ಡಿಸಿ ವಿರುದ್ಧ ಇಡಿಗೇ ದೂರು. ಗಣಿ ಅಧಿಕಾರಿ ವಿರುದ್ಧವೂ ದೂರು. ಮರಳು ಅಕ್ರಮ ಭ್ರಷ್ಟಾಚಾರ ಸರ್ಕಾರಕ್ಕೆ ವಂಚನೆ. ಬೇನಾಮಿ ವಹಿವಾಟು ಆರೋಪ.

ಡಿಸಿ ವಿರುದ್ಧ ಇಡಿಗೇ ದೂರು. ಗಣಿ ಅಧಿಕಾರಿ ವಿರುದ್ಧವೂ ದೂರು. ಮರಳು ಅಕ್ರಮ ಭ್ರಷ್ಟಾಚಾರ ಸರ್ಕಾರಕ್ಕೆ ವಂಚನೆ. ಬೇನಾಮಿ ವಹಿವಾಟು ಆರೋಪ.

Share

ದೇವದುರ್ಗ ತಾಲೂಕಿನ ವ್ಯಾಪ್ತಿಯ 12 ಗ್ರಾಮಗಳ18 ಸ್ಥಳಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಭ್ರಷ್ಟಾಚಾರ ಮತ್ತು ವಂಚನೆ ಬೇನಾಮಿ ಹಣದ ವಹಿವಾಟು ನಡೆಸುತ್ತಿರುವ ಜಿಲ್ಲಾ ಮರಳು ಸಮಿತಿ ಅಧ್ಯಕ್ಷ ಜಿಲ್ಲಾಧಿಕಾರಿಗಳು ಆಗಿರುವ ಚಂದ್ರಶೇಖರ್ ನಾಯಕ್ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಆಗಿರುವ ಪುಷ್ಪಲತಾ ಅವರ ವಿರುದ್ಧ ರಾಯಲ್ಟಿ ವಂಚನೆ ಮತ್ತು ಬೆನಾಮಿ ಹಣದ ವಹಿವಾಟು ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಜಾರಿ ನಿರ್ದೇಶನಾಲಯಕ್ಕೆ (ಇಡಿ)ಗೆ ದೂರು ದಾಖಲಿಸಲಾಗಿದೆ ಬೆಂಗಳೂರು ದಕ್ಷಿಣ ವಲಯ ಕಚೇರಿ ಜಾರಿ ನಿರ್ದೇಶನಾಲಯ ಜಂಟಿ ನಿರ್ದೇಶಕರಿಗೆ ಸಾಮಾಜಿಕ ಹೋರಾಟಗಾರ ಶರಣಪ್ಪ ರೆಡ್ಡಿ ಲಕಣಾಪುರ್ ಅವರು ದೂರು ದಾಖಲಿಸಿದ್ದಾರೆ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಹಾಗೂ ಗಣಿ ಇಲಾಖೆಯ ಹಿರಿಯ ಅಧಿಕಾರಿ ಪುಷ್ಪಲತಾ ವಿರುದ್ಧ ದೂರು ನೀಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಉಳಿದಂತೆ ಜಿಲ್ಲೆಯ ಮಾನವಿ ಹಾಗೂ ಸಿಂಧನೂರು ತಾಲೂಕ ವ್ಯಾಪ್ತಿಯ ತುಂಗಾ ನದಿಯ ಪಾತ್ರದಲ್ಲೂ ಸಹಿತ ಈ ಇಬ್ಬರು ಅಧಿಕಾರಿಗಳೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಕಳೆದ ಒಂದು ವರ್ಷದಿಂದ ಸರ್ಕಾರದ ಬೊಕ್ಕಸಕ್ಕೆ 100 ಕೋಟಿಗು ಅಧಿಕ ರಾಯದನ ವಂಚನೆ ಮಾಡಲಾಗಿದ್ದು ಇದು ಜಿಲ್ಲೆಯ ಬಹುಕೋಟಿ ಹಗರಣ ಎಂದು ತಿಳಿಸಿರುವ ದೂರುದಾರರು ದೇವದುರ್ಗ ತಾಲೂಕಿನ 12 ಗ್ರಾಮಗಳ 1ಲಿಂಗದಹಳ್ಳಿಯಲ್ಲಿ ಮತ್ತು 2ಬಾಗುರಿನಲ್ಲಿ 3 ನಿಲುವಂಜಿ4 ಅಂಜಾಳ 5 ಗೋಪಾಳಪುರ್ 5 ಜೋಳದಡಗಿ6 ಬೆಣಕಲ್ಲ7 ಪರತಾಪುರ್ 8 ಚಿಕ್ಕರಾಯನಕುಂಪಿ9 