“ನನ್ನ ಗೆಲುವು ಪ್ರತಿಯೊಬ್ಬ ಕಾರ್ಯಕರ್ತನ ಪರಿಶ್ರಮದ ಗೆಲುವು”

“ನನ್ನ ಗೆಲುವು ಪ್ರತಿಯೊಬ್ಬ ಕಾರ್ಯಕರ್ತನ ಪರಿಶ್ರಮದ ಗೆಲುವು”

Share

ಭಾರತೀಯ ಜನತಾ ಪಕ್ಷ ಹೊಸನಗರ ಮಂಡಲ ಇಂದು ಪಟ್ಟಣದ ಈಡಿಗರ ಭವನದಲ್ಲಿ ಲೋಕಸಭಾ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗೆ ಸರಿಸಿ ಸಮಯದ ಮಿತಿಯಿಲ್ಲದೇ ಅವಿರತವಾಗಿ ಶ್ರಮಿಸಿ ಅಭೂತಪೂರ್ವ ಗೆಲುವಿನಲ್ಲಿ ಕಾರಣಿಭೂತರಾದ ದೈವದುರ್ಲಭ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ “ಕೃತಜ್ಞತಾ ಸಮಾರಂಭ” ಹಾಗೂ ನೂತನ ಸದಸ್ಯರಿಗೆ “ಅಭಿನಂದನಾ ಸಮಾರಂಭ” ದಲ್ಲಿ ಪಾಲ್ಗೊಂಡು ದೀಪ ಪ್ರಜ್ವಲಿಸಿ ನೆರೆದಿದ್ದ ಸಾವಿರ ಸಾವಿರ ಸಂಖ್ಯೆಯ ಆತ್ಮೀಯ ಕಾರ್ಯಕರ್ತರ ಮುಂದೆ ಮನದ ಮಾತನ್ನು ತೆರೆದಿಡಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಮೇಘರಾಜ್ ಅವರು, ಶ್ರೀ ಧನಂಜಯ ಸರ್ಜಿ ಅವರು, ಶ್ರೀ ಸ್ವಾಮಿರಾವ್ ಅವರು, ಶ್ರೀ ಹರತಾಳು ಹಾಲಪ್ಪ ಅವರು, ಶ್ರೀ ಗಣಪತಿ ಬೆಳಗೋಡು ಅವರು, ಶ್ರೀ ಪ್ರಶಾಂತ್ ಅವರು, ಶ್ರೀಮತಿ ಗಾಯತ್ರಿ ದೇವಿ ಮಲ್ಲಪ್ಪ ಅವರು, ಶ್ರೀ ದೇವಾನಂದ್ ಅವರು, ಶ್ರೀ ಆಲವಳ್ಳಿ ವೀರೇಶ್ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


Share