ಶಾಲೆಗೆ ಬಾ ಚಿನ್ನಾ

ಶಾಲೆಗೆ ಬಾ ಚಿನ್ನಾ

Share

ಓ ಚಿನ್ನಾ ಓ ಚಿನ್ನಾ
ಶಾಲೆಗೆ ಬಾ ಇನ್ನಾ
ಶಾಲೆಯ ಬಾಗಿಲು ತೆರೆದಿದೆ
ಪಠ್ಯ ಪುಸ್ತಕ ಬಂದಿದೆ ||

ಓ ಚಿನ್ನಾ ಓ ಚಿನ್ನಾ
ಶಾಲೆಗೆ ಬಾ ಚೆನ್ನಾ
ಶಾಲೆಯ ಅಂಗಳ ಕರೆದಿದೆ
ಬಾಲೆಯ ಬಟ್ಟೆಯು ಬಂದಿದೆ ||

ಓ ಚಿನ್ನಾ ಓ ಚಿನ್ನಾ
ಶಾಲೆಯ ಕಲಿ ದಿನ್ನಾ
ಬಿ ಸಿ ಊಟವು ಚೆನ್ನಾ
ಅಕ್ಷರ ಅಭ್ಯಾಸ ದಿನ್ನಾ||

ಓ ಚಿನ್ನಾ ಓ ಚಿನ್ನಾ
ಶಾಲೆಯ ಓದುವುದು ಇನ್ನಾ
ಆಟ ಪಾಠವು ಚೆನ್ನಾ
ಶಾಲೆಗೆ ಬಾ ದಿನ್ನಾ||

ಓ ಚಿನ್ನಾ ಓ ಚಿನ್ನಾ
ಸರಕಾರ ಶಾಲೆಯು ಚೆನ್ನಾ
ಶಾಲೆಗೆ ಬಾ ಇನ್ನಾll

ಮಹಾಂತೇಶ ಎನ್ ಪಾಟೀಲ
ಕವಿ ,ಯಾತನೂರ
ಸ,ಹಿ,ಪ್ರಾ,ಶಾಲೆ ರಂಜಣಗಿ ತಾ|| ಜೇವರ್ಗಿ


Share