ಹಗ್ಗದ ಸಹಾಯದಿಂದ ವರವಿ ಗ್ರಾಮಸ್ಥರ ರಕ್ಷಣೆ..

ಹಗ್ಗದ ಸಹಾಯದಿಂದ ವರವಿ ಗ್ರಾಮಸ್ಥರ ರಕ್ಷಣೆ..

Share

ಯಡ್ರಾಮಿ:ತಾಲೂಕಿನ ವರವಿ ಗ್ರಾಮದ ರೈತರು ಹಾಗೂ ಮಹಿಳೆಯರು ಜಮೀನೂ ಬಿತ್ತನೆಗೆ ಹೋದವರು.ಹಳ್ಳದಲ್ಲಿ ಸಿಲುಕಿಕೊಂಡ ಮನೆಗೆ ಬಾರದೆ ಪರದಾಟ ಪರದಾಡುವಂತ ಘಟನೆ ಜರುಗಿದೆ.ಉತ್ತಮ ಮುಂಗಾರು ಮಳೆಯಾಗಿದೆ ಎಂದು ರೈತರು ಹರ್ಷದಿಂದ ಜಮೀನೂ ಬಿತ್ತನೆ ತೆರಳಿದ ರೈತರಿಗೆ ಮಳೆಯಿಂದ ಎಲ್ಲಾ ಹಳ್ಳಗಳು ತುಂಬಿ ಹರಿಯತ್ತಿದ್ದ ಪರಿಣಾಮ.ಮನೆಗೆ ಬಾರದೆ ಮಳೆಯಲ್ಲಿಯೇ ನಿಂತು ಕಾಯುವಂತ ಪರಸ್ಥಿತಿ ನಿರ್ಮಣವಾಗಿತ್ತು.ಗ್ರಾಮದ ಜನರು ಸೇರಿಕೊಂಡು ಹಳ್ಳಕ್ಕೆ ಚೈನ್ ಮೂಲಕ ಸರಪಳಿ ಮಾಡಿಕೊಂಡು ಹಗ್ಗದ ಸಾಹಾಯದಿಂದ ರಕ್ಷಣೆ ಮಾಡಿದ್ದು ಕಂಡು ಬಂದಿದೆ.ವರವಿ ಗ್ರಾಮದ ಎಲ್ಲಾ ಜಮೀನೂಗಳು ಕುಕನೂರ ಮತ್ತು ಬೆಣ್ಣೂರು ಗ್ರಾಮಕ್ಕೆ ಹೋಗುವ ಕಾಲು ದಾರಿಗಳಲ್ಲಿ ಜಮೀನೂಗಳು ಇದ್ದು.ಎರಡೂ ಕಾಲ ದಾರಿಗಳಿಗೆ ಹಳ್ಳಗಳು ಇದ್ದ ಪರಿಣಾಮ ಮಳೆಗಾಲ ಬಂದರೆ ಸಾಕು ಜಮೀನಿಗೆ ಹೋಗಲು ರೈತರು ಪರದಾಡಬೇಕು.ಹಲವಾರು ಬಾರಿ ನಮ್ಮ ಕ್ಷೇತ್ರದ ಶಾಸಕರಿಗೆ ಹಾಗೂ ತಾಲೂಕು ಆಡಳಿತಕ್ಕೆ ಹಾಗೂ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಅಳಲು ತೊಂಡಿಕೊಂಡರು.ಕ್ಷೇತ್ರದ ಶಾಸಕರಾದ ಅಜಯಸಿಂಗ್ ಅವರು ಗೆದ್ದು ಹೋದರೆ ಮತ್ತೇ ಗ್ರಾಮಕ್ಕೆ ಬರಬೇಕು ಅಂದ್ರೆ ಐದು ವರ್ಷಗಳು ಬೇಕು.ನಮ್ಮ ಗ್ರಾಮಕ್ಕೆ ಹಿಂತಹ ಪರಸ್ಥಿತಿ ನಿರ್ಮಾಣವಾದರು ಕೂಡ ಶಾಸಕರು ಮತ್ತು ತಾಲೂಕು ಆಡಳಿತ ಹೀಗೆ ಮುಂದುವರಿದರೆ.ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕ್ಕೆ ನೀಡಿದ್ದಾರೆ.
ಹೇಳಿಕೆ:ಪ್ರತಿ ವರ್ಷ ಮಳೆಗಾಲ ಬಂದ್ರೆ ಜಮೀನುಗಳಿಗೆ ಹೋಗಲು ಪರದಾಟ ಮಾಡಬೇಕಾಗಿದೆ.ಮುಂದೆಯಾದರು ಶಾಸಕರು ನಮ್ಮ ವರವಿ ಗ್ರಾಮದ ಹಳ್ಳಕ್ಕೆ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಿ ರೈತರಿಗೆ ಅನುಕೂಲ ಮಾಡಿಕೋಡಬೇಕು.ರಾಜು ಹೊಸಮನಿ ವರವಿ ಗ್ರಾಮದ ನಿವಾಸಿ.


Share