ಎಸ್.ಡಿ.ಎಂ.ಸಿ.ಯ.ನೂತನ ಅಧ್ಯಕ್ಷರಾಗಿ ಹೆಚ್ ಗಣೇಶ ಅವಿರೋಧ ಆಯ್ಕೆ||@TV23KANNADA

ಎಸ್.ಡಿ.ಎಂ.ಸಿ.ಯ.ನೂತನ ಅಧ್ಯಕ್ಷರಾಗಿ ಹೆಚ್ ಗಣೇಶ ಅವಿರೋಧ ಆಯ್ಕೆ||@TV23KANNADA

Share

ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲೂಕಿನ ಬಿಎಂ ಸೂಗೂರು ಗ್ರಾಮ ಪಂಚಾಯತಿಯ ನಾಗರಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಎಸ್ ಡಿ ಎಂ ಸಿ ಸಭೆಯನ್ನು ಸೇರಿಸಲಾಯಿತು ಈ ಸಭೆಯ ಮುಖ್ಯ ಅತಿಥಿಗಳಾಗಿ ಹಾಗೂ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿಕೊಂಡಿರುವ ನಾಮ ಬಸವರಾಜ ಶಾಸ್ತ್ರಿಗಳು ಹಾಗೂ ಶಾಲೆಯ ಮುಖ್ಯ ಗುರುಗಳಾದ ದಿವಾಕರ್ ರಾವ್ ಇವರ ಅಧ್ಯಕ್ಷತೆಯಲ್ಲಿ ನಾಗರಹಾವು ಗ್ರಾಮದ ಶಾಲೆಯ ಸರ್ವ ಸದಸ್ಯರ ಸಮ್ಮುಖದಲ್ಲಿ ಎಸ್ ಡಿ ಎಂ ಸಿ ಯ ನೂತನ ಅಧ್ಯಕ್ಷರನ್ನಾಗಿ ಹೆಚ್ ಗಣೇಶ್ ಇವರನ್ನು ಆಯ್ಕೆ ಮಾಡಲಾಯಿತು ಉಪಾಧ್ಯಕ್ಷರನ್ನಾಗಿ ಬಿ ರಾಮಾಂಜನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಗ್ರಾಮದ ಗುರೂ ಹಿರಿಯರನ್ನು ಹಾಗೂ ಗ್ರಾಮ ಪಂಚಾಯಿತಿಯ ಸರ್ವ ಹಾಲಿ ಮಾಜಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಏ ಮಲ್ಲಿಕಾರ್ಜುನ ಇವರನ್ನು ಗೌರವಿಸಿ ಸನ್ಮಾನಿಸಿ ಬೇಡ್ಕೊಡಲಾಯಿತು ನಂತರ ನಾಗರಹಾಳು ಗ್ರಾಮದ ಸರ್ವ ಜನರು ಸೇರಿ ಎಸ್ ಡಿ ಎಂ ಸಿ ನೂತನ ಅಧ್ಯಕ್ಷರಾದ ಹೆಚ್ ಗಣೇಶ್ ಇವರನ್ನು ಸನ್ಮಾನಿಸಲಾಯಿತು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಎಸ್ ಡಿ ಎಂ ಸಿ ನೂತನ ಅಧ್ಯಕ್ಷರಾದ ಹೆಚ್ ಗಣೇಶ್ ಇವರು ಮಾತನಾಡಿ ಶಾಲೆಯ ಏಳಿಗೆಯ ಪರವಾಗಿ ಸರ್ವಾಂಗೀಣ ಅಭಿವೃದ್ಧಿಯ ಸಲುವಾಗಿ ನಾನು ಸತತವಾಗಿ ಮಕ್ಕಳ ವಿದ್ಯಾಭ್ಯಾಸದ ಕುರಿತು ಹೆಚ್ಚಿನ ಶ್ರಮವಹಿಸುತ್ತೇನೆಂದು ಸಾರ್ವಜನಿಕರ ಸಮ್ಮುಖದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು, ಈ ಕಾರ್ಯಕ್ರಮದಲ್ಲಿ ಪಿ ಹುಸೇನಪ್ಪ ನಾಯಕ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು , ಸಿ ಗಿರೀಶ್ ಗೌಡ ಎಪಿಎಂಸಿ ಮಾಜಿ ಅಧ್ಯಕ್ಷರು , ಪೀರಾನ್ಬಿ ಮತ್ತು ಹೊನ್ನೂರ್ ಸಾಬ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಎಸ್‌ಜಿ ಸಿದ್ರಾಮಪ್ಪ ಸಾಹುಕಾರ್ ವಿ ಎಸ್ ಎಸ್ ಎನ್ ಅಧ್ಯಕ್ಷರು, ಪಿ ನಾಗರಾಜ್, ಸಿ ಚನ್ನಬಸವನಗೌಡ, ಪಿಡ್ಯ ನವರ ವೀರೇಶ್, ಹೆಚ್ ಪೂರ್ಣೇಶ,ನಾಗಪ್ಪ, ಕಡಿತೋಟ ಭಾಷಾ ಸಾಬ್, ದಸ್ತಗಿರ್ ಸಾಬ್, ಸಿ ಎಚ್ ಕೆ ಶಪ್ಪ ನಾಯಕ್ ಕಟ್ಟಡ ಕಾರ್ಮಿಕರ ತಾಲೂಕ ಅಧ್ಯಕ್ಷರು, ಎಮ್ ಡಿ ಶೇಕ್ಷಾವಲಿ, ಏ ಚೆನ್ನಬಸವ ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಬೋಲೇ ಹೊನ್ನೂರ್ ಸಾಬ್ ಹಾಗೂ ಗ್ರಾಮದ ಗುರುಹಿರಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಇದೇ ನಾಗರಹಾಳು ಗ್ರಾಮದ ವಿದ್ಯಾರ್ಥಿನಿಯಾದ ಪಿ ಕಾವ್ಯ ಸಿಇಟಿ ಪರೀಕ್ಷೆಯಲ್ಲಿ ಅತ್ಯಧಿಕಾಂಕಗಳನ್ನು ಪಡೆದ ವಿದ್ಯಾರ್ಥಿನಿಗೆ ನಾಗರಹಾಳು ಗ್ರಾಮದ ಶ್ರೀ ಬಸವರಾಜ ಶಾಸ್ತ್ರಿ ಅವರು ಗೌರವಿಸಿ ಸನ್ಮಾನಿಸಿದರು.


Share