ಬಿಳಿಕೆರೆ ಪೊಲೀಸರ ಕಾರ್ಯಾಚರಣೆ… ಇಬ್ಬರು ಮನೆಗಳ್ಳರ ಬಂಧನ…ನಗದು,ಚುನ್ನಾಭರಣ ವಶ…
(ಕಳ್ಳತನ ಮಾಡಲು ಬಳಸಿದ ಮಹಿಂದ್ರಾ ಜೀತೋ ವಾಹನದ ಜೊತೆಗೆ 1.27.400/- ರೂ ನಗದು ಹಣ ಮತ್ತು 1.40.000/- ರೂ ಮೌಲ್ಯದ ಚಿನ್ನಾಭರಣ ವಶ)
ಹುಣಸೂರು ತಾಲೂಕಿನ ಧರ್ಮಾಪುರ ಗ್ರಾಮದ ರಾಮೇಗೌಡ ಎಂಬುವರ ವಾಸದ ಮನೆಯಲ್ಲಿ ಹಾಡ ಹಗಲೇ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬಿಳಿಕೆರೆ ಕ್ರೈಂ ಪೊಲೀಸರ ತಂಡ ಯಶಸ್ವಿಯಾಗಿದೆ. ಮಂಜುನಾಥ್ ಹಾಗೂ ಸೂರ್ಯ ಬಂಧಿತ ಆರೋಪಿಗಳು.ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಮಹೂಂದ್ರ ವಾಹನ 1,27,000/- ನಗದು ಹಾಗೂ 1,40,000/- ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಖದೋಮರು ತಮ್ಮ ಕೈಚಳಕ ತೋರಿ 3 ಲಕ್ಷ ನಗದು ಹಣ ಮತ್ತು ಸುಮಾರು 35 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೈಸೂರು ಜಿಲ್ಲಾ ಎಸ್.ಪಿ ಸೀಮಾ ಲಾಟ್ಕರ್, ಅಡಿಷನಲ್ ಎಸ್.ಪಿ ನಂದಿನಿ ಹಾಗೂ ನಾಗೇಶ್ ರವರುಗಳು ಹುಣಸೂರು ಉಪ ವಿಭಾಗದ ಡಿ.ವೈ.ಎಸ್.ಪಿ ಗೋಪಾಲಕೃಷ್ಣ ರವರ ಮಾರ್ಗದರ್ಶನದಲ್ಲಿ ಬಿಳಿಕೆರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲೋಲಾಕ್ಷಿ.ಟಿ.ಎಸ್ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. 09.06.2024 ರ ಭಾನುವಾರದಂದು ಖಚಿತ ಮಾಹಿತಿ ಮೇರೆಗೆ ಈ ತಂಡವು ಇಬ್ಬರು ಮನೆಗಳ್ಳರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಉದ್ದೂರು ಗ್ರಾಮದ ಅಜಯ್.ಎಂಬಾತ ತಲೆ ಮರೆಸಿಕೊಂಡಿರುತ್ತಾನೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಬಿಳಿಕೆರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲೋಲಾಕ್ಷಿ.ಟಿ.ಎಸ್ ರವರ ನೇತೃತ್ವದ ಈ ತಂಡದಲ್ಲಿ ಕ್ರೈಂ ಸಬ್ ಇನ್ಸ್ಪೆಕ್ಟರ್ ನಾಗೇಶ್.ಎನ್, ಸಿಬ್ಬಂದಿಗಳಾದ ಪ್ರಸಾದ್ ಧರ್ಮಾಪುರ, ಪ್ರತಾಪ್, ಶಿವಕುಮಾರ ಹಾಗೂ ಜೀಪ್ ಚಾಲಕ ಗೋವಿಂದರಾಜು ರವರುಗಳು ಕಾರ್ಯ ನಿರ್ವಹಿಸಿದ್ದು, ತಂಡದ ಈ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ…
ಮಂಜುನಾಥ ಸೂರ್ಯ