ಹಿರಿಯರಾಯ ಕುಂಪಿ10 ಒಟ್ಟು 18 ಸ್ಥಳಗಳಲ್ಲಿ ಅಕ್ರಮ ಮರಳು ಬ್ಲಾಕ್ ಗಳ ಮೂಲಕ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಳನ್ನು ರಾಯಲ್ಟಿ ಮೂಲಕ ವಂಚಿಸಿ ಸಾಗಿಸಲಾಗುತ್ತಿದೆ ಪ್ರತಿ ಬ್ಲಾಕ್ ನಿಂದ ಜಿಲ್ಲಾಧಿಕಾರಿಗೆ ಹಾಗೂ ಗಣಿ ಅಧಿಕಾರಿಗೆ ತಲಾ 10 ಲಕ್ಷ ರೂಪಾಯಿಗಳನ್ನು ಲಂಚದ ರೂಪದಲ್ಲಿ ನೀಡಲಾಗುತ್ತಿದೆ ಮಾಸಿಕ ಈ ಇಬ್ಬರು ಅಧಿಕಾರಿಗಳಿಗೆ ಅಂದಾಜು ಎರಡು ಕೋಟಿ ರೂಪಾಯಿ ಲಂಚದ ರೂಪದಲ್ಲಿ ಸಂದಾಯವಾಗುತ್ತಿದೆ ಪ್ರತಿ ತಿಂಗಳು ಈ ಬ್ಲಾಕ್ ನಲ್ಲಿ ಅಂದಾಜು 30 ಕೋಟಿಗೂ ಅಧಿಕ ಮೌಲ್ಯದ ಮರಳು ಸಾಗಣೆ ನಡೆಯುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಪಟ್ಟಾ ಜಮೀನಿನಲ್ಲಿ ಮರಳು ತೆಗೆಯಲು ಅನುಮತಿ ನೀಡಲಾಗಿದೆ ಆದರೆ ಜಮೀನಿನಲ್ಲಿ ಸಂಗ್ರಹ ಮಾಡುವ ಮರಳು ನದಿಯಿಂದ ತಂದಿದ್ದೇವೆ ಎಂದು ಹೇಳುತ್ತಿದ್ದಾರೆ ಡಿಸಿ ಹಾಗೂ ಗಣಿ ಅಧಿಕಾರಿಯಿಂದ ಪರಿಸರ ನಾಶವಾಗುತ್ತಿದೆ ಎಂದು ತಿಳಿಸಿದ್ದಾರೆ ಪ್ರತಿ ಜೂನ್ ನಿಂದ ಅಕ್ಟೋಬರ್ 15 ರ ವರೆಗೂ ನದಿಯಲ್ಲಿ ಮರಳು ಗಣಿಗಾರಿಕೆಗೆ ನಿಷೇದವಿದೆ ಹಾಗೂ ಹಸಿರು ಪೀಠ ಆದೇಶಧನ್ವಯ ನದಿಯಲ್ಲಿ ಯಂತ್ರಗಳನ್ನು ಬಳಸಿ ಮರಳು ಸಂಗ್ರಹಿಸಲು ನಿಷೇಧವಿದ್ದರೂ ನಿಯಮ ಉಲ್ಲಂಸಿ ಮರಳನ್ನು ನದಿಯಿಂದ ತೆಗೆಯಲಾಗುತ್ತಿದೆ ಆದರೆ ಜಿಲ್ಲಾಧಿಕಾರಿಗಳು ಮಾತ್ರ ಯಾವುದೇ ಕ್ರಮ ಜರುಗಿಸಲು ಮುಂದಾಗಿಲ್ಲ ಎಂದು ತಿಳಿಸಲಾಗಿದೆ ನಿಯಮನುಸಾರ ಮರಳು ಸಮರ್ಪಕ ವಿಲೇವಾರಿಗೆ ಜಿಲ್ಲಾಧಿಕಾರಿಗಳು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಆಯೋಜಿಸಿರುವದರಿಂದ ಪ್ರತಿ ತಿಂಗಳು ತೆಗೆದ ಹಾಗೂ ಸಾಧಿಸಿದ ಮರಳಿನ ಪ್ರಮಾಣ ಮತ್ತು ಪ್ರಕಟಣೆ, ಹೊರಡಿಸಿರುವದಿಲ್ಲ ಮೂರು ಜನರ ಮರಳು ಸಮಿತಿ ಮಾಡಿರುವುದಿಲ್ಲ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ದಂದೆಕೂರರಿಗೆ ಇಲ್ಲಿನ ಅಧಿಕಾರಿಗಳೇ ಶ್ರೀರಕ್ಷೆ ಕೊಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಶರಣಪ್ಪ ರೆಡ್ಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ


Share