸಿಗುತ್ತಿರುವುದು ಅದೊಂದು ದೊಡ್ಡ ಪುಣ್ಯದ ಕೆಲಸ,ಈ ಜ್ಞಾನ ಪಡೆದು ನಿಮ್ಮೆಲ್ಲ ಮಕ್ಕಳು ಯಶಸ್ವಿಗಳಾಗಲಿ ಎಂದು ವಿಧ್ವಾನ್ ಶ್ರೀಶ ಭಟ್ಮುದರಂಗಡಿ ಹಾರೈಸಿದರು.ಅವರು ಜೇಸಿ ಆಂಗ್ಲ ಮಾಧ್ಯಮ ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ನೆರವೇರಿಸಿ ಆಶೀರ್ವದಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಂದೀಪನಿ ಶಾಲೆಯ ಸಮಿತಿ ಸದಸ್ಯ ಪ್ರಶಾಂತ್ ರಾವ್ ಮಾತನಾಡಿ ಜೇಸೀಸ್ ಶಾಲೆ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುತ್ತಿದೆ. ಸಂಸ್ಕಾರವಂತ ಮಕ್ಕಳಿಂದ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯ. ನಿಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿ ಸಂಸ್ಕಾರವಂತರಾಗಿಸೋಣ ಎಂದರು.
ವೇದಿಕೆಯಲ್ಲಿ ಜೇಸಿ ಶಾಲೆಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಉಪಾಧ್ಯಕ್ಷ ಶ್ರೀ ಪದ್ಮ ಪ್ರಸಾದ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್ ,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಶಾಂತ ಹೆಗ್ಡೆ, ಸದಸ್ಯ ಜಯಕುಮಾರ್, ಸತ್ಯನಾರಾಯಣ ನಾಯಕ್,ಶ್ರೀಮತಿ ಶುಭ ಉಪಸ್ಥಿತರಿದ್ದರು.ಶಿಕ್ಷಕಿ ಶ್ರೀಮತಿ ಪವಿತ್ರಾ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿಸಹ ಶಿಕ್ಷಕಿ ಶ್ರೀಮತಿ ಸುಕನ್ಯಾ ವಂದಿಸಿದರು.ಶ್ರೀಮತಿ ದಿವ್ಯಾ ಶಂಕರನಾರಾಯಣ ಭಟ್ ಇವರಿಂದ ವೀಣಾವಾದನ ಕಾರ್ಯಕ್ರಮ ಜರುಗಿತು. ತೇಜಸ್ವಿ ತಬಲಾದಲ್ಲಿ ಸಹಕರಿಸಿದ್ದರು.