ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರ!

ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರ!

Share

ಚಿತ್ತಾಪುರ:ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ.ಸ್ವೀಕರಿಸಿದ ಹಿನ್ನೆಲೆಯಲ್ಲಿ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಬಿಜೆಪಿ ಮಂಡಲದ ಸದಸ್ಯರು,ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸಿದರು.ಗ್ರಾಮದ ಸೇವಾಲಾಲ್ ಮಹಾರಾಜ ಚೌಕದಿಂದ ಮತ್ತು ಬಾಬು ಜಗಜೀವನ್ ರಾಮ್ ಅವರ ಚೌಕದಿಂದ.ರಸ್ತೆಯ ಮೂಲಕ ಕನಕ ದಾಸ್ ಸಂಗೊಳ್ಳಿ ರಾಯಣ್ಣ- ಚೌಕ್ ನ್ ರಸ್ತೆಯಿಂದ,ಹನುಮಾನ್ ದೇವಸ್ಥಾನದ ಮೂಲಕ ಊರ ಅಗಸಿಯಿಂದ ಗ್ರಾಮ ಪ್ರವೇಶಿಸಿ ಶ್ರೀ ಧ್ಯಾವಮ್ಮ ದೇವಸ್ಥಾನದ. ಮುಂದುಗಡೆ ಯೇ ಎಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕುತ್ತಾ ಬಂದು ಶ್ರೀ ಧ್ಯಾವಮ್ಮ ದೇವಸ್ಥಾನದ ಎದುರುಗಡೆಯಲ್ಲಿ ಪಟಾಕಿ ಸುಡುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.ನರೇಂದ್ರ ಮೋದಿ ಜಿ ಕೀ ಜೈ, ಬಿ.ವೈ ವಿಜಯೇಂದ್ರ ಯಡಿಯೂರಪ್ಪ ನವರಿಗೆ ಜಯಘೋಷಣೆ ಹಾಕುತ್ತಾ ಪಟಾಕಿ ಸಿಡಿಸುತ್ತಾ ಸಿಹಿ ತಿಂಡಿ ತಿನಿಸುಗಳು ಹಂಚುವ ಮೂಲಕ ಸಂಭ್ರಮಿಸಲಾಯಿತು, ಈ ಸಂದರ್ಭಗಳಲ್ಲಿ – ಶ್ರೀ ಶರಣಗೌಡ ಪಾಟೀಲ ಬೆನಕನಹಳ್ಳಿ ಸುಗೂರ ಎನ್ ಬಿಜೆಪಿಯ ಹಿರಿಯ ಮುಖಂಡರು, ಮತ್ತು ಮಹೇಶ್ ಪಾಟೀಲ ಸುಗೂರ ಎನ್ ಬಿಜೆಪಿಯ ಹಿರಿಯ ಮುಖಂಡರು, ಶ್ರೀ ಭೀಮರೆಡ್ಡಿ ಗೌಡ ಕುರಾಳ ಸುಗೂರ ಎನ್ ಬಿಜೆಪಿಯ ಯುವ ನಾಯಕರು, ಮತ್ತು ಶರಣಗೌಡ ವಕೀಲರು ಸುಗೂರ ಎನ್, ಬಸ್ಸುಗೌಡ ಮಾಲಿ ಪಾಟೀಲ, ಬಸವರಾಜ ಹಡಪದ ಸುಗೂರ ಎನ್, ಸುಖುದೇವ್ ಚವ್ಹಾಣ, ಹಣಮಂತ ನಾಯ್ಕೊಡಿ, ದೇವೇಂದ್ರ ಸಾಹು ಕುಂಬಾರ, ಯಮನಪ್ಪ ತಳವಾರ, ಸಂಗಣ್ಣ ಸಾಹು ಮಂಡ್ನಳ್ಳಿ, ಸಿದ್ದು ಸಾಹು ಕುಂಬಾರ, ಸಿದ್ದುಗೌಡ ಕುರಾಳ, ರಾಜೇಂದ್ರ ನಾಯ್ಕೊಡಿ , ಈರಪ್ಪ ಗೋಗಿ, ಶಂಕರ ಚವ್ಹಾಣ, ಶಮ್ಮು ನಾಯ್ಕೊಡಿ, ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಸಾಬ್ಬಣ್ಣ ಬೇನಿಗಿಡ್,ಬಾಸುಮೀಯಾ ಬಂಟ್ನಳ್ಳಿ, ಶಿವಕುಮಾರ್ ಹೂಗಾರ, ಅವರು ಸೇರಿದಂತೆ ಅನೇಕ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದರು.


Share