ಗಂಗಾವತಿ: ಕಳೆದ ವಾರದಿಂದ ಗಂಗಾವತಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ನಗರದ ಎಲ್ಲಾ ರಸ್ತೆಗಳು ಹದಗೆಟ್ಟು, ತೆಗ್ಗುಗುಂಡಿಗಳು ಬಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಸ್ತವ್ಯಸ್ತವಾಗಿರುತ್ತದೆ. ಆದರೆ ನಮ್ಮ ಶ್ರೀಮಂತ ಶಾಸಕ ಸಾರ್ವಜನಿಕರ ಬಗ್ಗೆ ಗಮನವಿಲ್ಲದೇ ದೆಹಲಿಗೆ ಹೋಗಿದ್ದು, ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸಿ.ಪಿ.ಐ.ಎಂ.ಎಲ್ ರಾಜ್ಯ ಸ್ಥಾಯಿಸಮಿತಿ ಸದಸ್ಯರಾದ ಭಾರಧ್ವಾಜ್ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಹದಿನೈದು ದಿನಗಳಿಂದ ಮುಂಗಾರು ಚುರುಕಾಗಿದ್ದು, ಸಾಕಷ್ಟು ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಕೊಪ್ಪಳ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಇಂತಹ ಸಂದರ್ಭದಲ್ಲಿ ಮಾನ್ಯ ಶಾಸಕರು ಬೆಂಗಳೂರು, ದೆಹಲಿ ಪ್ರಯಾಣ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಶಾಸಕರು ಶೀಘ್ರವೇ ಎಚ್ಚೆತ್ತುಕೊಂಡು ಗಂಗಾವತಿ ನಗರದಲ್ಲಿ ಹೊಸ ರಸ್ತೆಗಳನು ನಿರ್ಮಾಣ ಮಾಡಿದ್ದರೂ ಚಿಂತೆಯಿಲ್ಲ, ಈಗ ಬಿದ್ದ ತೆಗ್ಗುಗುಂಡಿಗಳನ್ನು ಮುಚ್ಚಿಸಬೇಕಾಗಿದೆ.ಆದರೆ ಶಾಸಕರು ಕಳೆದ ಒಂದು ತಿಂಗಳಿನಿAದ ಗಂಗಾವತಿಯಲ್ಲಿರದೇ, ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸದೇ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವುದು ಗಂಗಾವತಿ ನಾಗರಿಕರಿಗೆ ಮಾಡುತ್ತಿರುವ ದ್ರೋಹವಾಗಿದೆ. ಶಾಸಕರು ಶೀಘ್ರವೇ ಗಂಗಾವತಿಗೆ ಬಂದು ರಸ್ತೆಯಲ್ಲಿ ನಡೆದಾಡಿ ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಿಸದೇ ಇದ್ದರೆ ಆಟೋ ಚಾಲಕರು, ಇನ್ನಿತ ವಾಹನ ಚಾಲಕರು, ಕಾರ್ಮಿಕರು ಗಂಗಾವತಿ ಬಂದ್ ಮಾಡಿ ಪ್ರತಿಭಟಿಸಲಿದ್ದಾರೆ ಎಂದು ಭಾರಧ್ವಾಜ್ ಎಚ್ಚರಿಸಿದ್ದಾರೆ.