ಕ್ಷೇತ್ರದ ಜನಗಳ ಕಷ್ಟಕ್ಕೆ ಸ್ಪಂದಿಸುವ ಹೃದಯವಂತ, ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್||TV23KANNADA

ಕ್ಷೇತ್ರದ ಜನಗಳ ಕಷ್ಟಕ್ಕೆ ಸ್ಪಂದಿಸುವ ಹೃದಯವಂತ, ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್||TV23KANNADA

Share

ಸತೀಶ್ ಸೈಲ್ ಎಂದರೆ ಜನರಿಗೆ ಪ್ರೀತಿಪಾತ್ರರಾದ ಶಾಸಕರು. ತಮ್ಮ ಕ್ಷೇತ್ರದ ಪ್ರಜೆಗಳನ್ನು ತಮ್ಮ ಕುಟುಂಬದAತೆ ಕಾಣುವ ಇವರು, ಜನಗಳು ಕಷ್ಟ ಎಂದು ಬಂದರೆ ಅದನ್ನು ಮುಂದೆ ನಿಂತು ಪರಿಹಾರ ಒದಗಿಸುವಲ್ಲಿ ಎಂದೂ ಮುಂದಾದವರು. ಕ್ಷೇತ್ರದ ಅಭಿವೃದ್ಧಿಯಲ್ಲಿ ಅನೇಕ ಕೊಡುಗೆಗಳನ್ನು ನೀಡಿರುತ್ತಾರೆ. “ಸೇತುವೆಗಳ ಸರದಾರ”ನೆಂದು ಬಿರುದು ಹೊಂದಿರುವ ಇವರು ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಅನೇಕ ಹಳ್ಳಿಗಳನ್ನು ಬೆಸೆಯುವ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಳಿಗೂ ಮುಂದಾಗಿರುವ ಇವರು, ಬೃಹತ್ ಪ್ರಮಾಣದಲ್ಲಿ ಅನುದಾನ ನೀಡುವ ಯೋಜನೆಯನ್ನು ಹಮ್ಮಿಕೊಂಡಿರುತ್ತಾರೆ. ಎಲ್ಲಾ ಜನರನ್ನು ಏಕರೂಪಿಯಾಗಿ ಕಾಣುವಂತಹ ದೊಡ್ಡ ಮನಸ್ಸಿನವರು. ತಾವೊಂದು ಶಾಸಕರೆನ್ನುವ ಮೇಲೆಗೈ ತೋರದೇ ಜನ ಸೇವೆಯೇ ಜನಾರ್ಧನನ ಸೇವೆ ಎನ್ನುವ ಮನೋಭಾವ ಹೊಂದಿದವರಾಗಿದ್ದಾರೆ. ಯಾವುದೇ ಕೆಲಸಕೆಂದು ಅವರ ಬಳಿ ಹೋದರು, ಅದಕ್ಕೆ ತಕ್ಷಣ ಸ್ಪಂದನೆಯನ್ನು ನೀಡುತ್ತಾರೆ. ಕ್ಷೇತ್ರದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವ ಮೂಲಕ ಜನರ ಕಾವಲಿಗೆ ನಿಂತ ಕ್ಷೇತ್ರ ಕಂಡ ಧೀಮಂತ ನಾಯಕ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಕಾರವಾರ-ಅಂಕೋಲಾ ಕ್ಷೇತ್ರವನ್ನು ಎಲ್ಲರೂ ಗುರುತಿಸುವಂತೆ ಮಾದರಿ ಕ್ಷೇತ್ರವನ್ನಾಗಿ ಮಾಡಿದ ಹೆಗ್ಗಳಿಕೆ ಕೂಡ ಇವರಿಗಿದೆ.

ಲೇಖನ : ಸೂರಜ ಪಾಂಡುರಂಗ ನಾಯ್ಕ
ಸಿವಿಲ್ ಇಂಜಿನಿಯರ್ (B.E)


Share