ರೈಲು ಕಿಟಕಿಯಿಂದ ಮಹಿಳೆಯ ಮಾಂಗಲ್ಯ ದೋಚಿದ ಕಳ್ಳ

ರೈಲು ಕಿಟಕಿಯಿಂದ ಮಹಿಳೆಯ ಮಾಂಗಲ್ಯ ದೋಚಿದ ಕಳ್ಳ

Share

ಕಲಬುರಗಿ:- ರೈಲಿನಲ್ಲಿ ಪಯಣಿಸುತ್ತಿದ್ದ ಮಹಿಳೆಯ ಚಿನ್ನದ ಮಾಂಗಲ್ಯ ಸರವನ್ನು ಕಳ್ಳ ಕಿತ್ತುಕೊಂಡು ಹೋದ ಘಟನೆ ರವಿವಾರ ಸೋಲಾಪುರ – ಹಾಸನ ಎಕ್ಸ್ ಪ್ರೆಸ್ ರೈಲಿನಲ್ಲಿ ಗುಂತಕಲ್ ರೈಲ್ವೆ ಸ್ಟೇಷನ್‍ನಲ್ಲಿ ನಡೆದಿದೆ.ಅಫಜಲಪುರ ಪುರಸಭೆಯ ಸದಸ್ಯ ರವಿನಂದ ಶೆಟ್ಟಿ ಅವರ ಪತ್ನಿ ಜ್ಯೋತಿ ರವಿನಂದ ಶೆಟ್ಟಿ ಅವರು 10 ಗ್ರಾಂ.ಚಿನ್ನದ ಮಾಂಗಲ್ಯ ಸರ ಕಳೆದು ಕೊಂಡವರು.ಅಫಜಲಪುರ ಪುರಸಭೆಯ ಸದಸ್ಯ ರವಿ ನಂದ ಶೆಟ್ಟಿ ಹಾಗೂ ಪತ್ನಿ ಜ್ಯೋತಿ, ತಮ್ಮ ಮಗನೊಂದಿಗೆ ಕಲಬುರಗಿಯಿಂದ ಸೋಲಾಪುರ – ಹಾಸನ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಘಟನೆ ನಡೆದಿದೆ.ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ರೈಲು ಆಂಧ್ರಪ್ರದೇಶದ ಗುಂತಕಲ್ ಜಂಕ್ಷನ್‍ನಲ್ಲಿ ನಿಂತಾಗ ರೈಲು ಕಿಟಕಿ ಪಕ್ಕದಲ್ಲಿ ಜ್ಯೋತಿ ರವಿ ನಂದಶೆಟ್ಟಿ ಅವರು ನಿದ್ರಿಸ ತೊಡಗಿದ್ದಾರೆ. ಇನ್ನೇನು ರೈಲು ಹೊರಡಬೇಕೆನ್ನುವಷ್ಟರಲ್ಲಿ ಕಳ್ಳ ಕಿಟಕಿಯಿಂದ ಜ್ಯೋತಿ ಅವರ ಚಿನ್ನದ ಮಾಂಗಲ್ಯದ ಸರವನ್ನು ಎಗರಿಸಿದ್ದಾನೆ.ಮಹಿಳೆ ಎಷ್ಟೊಂದು ಅರಚಿದರೂ ಕೈ ಬಿಡದೇ ಕ್ಷಣಾರ್ಧದಲ್ಲೆ ಚಿನ್ನದ ಮಾಂಗಲ್ಯದೊಂದಿಗೆ ಪರಾರಿಯಾಗಿದ್ದಾನೆ.ಜ್ಯೋತಿ ರವಿನಂದ ಶೆಟ್ಟಿ ಅವರ ಕುತ್ತಿಗೆಗೆ ಗಂಭೀರ ಗಾಯಗಳಾಗಿದೆ.ಈ ಕುರಿತು ಗುಂತಕಲ್ ರೈಲ್ವೆ ಪೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ‌ ‌
ವರದಿ-ಡಾ ಎಂ ಬಿ ಹಡಪದ ಸುಗೂರ ಎನ್


Share