ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಕಾರ್ಕಳ ಇದರ 2024 25 ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಸಾರ್ವತ್ರಿಕ ಚುನಾವಣೆಯು ನಡೆಯಿತು. ಈ ಚುನಾವಣೆಯಲ್ಲಿ ಎರಡು ವಿದ್ಯಾರ್ಥಿ ಪ್ರಮುಖ ಪಕ್ಷಗಳಾದ ಎಸ್ ಆರ್ ಪಿ (ಸ್ಟುಡೆಂಟ್ಸ್ ರಿಪಬ್ಲಿಕ್ ಪಾರ್ಟಿ) ಹಾಗೂ ಎಸ್ ಡಬ್ಲ್ಯೂ ಪಿ (ಸ್ಟುಡೆಂಟ್ಸ್ ವೆಲ್ಫೇರ್ ಪಾರ್ಟಿ) ಕಣದಲ್ಲಿ ಸ್ಫರ್ಧಿಸಿತ್ತು. ಎರಡು ಪಕ್ಷಗಳಿಂದ ತಲಾ 6 ಕ್ಷೇತ್ರಗಳಲ್ಲಿ ಹನ್ನೆರಡು ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದರು.ಮಾದರಿ ಚುನಾವಣೆಯಂತೆ ಮತದಾನ ನಡೆದು ಬಳಿಕ ಮತ ಎಣಿಕೆಯಲ್ಲಿ ಎರಡು ಪ್ರಮುಖ ಪಕ್ಷಗಳಲ್ಲಿ ಪೈಪೋಟಿ ಕಂಡು ಬಂದರೂ ಕೊನೆಯ ಕ್ಷಣದಲ್ಲಿ ಫಲಿತಾಂಶ ದಂತೆ ಸ್ಟೂಡೆಂಟ್ಸ್ ರಿಪಬ್ಲಿಕ್ ಪಕ್ಷವು ರೋಚಕ ಜಯ ಗಳಿಸಿ ಬಹುಮತದೊಂದಿಗೆ ಆಡಳಿತರೂಢ ಪಾರ್ಟಿಯಾಗಿ ಆಯ್ಕೆಯಾಯಿತು. ಸ್ಟೂಡೆಂಟ್ಸ್ ವೆಲ್ಫೇರ್ ಪಕ್ಸವು ಪ್ರತಿಫಕ್ಷವಾಗಿ ಹೊರಹೊಮ್ಮಿತು. ಮುಂದಿನ ವಾರ ಮಂತ್ರಿ ಮಂಡಲದ ರಚನೆ ನಡೆಯಲಿದೆ. ಈ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯ ಸಿಬ್ಬಂದಿಗಳಾಗಿ ಸೆಕ್ಟರ್ ಆಫೀಸರ್ ಪೊಲೀಸ್ ಅಧಿಕಾರಿ ಅಧ್ಯಕ್ಷ ಅಧಿಕಾರಿ ಪೋಲಿಂಗ್.ಅಧಿಕಾರಿ ಬಿ ಎಲ್ ಒ ಗಳಾಗಿ ನೇಮಕ ಮಾಡಿ ಮತಗಟ್ಟೆ ತೆರೆದು ವಿದ್ಯಾರ್ಥಿಗಳೇ.ಚುನಾವಣಾ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.ಈ ಸಾರ್ವತ್ರಿಕ ವಿದ್ಯಾರ್ಥಿ ಸಂಸತ್ತು ಚುನಾವಣೆಗೆ ಚುನಾವಣಾ ದಿನಾಂಕ ಘೋಷಣೆಯಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿ ಚುನಾವಣಾ ದಿನಾಂಕದಂದು ಎಲ್ಲಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ವಿದ್ಯಾರ್ಥಿಗಳು ಗೈರು ಹಾಜರಿಯಾಗದೇ ತಮ್ಮ ತಮ್ಮ ಮತ ಚಲಾಯಿಸಿದರು. ಚುನಾವಣಾ ಕರ್ತವ್ಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರು ವಿಶೇಷ ತರಬೇತಿ ನೀಡಿ ಮತದಾನ ದಿನದಲ್ಲಿ ತಮ್ಮ ತಮ್ಮ ಕರ್ತವ್ಯಗಳನ್ನು ಪರಿಚಯಿಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕ ಆರ್ ನಾರಾಯಣ ಶೆಣೈಯವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಮುಖ್ಯವಾಗಿ ಭವಿಷ್ಯದ ಮತದಾರರಾದ ಇಂದಿನ ವಿದ್ಯಾರ್ಥಿಗಳು ದೇಶದ ರಾಜ್ಯ ದ ಪ್ರತೀ ಚುನಾವಣೆಯ ಗಂಭೀರ ತೆಯನ್ನು ಪಾರದರ್ಶಕತೆಯನ್ನು ಮತದಾನ ಪಾವಿತ್ರ್ಯತೆಯನ್ನು ಹಾಗೆಯೇ ಅರ್ಹರಿಗೆ ಮತ ಚಲಾಯಿಸುವ ಹಕ್ಕು ಮತ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಹಾಗೂ ಉತ್ತಮ ನಾಯಕತ್ವ ಗುಣವನ್ನು ಬೆಳೆಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಚುನಾವಣೆಯನ್ನು ನಡೆಸಲಾಯಿತು.
ಒಟ್ಟಿನಲ್ಲಿ ಶಾಲಾ ಮುಖ್ಯ ಶಿಕ್ಷಕ ಆರ್ ನಾರಾಯಣ ಶೆಣೈಯರ ಮಾರ್ಗದರ್ಶನದಲ್ಲಿ ಸಹ ಶಿಕ್ಷಕ ಬಂಧುಗಳ ಸಹಕಾರದಲ್ಲಿ ಚುನಾವಣೆ ನಡೆದು ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆ ಮತ್ತು ಅದರ ಮಹತ್ವವನ್ನು ಅರಿತರು. ಈ ಅರಿವು ಮೂಡಿಸುವ ವಿದ್ಯಾರ್ಥಿ ಸಂಸತ್ತಿನ ಚುನಾವಣಾ ಬಗ್ಗೆ ಶಾಲಾ ಆಡಳಿತ ಮಂಡಳಿಹಾಗೂ ಮಕ್ಕಳ.ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.