ರಕ್ತದಾನ ಮಾನವಿಯತೇಯ ಸಂಕೇತ:ಕೆ.ಪಿ ಸುಚರೀತ ಶೆಟ್ಟಿ

ರಕ್ತದಾನ ಮಾನವಿಯತೇಯ ಸಂಕೇತ:ಕೆ.ಪಿ ಸುಚರೀತ ಶೆಟ್ಟಿ

Share

ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ,ರಕ್ತದಾನದಿಂದ ಒಂದು ಜೀವವನ್ನು ಉಳಿಸಬಹುದು,ರಕ್ತಕ್ಕೆ ಯಾವುದೇ ಜಾತಿ ಧರ್ಮ ಇಲ್ಲ ಅದು ಮಾನವೀಯತೆಯ ಸಂಕೇತ.ಗ್ರಾಮೀಣ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕುಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದರು.
ಅವರು ಸೇವಾ ಭಾರತಿ ಮುಂ ಡ್ಕೂರು ಜೆ ಸಿ ಐ ಭಾರ್ಗವ , ಸಮರ್ಪಿತ ಬಳಗ ಗಾಂಡಪ್ಪು ಹಾಗೂ ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಪ್ರಾದೇಶಿಕ ರಕ್ತಪೂರಣ ಕೇಂದ್ರ ಮಂಗಳೂರು ಇವರ ಸಹಯೋಗದೊಂದಿಗೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೊಸ್ರಾಲ್ ಇಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಜೆ ಸಿ ಐ ಮುಂಡ್ಕೂರು ಬಾರ್ಗವ ಅದ್ಯಕ್ಷ ಗಣೇಶ್ ಅರ್ಚಾಯ ಸಭೆಯ ಅದ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ನಿವ್ರತ್ತ ಶಿಕ್ಷಕ ಸಾಯಿನಾಥ್ ಶೆಟ್ಟಿ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತಪೂರಣ ವಿಭಾಗದ ತಾಂತ್ರಿಕ ಮುಖ್ಯಸ್ಥ ಅಶೋಕ್ ನಾಯಕ್, ಜೆಸಿಐ ವಲಯಧಿಕಾರಿ ಮಾಲತಿ , ಮುಂಡ್ಕೂರು ವ್ಯ.ಸೇ ಸ. ಸಂಘದ ಪ್ರಬಂಧಕ ಅರುಣ್ ರಾವ್,ಜೇಸಿ ಪ್ರಶಾಂತ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಪೂಜಾರಿ ,ಚೇತನ್ ಕುಂಟಾಡಿ,ಗಾಂದಡ್ಪು ಸಮರ್ಪತ ಬಳಗ ಅಧ್ಯಕ್ಷ ವಸಂಗ್ರಹವಾಯಿತುಾರಿ ಉದಯ ಪೂಜಾರಿ ಮುಂಡ್ಕೂರು ಮುಕೇಶ್ ಗರೋಡಿ ಸುನಿಲ್ ಶೆಟ್ಟಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳನ್ನು ಗೌರವಿಸಲಾಯಿತು. ಜೆಸಿ ಸುರೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು ಶಿಬಿರದಲ್ಲಿ 65 ಯುನಿಟ್ ರಕ್ತ ಸಂಗ್ರಹವಾಯಿತು.


Share